ETV Bharat / state

ಸಿದ್ಧರಾಮಯ್ಯ ಈಗ ಅಧಿಕಾರದಲ್ಲಿ ಇದ್ದಿದ್ರೆ ಗುಡಿಸಿ ಗುಂಡಾಂತರ ಮಾಡ್ತಿದ್ರು: ಮುನಿಸ್ವಾಮಿ ತಿರುಗೇಟು - ಕೋಲಾರ ಸುದ್ದಿ

ಇಂತಹ ಸಂದರ್ಭದಲ್ಲಿ ಸಿದ್ದರಾಮಯ್ಯ ರಾಜಕೀಯ ಮಾಡಬಾರದು. ಮೋದಿ, ಬಿಎಸ್​ವೈ ಒಳ್ಳೆಯ ಕೆಲಸ ಮಾಡ್ತಿದ್ದಾರೆ ಅವರಿಗೆ ಎಲ್ಲರೂ ಪಕ್ಷಾತೀತವಾಗಿ ಬೆಂಬಲ ಕೊಡ್ಬೇಕು ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದ್ದಾರೆ.

Muniswamy
ಎಸ್.ಮುನಿಸ್ವಾಮಿ
author img

By

Published : Apr 14, 2020, 5:02 PM IST

ಕೋಲಾರ: ಲಾಕ್​​​​​​ಡೌನ್ ಮುಂದುವರೆಸಿರುವ ಮೋದಿ ಬಡವರಿಗೆ ಯಾವುದೇ ಯೋಜನೆಗಳು ಕೈಗೊಂಡಿಲ್ಲ ಎಂಬ ವಿಪಕ್ಷ ಸಿದ್ದರಾಮಯ್ಯ ಹೇಳಿಕೆಗೆ ಕೋಲಾರದಲ್ಲಿ ಸಂಸದ ಎಸ್.ಮುನಿಸ್ವಾಮಿ ತಿರುಗೇಟು ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಎಸ್.ಮುನಿಸ್ವಾಮಿ

ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿ ಖರೀದಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅಧಿಕಾರದಲ್ಲಿ ಇದ್ದಿದ್ದರೆ ಗುಡಿಸಿ ಗುಂಡಾಂತರ ಮಾಡುತ್ತಿದ್ದರು, ಮೋದಿ ಮಾಡುತ್ತಿರುವ ಯೋಜನೆಗಳನ್ನ ಜನ ವೀಕ್ಷಿಸುತ್ತಿದ್ದಾರೆ ಎಂದು ಟಾಂಗ್ ನೀಡಿದ್ರು.

ಅಲ್ಲದೇ ಪ್ರಧಾನಿ ಮೋದಿ ಏನ್ಮಾಡ್ತಿದ್ದಾರೆ ಎಂದು ಇಡೀ ಪ್ರಪಂಚಕ್ಕೆ ಗೊತ್ತಿದೆ. ಮೋದಿ ಅವರು ಮಾಡಿರುವ ಯೋಜನೆಗಳು ಎಲ್ಲ ಜನಾಂಗದವರು ಮತ್ತು ದೇಶ ಮೆಚ್ಚಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ಪ್ರತಿ ಪಕ್ಷದಲ್ಲಿದ್ದಾಗ ಈ ರೀತಿ ಹೇಳಿಕೆ ನೀಡುವುದು ಸಹಜ, ಇಂತಹ ಪರಿಸ್ಥಿತಿಯಲ್ಲಿ ಈ ರೀತಿ ಮಾತನಾಡುವುದು ಸರಿಯಲ್ಲ, ಪಕ್ಷಾತೀತವಾಗಿ ಬೆಂಬಲ ನೀಡುವಂತಹ ಕೆಲಸ ಆಗಬೇಕು ಎಂದು ಸಲಹೆ ನೀಡಿದರು.

ಇನ್ನು ಇಂತಹ ಸಂದರ್ಭದಲ್ಲಿ ಸಿದ್ದರಾಮಯ್ಯ ನವರು ರಾಜಕೀಯ ಮಾಡಬಾರದು. ಮೋದಿ, ಬಿಎಸ್​ವೈ ಒಳ್ಳೆಯ ಕೆಲಸ ಮಾಡ್ತಿದ್ದಾರೆ ಅವರಿಗೆ ಎಲ್ಲರೂ ಪಕ್ಷಾತೀತವಾಗಿ ಬೆಂಬಲ ಕೊಡ್ಬೇಕು ಎಂದು ಮನವಿ ಕೂಡ ಮಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.