ಕೋಲಾರ : ನಗರವನ್ನು ಕಸಮುಕ್ತ ಮಾಡಲು ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ಜಿಲ್ಲಾಧಿಕಾರಿ ಸಿ ಸತ್ಯಭಾಮ ಅಭಿಪ್ರಾಯಪಟ್ಟರು.
ಇಂದು ನಗರದ ಬೈರೇಗೌಡ ಬಡಾವಣೆಯ ಶ್ರೀಕೃಷ್ಣ ದೇವಾಲಯದ ಬಳಿ ಕಸ ವಿಲೇವಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮೂಲದಲ್ಲಿಯೇ ಬೇರ್ಪಡಿಸುವುದು ನಮ್ಮೆಲ್ಲರ ಹೊಣೆ ಆಗಿರುತ್ತದೆ. ಸಾರ್ವಜನಿಕರ ಸಹಕಾರವಿಲ್ಲದೆ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ, ಪ್ರತಿಯೊಬ್ಬರು ತಮ್ಮ ಆರೋಗ್ಯ ದೃಷ್ಟಿಯಿಂದ ಸ್ವಚ್ಛತೆ ಕಾಪಾಡಿಕೊಳ್ಳುವುದು ತಮ್ಮ ಕರ್ತವ್ಯವಾಗಿರಲಿ ಎಂದು ಹೇಳಿದರು.
ತಾವೇ ಸ್ವತಃ ಮನೆ ಮನೆಗೆ ತೆರಳಿ ಮಹಿಳೆಯರಲ್ಲಿ ಕಸ ವಿಲೇವಾರಿ ಮಾಡುವುದರ ಬಗ್ಗೆ ಜಾಗೃತಿ ಮೂಡಿಸಿದರು. ವಿಂಗಡಣೆ ಮಾಡದ ಕಸವನ್ನು ಯಾವುದೇ ಕಾರಣಕ್ಕೂ ಪೌರಕಾರ್ಮಿಕರು ಸ್ವೀಕರಿಸದಂತೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ಕಸವನ್ನ ಸಾರ್ವಜನಿಕ ಪ್ರದೇಶದಲ್ಲಿ ಬಿಸಾಕುವವರಿಗೆ ದಂಡ ಸಮೇತ ಅವರ ಮನೆಯ ಅಂಗಳದಲ್ಲಿ ಎಲ್ಲ ಕಸವನ್ನು ಸುರಿಯಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.