ಕೋಲಾರ: ಚಿನ್ನದ ಗಣಿಯಲ್ಲಿ ಕಳ್ಳತನಕ್ಕೆ ಎಂದು ತೆರಳಿದ್ದ ಐವರಲ್ಲಿ ಮೂವರು ಮೃತಪಟ್ಟಿದ್ದು, ಇಬ್ಬರನ್ನ ಬಂಧಿಸಿರುವಂತಹ ಘಟನೆ ಕೆಜಿಎಫ್ ನಗರದ ಮಾರಿಕುಪ್ಪಂನಲ್ಲಿ ನಡೆದಿದೆ.
ಕಳೆದ ರಾತ್ರಿ ಕೆಜಿಎಫ್ನ ಐವರು ನಿವಾಸಿಗಳು ಚಿನ್ನದ ಗಣಿಯಲ್ಲಿ ಕಳ್ಳತನಕ್ಕೆ ಎಂದು ತೆರಳಿದ್ದಾಗ, ಚಿನ್ನದ ಗಣಿಯ ಗುಂಡಿಯಲ್ಲಿ ಬಿದ್ದು ಮೂವರು ಸಾವನ್ನಪ್ಪಿದ್ದಾರೆ. ಇನ್ನು ಕೆಜಿಎಫ್ ನಗರದ ಬಿ - ಶಾಪ್ ದೊಡ್ಡಿಯ ನಿವಾಸಿಗಳಾದ ಪಡಿಯಪ್ಪ, ಜೋಸೆಫ್, ಕಂದ ಮೃತರಾಗಿದ್ದು, ವಿಕ್ಟರ್ ಹಾಗೂ ಕಾರ್ತಿಕ್ ಎಂಬುವವರನ್ನ ಬಂಧಿಸಲಾಗಿದೆ.
ಸ್ಥಳಕ್ಕೆ ಮಾರಿಕುಪ್ಪಂ ಠಾಣಾ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಕಳೆದ ರಾತ್ರಿಯಿಂದ ಮೃತದೇಹಗಳಿಗೆ ಶೋಧ ಕಾರ್ಯ ಆರಂಭಿಸುತ್ತಿದ್ದು, ಕಂದ ಹಾಗೂ ಜೋಸೆಫ್ ಎಂಬುವರ ಮೃತ ದೇಹಗಳು ಸಿಕ್ಕಿದೆ. ಜೊತೆಗೆ ಪಡಿಯಪ್ಪ ಎಂಬುವವರ ಮೃತ ದೇಹಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ.
ಸುಮಾರು ಸಾವಿರಾರು ಅಡಿ ಆಳವಿರುವ ಗಣಿ ಗುಂಡಿಯಲ್ಲಿ ಕಳೆದ ರಾತ್ರಿ ಕಳ್ಳತನಕ್ಕೆ ಎಂದು ಒಳಹೊಕ್ಕಿರುವ ಕಳ್ಳರು, ಕಾಲು ಜಾರಿ ಗುಂಡಿಯಲ್ಲಿ ಬಿದ್ದು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.