ETV Bharat / state

ತಪ್ಪು ಮಾಡದವರು ಎಲ್ಲಾ ಸಂಕಷ್ಟದಿಂದ ಆಚೆ ಬರುತ್ತಾರೆ: ಡಿಕೆಶಿಗೆ ಸಚಿವ ಅಶ್ವತ್ಥ್​ ನಾರಾಯಣ್ ಟಾಂಗ್​ - Conversion Act

ಕಾನೂನು ಪರಿಪಾಲನೆ‌ ಮಾಡುವವರು ಯಾವುದಕ್ಕೂ ಹೆದರುವ ಅವಶ್ಯಕತೆ ಇಲ್ಲ ಎಂದು ಡಿಕೆಶಿಗೆ ಇಡಿ ಸಂಕಷ್ಟದ ಕುರಿತು ಉನ್ನತ ಶಿಕ್ಷಣ ಸಚಿವ ಅಶ್ವತ್ಥ್​ ನಾರಾಯಣ್ ಅವರು ಪ್ರತಿಕ್ರಿಯಿಸಿದ್ದಾರೆ.

ಉನ್ನತ ಶಿಕ್ಷಣ ಸಚಿವ ಅಶ್ವತ್ಥ್​ ನಾರಾಯಣ್
ಉನ್ನತ ಶಿಕ್ಷಣ ಸಚಿವ ಅಶ್ವತ್ಥ್​ ನಾರಾಯಣ್
author img

By

Published : Sep 18, 2022, 4:37 PM IST

ಕೋಲಾರ: ಬಿಜೆಪಿ ಸರ್ಕಾರಕ್ಕೆ ಜನ ಅಧಿಕಾರ ಕೊಟ್ಟಿರೋದು ಭ್ರಷ್ಟಾಚಾರ ನಿರ್ಮೂಲನೆ ಮಾಡಲು. ತಪ್ಪು ಮಾಡಿರೋರು ಸಿಕ್ಕಿ ಹಾಕಿಕೊಳ್ಳುತ್ತಾರೆ. ತಪ್ಪು ಮಾಡದವರು ಎಲ್ಲಾ ಸಂಕಷ್ಟದಿಂದ ಆಚೆ ಬರುತ್ತಾರೆ ಎಂದು ಕೆಪಿಸಿಸಿ‌ ಅಧ್ಯಕ್ಷ ಡಿ. ಕೆ ಶಿವಕುಮಾರ್​ಗೆ ಕೋಲಾರದಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್​ ನಾರಾಯಣ್ ಅವರು​ ಟಾಂಗ್ ಕೊಟ್ಟರು.

ಇಂದು ಕೋಲಾರದಲ್ಲಿ ಮಾಧ್ಯಮದವರೊಂದಿಗೆ ಡಿಕೆಶಿಗೆ ಇಡಿ ಸಂಕಷ್ಟದ ಕುರಿತು ಮಾತನಾಡಿದ ಅವರು, ಕಾನೂನು ಪರಿಪಾಲನೆ ಮಾಡುವುದು ಮುಖ್ಯ. ಕಾನೂನು ಪರಿಪಾಲನೆ‌ ಮಾಡುವವರು ಯಾವುದಕ್ಕೂ ಹೆದರುವ ಅವಶ್ಯಕತೆ ಇಲ್ಲ. ವ್ಯವಸ್ಥೆಯಲ್ಲಿ ಕರ್ತವ್ಯ‌ ಪರಿಪಾಲನೆ ಮಾಡುವುದು ಬಹಳ ಮುಖ್ಯ ಎಂದರು.

ವರಿಷ್ಠರು ತೀರ್ಮಾನ ಮಾಡುತ್ತಾರೆ: ಇನ್ನು, ಡಿಕೆಶಿ ಸಿಎಂ ಆಗುವ ಕನಸು ಹೊಂದಿದ್ದಾರೆ. ಅನ್ನೋ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ಅವಕಾಶ ಕೊಡುತ್ತಾರೆ ಎಂದು ಹೇಳಿದ್ರು. ಇನ್ನು, ಈಶ್ವರಪ್ಪ ಅವರು ಸಚಿವ ಸಂಪುಟಕ್ಕೆ ಸೇರುವುದರ ಕುರಿತು ಸಿಎಂ ಹಾಗೂ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.

ಉನ್ನತ ಶಿಕ್ಷಣ ಸಚಿವ ಅಶ್ವತ್ಥ್​ ನಾರಾಯಣ್ ಅವರು ಮಾತನಾಡಿದರು

ಇನ್ನು, ಮತಾಂತರ ಕಾಯ್ದೆಗೆ ಕಾಂಗ್ರೆಸ್​ ವಿರೋಧ ವಿಚಾರವಾಗಿ ಮಾತನಾಡಿದ ಅವರು, ಜನ ಈಗಾಗಲೇ ಕಾಂಗ್ರೆಸ್​ಗೆ ತಕ್ಕ ಪಾಠ ಕಲಿಸಿದ್ದಾರೆ. ಕಾಯ್ದೆಯಲ್ಲಿ ತಪ್ಪೇನಿದೆ ಅನ್ನೋದು ಹೇಳಲಿ. ಚುನಾಯಿತ ಪ್ರತಿನಿಧಿಗಳಾಗಿ ಕಾಯ್ದೆ ಪ್ರತಿಯನ್ನು ಹರಿದುಹಾಕಿದ್ದಾರೆ. ಅದರಲ್ಲಿ ತಪ್ಪೇನಿದೆ? ಅನ್ನೋದನ್ನು ಅವರು ಮಾತನಾಡಬೇಕು ಎಂದರು.

ನಾವು ಅವಕಾಶ ಕೊಡಲ್ಲ: ಇನ್ನು, ಅಮಾಯಕರು, ತಿಳುವಳಿಕೆ ಇಲ್ಲದ ಜನರನ್ನು ಮತಾಂತರ ಮಾಡೋದು ಎಷ್ಟರ ಮಟ್ಟಿಗೆ ಸರಿ ಎಂದ ಅವರು, ಇಷ್ಟಪಟ್ಟು ಮತಾಂತರ ಆಗಲು ಯಾವುದೇ ನಿರ್ಬಂಧ‌ ಇಲ್ಲ, ಬಲವಂತವಾಗಿ ಹಣ, ಆಮಿಷವೊಡ್ಡಿ ಅಸಹಾಯಕತೆಯನ್ನು ಬಳಸಿಕೊಂಡು ಮತಾಂತರ ‌ಮಾಡೋದಕ್ಕೆ ನಾವು ಅವಕಾಶ ಕೊಡಲ್ಲ ಎಂದು ಹೇಳಿದ್ರು.

ಓದಿ: ಪ್ರಿಯಾಂಕ್ ಖರ್ಗೆಗೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಬೇಕಾಗಿಲ್ಲ: ಸಿಎಂ ಬೊಮ್ಮಾಯಿ ಟೀಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.