ETV Bharat / state

ಅಧಿಕಾರಿಗಳಷ್ಟೇ ಅಲ್ಲ, ಮತದಾರರೂ ಭ್ರಷ್ಟರೇ: ಎಂಟಿಬಿ ನಾಗರಾಜ್‌ - ಹೂಡಿ ವಿಜಯ್​ ಕುಮಾರ್​ ಕಚೇರಿ ಉದ್ಘಾಟನೆ ಕಾರ್ಯಕ್ರಮ

ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಎಂಟಿಬಿ ನಾಗರಾಜ್, ರಾಜಕೀಯ ಕಳ್ಗಚ್ಚು ರೀತಿ ಆಗಿದೆ. ಸೇವೆ ಮಾಡುವ ಮನೋಭಾವ ಕಡಿಮೆಯಾಗಿದೆ. ಎರಡು ಪಕ್ಷದವರು ಮಾಡಿದಕ್ಕಿಂತ ದುಪ್ಪಟ್ಟು ಹಣ ಚುನಾವಣೆಯಲ್ಲಿ ನಾನು ಖರ್ಚು ಮಾಡಿದ್ದೇನೆ. ಮೊದಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮಾತ್ರ ಭ್ರಷ್ಟರಾಗಿದ್ದರು. ಈಗ ಮತದಾರರೂ ಭ್ರಷ್ಟರಾಗಿದ್ದಾರೆ ಎಂದು ಎಂಟಿಬಿ ನಾಗರಾಜ್​ ಸೋಲಿನ ನೋವು ತೋಡಿಕೊಂಡರು.

mtb-nagaraj-statement-on-voters-in-hudi-vijayakumar-office-inauguration
ಎಂಟಿಬಿ ನಾಗರಾಜ
author img

By

Published : Jan 20, 2020, 6:31 AM IST

ಕೋಲಾರ : ರಾಜಕೀಯ ಕಳ್ಗಚ್ಚು ರೀತಿ ಆಗಿದೆ. ಸೇವೆ ಮಾಡುವ ಮನೋಭಾವ ಕಡಿಮೆಯಾಗಿದೆ. ಎರಡು ಪಕ್ಷದವರು ಮಾಡಿದ್ದಕ್ಕಿಂತ ದುಪ್ಪಟ್ಟು ಹಣ ಚುನಾವಣೆಯಲ್ಲಿ ನಾನು ಖರ್ಚು ಮಾಡಿದ್ದೇನೆ. ಮತದಾರರೂ ಕೂಡಾ ಭ್ರಷ್ಟರಾಗಿದ್ದಾರೆ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್​ ಆತ್ಮಾವಲೋಕನ ಮಾಡಿಕೊಂಡರು.

ಹೂಡಿ ವಿಜಯ್ ಕುಮಾರ್ ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಎಂಟಿಬಿ ನಾಗರಾಜ್ ಮಾತನಾಡಿದ್ರು.

ಮೊದಲಿಗೆ ಪೌರತ್ವ ಕಾಯ್ದೆಯ ಬಗ್ಗೆ ನನಗೂ ಅಷ್ಟೊಂದು ಅರಿವಿರಲಿಲ್ಲ, ಯಾಕಂದ್ರೆ ನಾನು ಕಾಂಗ್ರೆಸ್​ನ ಸಂಸ್ಕೃತಿಯಲ್ಲಿ ಬೆಳೆದವನು, ಮುಂದೆ ಬಿಜೆಪಿಯ ಆಚಾರ ವಿಚಾರಗಳಿಗೆ ನಾನು ಹೊಂದಿಕೊಳ್ಳುತ್ತೇನೆ ಎಂದರು. ರಾಜಕೀಯ ಇವತ್ತು ವ್ಯಾಪಾರ ಆಗಿರೋದು ಬೇಸರ ತಂದಿದೆ ಎಂದರು.

