ETV Bharat / state

ಡ್ರಗ್ಸ್ ದಂಧೆ ವಿರುದ್ಧ ಉನ್ನತ ಮಟ್ಟದಲ್ಲಿ ತನಿಖೆಯಾಗಲಿ: ಸಚಿವ ಹೆಚ್. ನಾಗೇಶ್

ಶಾಲಾ- ಕಾಲೇಜು ಮಕ್ಕಳು ಡ್ರಗ್ಸ್​ಗೆ ಅಡಿಕ್ಟ್ ಆಗಿರುವುದು ಬೇಸರದ ಸಂಗತಿ. ಡ್ರಗ್ಸ್ ದಂಧೆ ವಿರುದ್ದ ಉನ್ನತ ಮಟ್ಟದಲ್ಲಿ ತನಿಖೆಯಾಗಬೇಕು. ಶಿಕ್ಷೆಯ ಪ್ರಮಾಣ ಕಠಿಣಗೊಳಿಸಿ ಈ ದಂಧೆ ನಿರ್ಮೂಲನೆಗೆ ಸರ್ಕಾರ ಪ್ರಯತ್ನಿಸುತ್ತದೆ ಎಂದು ಅಬಕಾರಿ ಸಚಿವ ಹೆಚ್. ನಾಗೇಶ್ ಹೇಳಿದ್ದಾರೆ.

ಪತ್ರಕರ್ತರಿಗೆ ಮಣಿಪಾಲ್ ಆಸ್ಪತ್ರೆಯಿಂದ ಆರೋಗ್ಯ ಕಾರ್ಡ್ ವಿತರಣೆ

author img

By

Published : Sep 11, 2020, 5:06 PM IST

Updated : Sep 11, 2020, 8:17 PM IST

ಕೋಲಾರ: ರಾಜ್ಯದಲ್ಲಿ ಡ್ರಗ್ಸ್ ದಂಧೆ ಹಿಂದಿನಿಂದಲೂ ಇದೆ. ಹೆಚ್ಚಾಗಿ ಹೈ-ಫೈ ಜೀವನ ನಡೆಸುವವರೇ ಇದರಲ್ಲಿ ಭಾಗಿಯಾಗಿದ್ದು, ಗಾಂಜಾ ತೊಗರಿ ಗಿಡದಂತೆ ಇರುತ್ತದೆ ಎಂದು ಕೋಲಾರದಲ್ಲಿ ಅಬಕಾರಿ ಸಚಿವ ಹೆಚ್. ನಾಗೇಶ್ ಹೇಳಿದ್ದಾರೆ.

ಕೋಲಾರದ ಪತ್ರಕರ್ತರ ಭವನದಲ್ಲಿ ಪತ್ರಕರ್ತರಿಗೆ ಮಣಿಪಾಲ್ ಆಸ್ಪತ್ರೆಯಿಂದ ಆರೋಗ್ಯ ಕಾರ್ಡ್ ವಿತರಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡ್ರಗ್ಸ್ ದಂಧೆ ವಿರುದ್ದ ಉನ್ನತ ಮಟ್ಟದಲ್ಲಿ ತನಿಖೆಯಾಗಬೇಕು. ಶಾಲಾ- ಕಾಲೇಜು ಮಕ್ಕಳು ಡ್ರಗ್ಸ್​ಗೆ ಅಡಿಕ್ಟ್ ಆಗಿರುವುದು ಬೇಸರದ ವಿಷಯ ಎಂದರು.

ಅಬಕಾರಿ ಸಚಿವ ಹೆಚ್. ನಾಗೇಶ್

ರಾಜ್ಯದೆಲ್ಲೆಡೆ ಡ್ರಗ್ಸ್ ವಿರುದ್ಧ ಕಣ್ಗಾವಲಿಡಬೇಕು, ಶಿಕ್ಷೆಯ ಪ್ರಮಾಣ ಕಠಿಣಗೊಳಿಸಿ ಡ್ರಗ್ಸ್ ದಂಧೆ ನಿರ್ಮೂಲನೆಗೆ ಸರ್ಕಾರ ಪ್ರಯತ್ನಿಸಲಾಗುವುದು. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸಧ್ಯಕ್ಕೆ ಯಾವುದೇ ಬದಲಾವಣೆ ಇಲ್ಲ, ಯಡಿಯೂರಪ್ಪ ಅವರೆ ಮುಖ್ಯಮಂತ್ರಿಗಳಾಗಿರುತ್ತಾರೆ ಎಂದರು.

ನಮ್ಮಲ್ಲಿ ಒಗ್ಗಟ್ಟಿದೆ, ನಾಯತ್ವ ಬದಲಾವಣೆಯೇ ಇಲ್ಲ, ಅದರಲ್ಲಿ ಯಾವುದೇ ಅನುಮಾನ ಬೇಡ. ಸಚಿವ ಸಂಪುಟ ವಿಸ್ತರಣೆ ಬಗ್ಗೆ ನನಗೆ ಮಾಹಿತಿ ಹಾಗೂ ಸ್ಪಷ್ಟ ಚಿತ್ರೀಕರಣ ಇಲ್ಲ. ಬದಲಾವಣೆ ಎನ್ನುವುದು ಬರಿ ಉಹಾಪೋಹ ಅಷ್ಟೇ. ಸಿಎಂ ಯಡಿಯೂರಪ್ಪ ಅವರೇ ಎರಡೂವರೆ ವರ್ಷಗಳ ಕಾಲ ಮುಖ್ಯಮಂತ್ರಿಗಳಾಗಿ ಮುಂದುವರೆಯಲಿದ್ದಾರೆ ಎಂದರು.

Last Updated : Sep 11, 2020, 8:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.