ಕೋಲಾರ: ಜೆಲ್ಲಿ ಕ್ರಷರ್ನಲ್ಲಿ ಸ್ಪೋಟಕ ಸಿಡಿದು ಕಾರ್ಮಿಕನೊಬ್ಬ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮಾಲೂರು ತಾಲೂಕಿನ ಕೊಮ್ಮನಹಳ್ಳಿ ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದಿದೆ. ಸಂಜೀವಿನಿ ಸ್ಟೋನ್ ಕ್ರಷರ್ನಲ್ಲಿ ಘಟನೆ ನಡೆದಿದ್ದು, ಬಿಹಾರ ಮೂಲದ ರಾಕೇಶ್ ಸಾಣಿ (34) ಮೃತ ಕಾರ್ಮಿಕ.
ಪ್ರಕರಣ ಮುಚ್ಚಿಹಾಕುವ ಯತ್ನ: ಸ್ಪೋಟಕ ಸಿಡಿದು ಕಾರ್ಮಿಕ ಮೃತಪಟದ್ಟರೂ, ರಸ್ತೆ ಅಪಘಾತದಲ್ಲಿ ಕಾರ್ಮಿಕ ಸಾವು ಎಂದು ಎಫ್ಐಆರ್ ದಾಖಲು ಮಾಡಿ ಪ್ರಕರಣ ಮುಚ್ಚಿಹಾಕುವ ಯತ್ನ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಮಾಲೂರು ಶಾಸಕ ನಂಜೇಗೌಡ ನಿರ್ವಹಣೆ ಮಾಡುತ್ತಿದ್ದ ಕ್ರಷರ್ ಇದಾಗಿದ್ದು, ರಾತ್ರೋ ರಾತ್ರಿ ಪ್ರಕರಣ ಮುಚ್ಚಿಹಾಕಲು ಪ್ರಯತ್ನ ನಡೆಸಲಾಗಿದೆ ಎನ್ನಲಾಗಿದೆ.

ಇನ್ನು ಘಟನೆ ಕುರಿತು ಸರಿಯಾಗಿ ಪರಿಶೀಲಿಸಿ ಎಫ್ಐಆರ್ ಬದಲು ಮಾಡುವಂತೆ ಮಾಸ್ತಿ ಪೊಲೀಸರಿಗೆ ಕೋಲಾರ ಎಸ್ಪಿ ಸೂಚನೆ ನೀಡಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ಮುರಳೀಧರ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮಾಸ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕೊಪ್ಪಳದ ಸ್ಟೋನ್ ಕ್ರಷರ್ ಕ್ವಾರಿಯಲ್ಲಿ ಅಕ್ರಮವಾಗಿ ಕಲ್ಲು ಬ್ಲಾಸ್ಟ್: ತಪ್ಪಿದ ಭಾರಿ ಅನಾಹುತ