ಅಧಿಕಾರಿಗಳು ಅಷ್ಟೆ ಅಲ್ಲ ಮತದಾರರೂ ಬ್ರಷ್ಟರೇ ಎಂಟಿಬಿ ನಾಗರಾಜ ಆತ್ಮಾವಲೋಕನ

ಬಿಜೆಪಿ ರಾಜ್ಯಾಧ್ಯಕ್ಷೆ ಭಾರತಿ ಶೆಟ್ಟಿ ಮಾತನಾಡಿ, ಪೌರತ್ವ ಕಾಯ್ದೆ ಕಿತ್ತುಕೊಳ್ಳುವ ಕಾಯ್ದೆಯಲ್ಲ, ಬದಲಾಗಿ ಇದು ಪೌರತ್ವ ಕೊಡುವ ಕಾಯ್ದೆ. 370 ನೇ ವಿಧಿ ರದ್ದು ಹಾಗೂ ಪೌರತ್ವ ಕಾಯ್ದೆಯನ್ನು ವಿರೋಧಿಸುವ ಮೂಲಕ ಪಾಕಿಸ್ತಾನದ ಪರವಾಗಿ ಅರೆಬುದ್ದಿಜೀವಿಗಳು ನಿಲ್ಲುತ್ತಿದ್ದಾರೆ ಎಂದು ಆರೋಪಿಸಿದರು.

Intro:ಆಂಕರ್ : ಅದು ಮುಖಂಡನೊರ್ವನ ಕಚೇರಿ ಉದ್ಘಾಟನೆ ಕಾರ್ಯಕ್ರಮವಾದ್ರು ಅದೊಂದು ಪೌರತ್ವ ತಿದ್ದುಪಡಿ ಕಾ0iÉ್ದು ಕುರಿತು ಅರಿವು ಮೂಡಿಸುವ ಸಮಾವೇಶವಾಗಿತ್ತು. ಅದೊಂದು ಹೊಸಕೋಟೆ ಕ್ಷೇತ್ರದ ಉಪ ಚುನಾವಣೆಯ ಪರಾಮರ್ಶೆ, ಆತ್ಮವಿಮರ್ಶೆಯ ಕಾರ್ಯಕರ್ತರ ಆತ್ಮಾವಲೋಕನ ಸಭೆಯಾಗಿತ್ತು. ಅಲ್ಲಿ ನಡೆದಿದ್ದಾದರು ಏನು. ಈ ವರದಿ ನೋಡಿ.
Body:ಕಚೇರಿ ಉದ್ಘಾಟನೆ ಮಾಡಿ ವೇದಿಕೆಯಲ್ಲಿ ಉಪ ಚುನಾವಣೆಯ ಆತ್ಮ ವಿಮರ್ಶೆ ಮಾಡಿಕೊಳ್ಳುತ್ತಿರುವ ಮಾಜಿ ಸಚಿವ ಎಂಟಿಬಿ ನಾಗರಾಜ್, ಮತ್ತೊಂದೆಡೆ ಗಂಟೆಗಟ್ಟಲೆ ಪೌರತ್ವ ಕುರಿತು ಕಾರ್ಯಕರ್ತರಲ್ಲಿ ಅರಿವು ಮೂಡಿಸುತ್ತಿರುವ ಬಿಜೆಪಿ ರಾಜ್ಯಾದ್ಯಕ್ಷೆ ಭಾರತಿ ಶೆಟ್ಟಿ, ಇದೆಲ್ಲಾ ನಡೆದಿದ್ದು ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದ ಹೊರವಲಯದ ಚೊಕ್ಕಂಡಹಳ್ಳಿ ಗೇಟ್ ಬಳಿ. ಹೌದು ಮಾಲೂರು ತಾಲ್ಲೂಕಿನಲ್ಲಿ ಕಳೆದ ಒಂದು ವರ್ಷದಿಂದ ನಾನಾ ರೀತಿಯ ಸಮಾಜ ಸೇವೆ ಮೂಲಕ ಮನೆ ಮಾತಾಗಿರುವ ಹೂಡಿ ವಿಜಯ್ ಕುಮಾರ್ ಕಚೇರಿ ಉದ್ಘಾಟನೆ ಕಾರ್ಯಕ್ರಮವನ್ನ ವಿವಿಧ ಗಣ್ಯರು ಇಂದು ನೇರೆವೇರಿಸಿಕೊಟ್ರು. ಬಳಿಕ ಪಕ್ಕದಲ್ಲೆ ನಿರ್ಮಿಸಲಾಗಿದ್ದ ಬೃಹತ್ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಭಾರತಿ ಶೆಟ್ಟಿ, ಪೌರತ್ವ ಕಾ0iÉ್ದು ಕಿತ್ತುಕೊಳ್ಳುವ ಕಾ0iÉ್ದುಯಲ್ಲ, ಬದಲಾಗಿ ಇದು ಪೌರತ್ವ ಕೊಡುವ ಕಾ0iÉ್ದು, 370 ನೇ ವಿಧಿ ರದ್ದು ಹಾಗೂ ಪೌರತ್ವ ಕಾ0iÉ್ದುಯನ್ನ ವಿರೋಧಿಸುವ ಮೂಲಕ ಪಾಕಿಸ್ತಾನದ ಪರವಾಗಿ ಅರೆ ಬುದ್ದಿ ಜೀವಿಗಳು ನಿಲ್ಲುತ್ತಿದ್ದಾರೆ ಎಂದು ಆರೋಪಿಸಿದ್ರು. ದೇಶ ವಿಭಜನೆಯಾದಾಗ ಪ್ರಪಂಚದ ಎರಡನೆ ಮಹಾ ಯುದ್ದದ ವೇಳೆ ನಡೆದಷ್ಟು ಸಾವು ನೋವಾಗಿದೆ, ನೆಹರು ಲಿಯಾಕತ್ ಒಪ್ಪಂದದಂತೆ ಆಯಾ ದೇಶದವರು ಆಯಾ ದೇಶದ ಅಲ್ಪ ಸಂಖ್ಯಾತರನ್ನ ಕಾಪಾಡಿಕೊಳ್ಳಬೇಕು ಎಂಬುದಿದೆ ಅದರಂತೆ ಪೌರತ್ವ ಕಾಯ್ದೆ ಜಾರಿಯಾಗಿದೆ ಎಂದ್ರು. 17 ಕೋಟಿ 20 ಲಕ್ಷ ಅಲ್ಪಸಂಖ್ಯಾತರ ನಮ್ಮ ದೇಶದಲ್ಲಿದ್ದಾರೆ, ಅಖಂಡ ಭಾರತದ ಪಾಕಿಸ್ತಾನದಲ್ಲಿ ಶೇ.13 ರಷ್ಟಿದ್ದ ಅಲ್ಪ ಸಂಖ್ಯಾತರು, 2011 ಗಣತಿಯಂತೆ ಶೇ 3 ರಷ್ಟಾಗಿದೆ, ಆದ್ರೆ ತಪ್ಪು ಸಂದೇಶ ನೀಡುವ ಕೆಲಸ ರಾಜ್ಯದ ಅರೆ ಬುದ್ದಿ ಜೀವಿಗಳು ಮಾಡುತ್ತಿದ್ದಾರೆ ಎಂದು ಹೇಳಿದ್ರು. ಇದಕ್ಕೆ ಸಹಮತ ವ್ಯಕ್ತಪಡಿಸಿದ ಸ್ವಾಮೀಜಿ ಪೌರತ್ವ ದೇಶದ ಪರವಾಗಿದೆ ಎಂದು ಭಾರತಿ ಶೆಟ್ಟಿ ಮಾತಿಗೆ ಧ್ವನಿಗೂಡಿಸಿದ್ರು.

