ಕೋಲಾರ : ಜಮೀರ್ ಅಹ್ಮದ್ ಅವರ ಹೇಳಿಕೆಗಳಿಗೆ ಹೆಚ್ಚು ಬೆಲೆ ಕೊಡಲು ಆಗುವುದಿಲ್ಲ ಎಂದು ಕೋಲಾರದಲ್ಲಿ ಸಂಸದ ಎಸ್ ಮುನಿಸ್ವಾಮಿ ಹೇಳಿದ್ರು.
ಇನ್ನು, ಅವರೇನು ತಪ್ಪು ಮಾಡಿದ್ದಾರೆ, ಅವರ ಸಂಗಡಿಗರು ಸೇರಿ ಎಲ್ಲೆಲ್ಲಿ ಹೋಗಿದ್ರು ಅಂತಾ ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತಿದ್ದೇವೆ ಎಂದ್ರು. ಉಪ್ಪು ತಿಂದವನು ನೀರು ಕುಡಿಯಲೇಬೇಕು, ಹಾಗೆಯೇ ಜಮಿರ್ ಅಹ್ಮದ್ ಆಗಲಿ, ಯಾವುದೇ ಪಕ್ಷದವರಾಗಲಿ, ಅವರ ವಿರುದ್ಧ ಬಿಜೆಪಿ ಸರ್ಕಾರ ನಿರ್ದಾಕ್ಷ್ಯಿಣ್ಯ ಕ್ರಮಕೈಗೊಳ್ಳುತ್ತೆ ಎಂದರು.
ಅಲ್ಲದೆ ಜಮೀರ್ ಅಹ್ಮದ್ ಹೆಚ್ಚಿಗೆ ಮಾತನಾಡಿದಾಗಲೆಲ್ಲ ತಗಲ್ಹಾಕಿ ಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದ್ರು. ಅಲ್ಲದೆ ಅವರ ಆಸ್ತಿಯನ್ನು ಕೋಲಾರದ ಬಡ ಜನತೆಗೆ ನೀಡಲಿ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಅವರ ಕಾಲೆಳೆದ್ರು.