ಕೋಲಾರ: ಸಿದ್ದರಾಮಯ್ಯ ಏನ್ ಆಗೋಲ್ಲ ಅಂತಾರೋ ಅದಾಗುತ್ತೆ, ಸಿದ್ದರಾಮಯ್ಯ ಏನು ಆಗುತ್ತೆ ಅಂತಾರೋ ಅದು ಆಗಲ್ಲವೆಂದು ಬಿಜೆಪಿ ಹಿರಿಯ ಮುಖಂಡ ಕೆ.ಎಸ್.ಈಶರಪ್ಪ ಕೋಲಾರದಲ್ಲಿ ಸಿದ್ದಾರಾಮಯ್ಯ ವಿರುದ್ದ ವ್ಯಂಗವಾಡಿದ್ರು.
ಕೋಲಾರ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಕರ್ನಾಟಕ ಪ್ರಾದೇಶಿಕ ಕುರುಬರ ಸಂಘ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಎಸ್ಎಸ್ಎಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾಧ್ಯಮದವರೊದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ, ಮೋದಿ ಪ್ರಧಾನಿ ಆಗಲ್ಲ ಅಂದ್ರು, ಕುಮಾರಸ್ವಾಮಿ ಅವರಪ್ಪನಾಣೆ ಸಿಎಂ ಆಗಲ್ಲ ಅಂದಿದ್ದರು. ಆದ್ರೆ ಅದೆಲ್ಲವೂ ಆಗಿದೆ. ಮತ್ತೆ ತಾವು ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳಿದ ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಸೋತರು ಎಂದು ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ್ರು.
ಕಾಂಗ್ರೆಸ್ನವರು ವಿನಾಃಕಾರಣ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡಿದ ಹಿನ್ನಲೆ ರಾಜ್ಯದಲ್ಲಿ 25 ಸೀಟು ಬಿಜೆಪಿಗೆ ಬಂದಿದೆ. ಕಾಂಗ್ರೆಸ್‍ನವರಿಗೆ 1 ಸ್ಥಾನ ಬಂದಿದೆ ಎಂದು ಸಮ್ಮಿಶ್ರ ಸರ್ಕಾರವನ್ನ ಕುಟುಕಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸೋತ ನೋವಿಗೆ ಮೋದಿ ಮೇಲೆ ಆರೋಪ ಮಾಡುತ್ತಿರುವುದು ಸರಿಯಲ್ಲ.ಇದು ಕುಂಟು ನೆಪ ಮಾತ್ರ ಎಂದರು.