ಬೈಟ್ 1: ಎಂಟಿಬಿ ನಾಗರಾಜ್ (ಮಾಜಿ ಸಚಿವ)

ಇನ್ನೂ ಕಾರ್ಯಕ್ರಮ ಪೌರತ್ವ ಕಾಯ್ದೆ ಕುರಿತು ಅರಿವು ಮೂಡಿಸುವುದರ ಜೊತೆಗೆ ಹೊಸಕೋಟೆ ಕ್ಷೇತ್ರದ ಉಪ ಚುನಾವಣೆಯ ಆತ್ಮಾವಲೋಕನ ಸಭೆಯಾಗಿತ್ತು. ಸಭೆಯಲ್ಲಿ ಅರ್ಧ ಗಂಟೆ ಕಾಲ ಭಾಷಣ ಮಾಡಿದ ಮಾಜಿ ಸಚಿವ ಎಂಟಿಬಿ ನಾಗರಾಜ್, ರಾಜಕೀಯ ಕಳ್ಗಚ್ಚು ರೀತಿ ಆಗಿದೆ, ಸೇವೆ ಮಾಡುವ ಮನೋಭಾವ ಕಡಿಮೆಯಾಗಿದೆ, ಎರಡು ಪಕ್ಷದವರು ಮಾಡಿದಕ್ಕಿಂತ ದುಪ್ಪಟ್ಟು ಹಣ ಚುನಾವಣೆಯಲ್ಲಿ ನಾನು ಖರ್ಚು ಮಾಡಿದ್ದೇನೆ, ಮೊದಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮಾತ್ರ ಭ್ರಷ್ಟರಾಗಿದ್ರು, ಈಗ ಮತದಾರರು ಭ್ರಷ್ಟರಾಗಿದ್ದಾರೆ ಎಂದು ಸೋಲಿನ ನೋವನ್ನ ತೋಡಿಕೊಂಡ್ರು. ಮೊದಲಿಗೆ ಪೌರತ್ವ ಕಾ0iÉ್ದು ಬಗ್ಗೆ ನನಗೂ ಅಷ್ಟೊಂದು ಅರಿವಿಲ್ಲ, ಯಾಕಂದ್ರೆ ನಾನು ಕಾಂಗ್ರೇಸ್‍ನ ಸಂಸ್ಕೃತಿಯಲ್ಲಿ ಬೆಳೆದವನು, ಮುಂದೆ ಬಿಜೆಪಿಯ ಆಚಾರ ವಿಚಾರಗಳಿಗೆ ನಾನು ಹೊಂದಿಕೊಳ್ಳುತ್ತೇನೆ ಎಂದ್ರು. ಇನ್ನೂ ರಾಜಕೀಯ ಇವತ್ತು ವ್ಯಾಪಾರ ಆಗಿರೋದು ಬೇಸರ ತಂದಿದೆ ಎಂದ ಎಂಟಿಬಿ ಬಹಳ ನೋವಿನಿಂದ ಈ ಮಾತುಗಳನ್ನ ಹೇಳುತ್ತಿದ್ದೇನೆ ಎನ್ನುವ ಮೂಲಕ ಹೆಚ್ಚು ಹಣ ಕೊಟ್ಟವರಿಗೆ ಓಟ್ ಹಾಕುವ ಪದ್ದತಿ ಬಂದಿದೆ. ಮೊದಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮಾತ್ರ ಭ್ರಷ್ಟರಾಗಿದ್ರು, ಈಗ ಮತದಾರರು ಭ್ರಷ್ಟರಾಗಿದ್ದಾರೆ, ಸಮಾಜ ಭ್ರಷ್ಟಾಚಾರದ ಹಾದಿ ಇಳಿದಿದೆ ಎಂದ್ರು. ಮನುಷ್ಯನ ಜೀವನ ನಶ್ವರವಾದದ್ದು ಎಂದು ಉಪ ಚುನಾವಣೆಯಲ್ಲಿ ಸೋತ ಬಳಿಕ ಬೇಸರದ ನುಡಿಗಳನ್ನಾಡಿ ಮನಸ್ಸಿನಲ್ಲಿದ್ದ ನೋವನ್ನ ಹೊರಹಾಕಿದ್ರು.

ಬೈಟ್ 2: ಹೂಡಿ ವಿಜಯ್ ಕುಮಾರ್ (ಸಮಾಜ ಸೇವಕ) Conclusion:ಒಟ್ನಲ್ಲಿ ಉಪ ಚುನಾವಣೆ ಮುಗಿದು ಒಂದುವರೆ ತಿಂಗಳೆ ಕಳೆದ್ರು ಎಂಟಿಬಿ ನಾಗರಾಜ್ ಸೋಲಿನ ನೋವು ಹೊರಹಾಕುವ, ಆತ್ಮಾವಲೋಕನ ಸಭೆ ಇದಾಗಿತ್ತು. ಅತ್ತ ಶಾಸಕ ಸ್ಥಾನವೂ ಇಲ್ಲದೆ ಇತ್ತ ಸಚಿವ ಸ್ಥಾನವೂ ಇಲ್ಲದೆ ಪ್ರಸಕ್ತ ವಿದ್ಯಾಮಾನಗಳ ಕುರಿತು ಬೇಸರ ವ್ಯಕ್ತಪಡಿಸಿದ್ದು ವಿಶೇಷವಾಗಿ ಕಂಡುಂತು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.