ETV Bharat / state

ಬ್ರಾಹ್ಮಣರು ವಿದ್ಯೆ ಕಲಿಸದೇ ಇರ್ತಿದ್ರೆ ನಾವೆಲ್ಲ ಹೆಬ್ಬೆಟ್ಟುಗಳಾಗಿ ಇರ್ತಿದ್ವಿ: ಸಚಿವ ಮುನಿರತ್ನ - ಈಟಿವಿ ಭಾರತ ಕನ್ನಡ

ಬ್ರಾಹ್ಮಣ ಸಿಎಂ ವಿಚಾರವಾಗಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ​ ಹೇಳಿಕೆಗೆ ಸಚಿವ ಮುನಿರತ್ನ ಆಕ್ರೋಶ ಹೊರಹಾಕಿದರು.

ಸಚಿವ ಮುನಿರತ್ನ
ಸಚಿವ ಮುನಿರತ್ನ
author img

By

Published : Feb 9, 2023, 9:36 PM IST

ಕೋಲಾರ: ಬ್ರಾಹ್ಮಣ ಸಮುದಾಯ ಅಂದು ವಿದ್ಯಾಭ್ಯಾಸ ಮಾಡಿ, ನಮಗೆ ವಿದ್ಯೆ ಕಲಿಸಿಲ್ಲ ಎಂದಿದ್ದರೆ ನಾವೆಲ್ಲಾ ಇಂದು ಹೆಬ್ಬೆಟ್ಟುಗಳಾಗಿ ಇರುತ್ತಿದ್ದೆವು. ವಿದ್ಯೆ ಕಲಿಸಿದ್ದಕ್ಕೆ ಅವರ ವಿರುದ್ಧವೇ ಮಾತನಾಡುವಂತಾಗಿದೆ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಿಜೆಪಿ ಎಸ್ಸಿ ಮೋರ್ಚಾ ಸಮಾವೇಶದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೆಲ್ಲಾ ಭೂಮಿ ಮೇಲೆ ಒಟ್ಟಿಗೆ ವಾಸ ಮಾಡ್ತಿದ್ದೇವೆ. ಬ್ರಾಹ್ಮಣ ಸಮುದಾಯ ಯಾರ ಮನಸ್ಸೂ ನೋಯಿಸಿಲ್ಲ ಎಂದರು. ಇದೇ ವೇಳೆ, ಬ್ರಾಹ್ಮಣರು ಸಿಎಂ ಆಗಬಾರದು ಎಂದೇನಿಲ್ಲ. ಹೆಚ್​ಡಿಕೆ ಒಂದು ಸಮುದಾಯದ ಬಗ್ಗೆ ಮಾತನಾಡಬಾರದಿತ್ತು. ಬ್ರಾಹ್ಮಣ ಸಮುದಾಯದ ಬಗ್ಗೆ ಮಾತನಾಡಿದ್ದು ಇದೇ ಮೊದಲಲ್ಲ. 1994 ರಲ್ಲೂ ರಾಮಕೃಷ್ಣ ಹೆಗಡೆಯವರು ಇದನ್ನು ಪ್ರಸ್ತಾಪಿಸಿದ್ದರು. ಇವತ್ತು ಅದೇ ಮುಂದುವರೆಯುತ್ತಿದೆ ಎಂದರು.

ಯಾರಾದರು ತಪ್ಪು ಮಾಡಿದರೆ ತಿದ್ದುವ ಪ್ರಯತ್ನ ಬ್ರಾಹ್ಮಣ ಸಮಾಜ ಮಾಡುತ್ತಿದೆ. ರಾಜಕಾರಣಕ್ಕಾಗಿ ಜಾತಿ ಅಡ್ಡ ಇಟ್ಟು ರಾಜಕೀಯ ಮಾಡಬಾರದು. ಪ್ರಹ್ಲಾದ್ ಜೋಶಿಯವರಿಗೆ ಸಿಎಂ ಆಗುವ ಯೋಗ ಇದ್ದರೆ ಸಿಎಂ ಆಗ್ತಾರೆ. ಅವರು ಕೂಡಾ ಈ ದೇಶದ ಪ್ರಜೆಯೇ ಎಂದು ಹೇಳಿದರು.

ಇನ್ನು, ಹೈಕಮಾಂಡ್ ಸ್ಪರ್ಧೆ ಮಾಡು ಎಂದು ಸೂಚನೆ ನೀಡಿದರೆ ನಾನು 224 ಕ್ಷೇತ್ರಗಳ ಪೈಕಿ ಯಾವುದೇ ಕ್ಷೇತ್ರದಲ್ಲಿ ಬೇಕಾದರೂ ಸ್ಪರ್ಧೆ ಮಾಡುತ್ತೇನೆ. ಸಿದ್ದರಾಮಯ್ಯ ಅವರನ್ನು ಹಾಳು ಮಾಡಲು ಕೋಲಾರಕ್ಕೆ ಕರೆ ತರಲಾಗುತ್ತಿದೆ. ಇಲ್ಲಿರುವ ಕೆಲವರು ಸೋಲುವ ಭೀತಿ ಇದೆ. ಅದಕ್ಕಾಗಿ ಸೋಲುವ ನಾಯಕರ ಊರುಗೋಲಾಗಿ ಅವರನ್ನು ಕರೆತರುತ್ತಿದ್ದಾರೆ. ಸಿದ್ದರಾಮಯ್ಯ ತಮ್ಮ ಕೊನೇಯ ಚುನಾವಣೆಯನ್ನು ಚಾಮುಂಡೇಶ್ವರಿಯಲ್ಲಿ ಗೆದ್ದು ತೋರಿಸಿದ್ರೆ ಅವರಿಗೆ ಗೌರವ ಸಿಗುತ್ತದೆ. ಆದರೆ ಇಲ್ಲಿರುವ ಕೆಲವರು ಅವರನ್ನು ಗೊಂದಲಕ್ಕೆ ದೂಡಿದ್ದಾರೆ ಎಂದು ಪ್ರತಿಕ್ರಿಯಿಸಿದರು.

ಇದನ್ನೂ ಓದಿ: ಪ್ರಹ್ಲಾದ್ ಜೋಶಿ ನಮ್ಮ ಬ್ರಾಹ್ಮಣರಲ್ಲ, ಅವರನ್ನು ಮುಂದಿನ‌ ಸಿಎಂ ಮಾಡಲು ಆರ್​ಎಸ್ಎಸ್ ನಿರ್ಧರಿಸಿದೆ: ಹೆಚ್​ಡಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.