ETV Bharat / state

ಕೊರೊನಾ ವರದಿ ತಡ: ಕ್ವಾರಂಟೈನ್​ನಲ್ಲಿದ್ದ ವೈದ್ಯ, ಸಿಬ್ಬಂದಿಯಿಂದ ಪ್ರತಿಭಟನೆ - ಕೋಲಾರದಲ್ಲಿ ಕೊರೊನಾ ಪ್ರಕರಣಗಳು

ಕೊರೊನಾ ವರದಿಯನ್ನು ಶೀಘ್ರವಾಗಿ ‌ ನೀಡದೆ ವಿಳಂಬ ಮಾಡುವುದರಿಂದ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಆರೋಪಿಸಿ ಕ್ವಾರಂಟೈನ್​ನಲ್ಲಿದ್ದ ವೈದ್ಯ ಮತ್ತು ಆಸ್ಪತ್ರೆ ಸಿಬ್ಬಂದಿ ಕೋಲಾರ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.

dsdd
ಕ್ವಾರಂಟೈನ್​ನಲ್ಲಿದ್ದ ವೈದ್ಯ,ಸಿಬ್ಬಂದಿಯಿಂದದ ಪ್ರತಿಭಟನೆ
author img

By

Published : Jun 17, 2020, 5:09 PM IST

ಕೋಲಾರ: ಕೊರೊನಾ ಪರೀಕ್ಷಾ ವರದಿ ಬಾರದ ಹಿನ್ನೆಲೆ ಕ್ವಾರಂಟೈನ್​ನಲ್ಲಿದ್ದ ವೈದ್ಯ ಸೇರಿದಂತೆ ಆಸ್ಪತ್ರೆ ಸಿಬ್ಬಂದಿ ಪ್ರತಿಭಟನೆ ನಡೆಸಿದ ಘಟ‌ನೆ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿ ನಡೆದಿದೆ.

ಕ್ವಾರಂಟೈನ್​ನಲ್ಲಿದ್ದ ವೈದ್ಯ,ಸಿಬ್ಬಂದಿಯಿಂದ ಪ್ರತಿಭಟನೆ

ಜೂನ್ 8 ರಂದು ಜ್ವರ, ಕೆಮ್ಮು ಎಂದು ಬಂದ ರೋಗಿಗೆ, ವೈದ್ಯರೊಬ್ಬರು ಚಿಕಿತ್ಸೆ ನೀಡಿದ್ದರು. ರೋಗಿಗೆ ಕೊರೊನಾ ಲಕ್ಷಣಗಳು ಕಂಡು ಬಂದ ಹಿನ್ನೆಲೆ ಪರೀಕ್ಷೆ ಮಾಡಿದಾಗ ದೃಢಪಟ್ಟಿತ್ತು. ಈ ಹಿನ್ನೆಲೆ ಆರೋಗ್ಯ ಇಲಾಖೆ ಅಧಿಕಾರಿಗಳು ಖಾಸಗಿ ಆಸ್ಪತ್ರೆಯ ವೈದ್ಯ, ಸಿಬ್ಬಂದಿ ಸೇರಿದಂತೆ ಸುಮಾರು 12 ಜನರನ್ನು ಅದೇ ಆಸ್ಪತ್ರೆಯಲ್ಲಿ ಕ್ವಾರಂಟೈನ್​ ಮಾಡಿದ್ದಾರೆ. ಜೊತೆಗೆ ಜೂನ್ 12 ರಂದು ವೈದ್ಯ ಹಾಗೂ ಸಿಬ್ಬಂದಿಯ ಗಂಟಲು ದ್ರವ ಮಾದರಿಗಳನ್ನ ಸಂಗ್ರಹಿಸಿ ಕೊರೊನಾ ಟೆಸ್ಟ್ ಮಾಡಲಾಗಿತ್ತು.

ಆದ್ರೆ ಕೊರೊನಾ ಟೆಸ್ಟ್ ಮಾಡಿ ಆರು ದಿನಗಳು ಕಳೆದಿದ್ದರೂ ಇದುವರೆಗೂ ವರದಿ ಬಾರದ ಹಿನ್ನೆಲೆ ವೈದ್ಯ ಹಾಗೂ ಆಸ್ಪತ್ರೆ ಸಿಬ್ಬಂದಿ, ಕ್ವಾರಂಟೈನ್​​ನಿಂದ ಹೊರಬಂದು ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ. ಆರೋಗ್ಯ ಇಲಾಖೆಯವರು, ಜನರ ಜೀವನದಲ್ಲಿ ಚೆಲ್ಲಾಟವಾಡುತ್ತಿದ್ದಾರೆಂದು ಆರೋಪಿಸಿದ್ದಾರೆ. ಇನ್ನು ಸ್ಥಳಕ್ಕೆ ಭೇಟಿ ನೀಡಿದ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಶ್ರೀನಿವಾಸಪುರ ಠಾಣಾ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.