ETV Bharat / state

ಕೋಲಾರದಲ್ಲಿ ಆಕ್ಸಿಜನ್ ವ್ಯತ್ಯಯ ಶೀಘ್ರ ಬಗೆಹರಿಯಲಿದೆ: ಡಿಸಿಎಂ ಅಶ್ವತ್ಥ ನಾರಾಯಣ

author img

By

Published : Apr 28, 2021, 12:02 PM IST

ಡಿಸಿಎಂ ಅಶ್ವತ್ಥನಾರಾಯಣ ಕೋಲಾರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಅವರು, ಕೋವಿಡ್‌ ವಿಚಾರವಾಗಿ ವೈದ್ಯಾಧಿಕಾರಿಗಳಿಗೆ ಸಲಹೆಗಳನ್ನು ನೀಡಿದರು.

Kolar oxygen crises issue, DCM Ashwathnarayan reaction about Kolar oxygen crises issue, DCM Ashwathnarayan, DCM Ashwathnarayan news, ಕೋಲಾರ ಆಕ್ಸಿಜನ್​ ವಿವಾದ, ಕೋಲಾರ ಆಕ್ಸಿಜನ್​ ವಿವಾದದ ಬಗ್ಗೆ ಡಿಸಿಎಂ ಅಶ್ವತ್ಥನಾರಾಯಣ ಪ್ರತಿಕ್ರಿಯೆ, ಡಿಸಿಎಂ ಅಶ್ವತ್ಥನಾರಾಯಣ, ಡಿಸಿಎಂ ಅಶ್ವತ್ಥನಾರಾಯಣ ಸುದ್ದಿ,
ಕೋಲಾರದಲ್ಲಿ ಆಕ್ಸಿಜನ್ ವ್ಯತ್ಯಯ ಶೀಘ್ರದಲ್ಲೇ ಬಗೆಹರಿಯಲಿದೆ ಎಂದ ಡಿಸಿಎಂ ಅಶ್ವತ್ಥನಾರಾಯಣ

ಕೋಲಾರ: ಜಿಲ್ಲಾಸ್ಪತ್ರೆಯಲ್ಲಿರುವ ವೆಂಟಿಲೇಟರ್, ಆಕ್ಸಿಜನ್ ವ್ಯತ್ಯಯ ಸೇರಿ ಇತರೆ ಲೋಪದೋಷಗಳನ್ನು ಕೂಡಲೇ ಸರಿಪಡಿಸಲಾಗುವುದು ಎಂದು ಸಚಿವ ಅಶ್ವಥ್ ನಾರಾಯಣ ತಿಳಿಸಿದ್ದಾರೆ.

ಡಿಸಿಎಂ ಅಶ್ವತ್ಥನಾರಾಯಣ ಹೇಳಿಕೆ

ಸದ್ಯ ಜಿಲ್ಲಾಸ್ಪತ್ರೆಯಲ್ಲಿ 60 ಆಕ್ಸಿಜನ್ ಪಾಯಿಂಟ್ ಮಾತ್ರ ಇದ್ದು, ಇದನ್ನು ಏರಿಕೆ ಮಾಡಲಾಗುವುದು. 20 ವೆಂಟಿಲೇಟರ್‌ಗಳ ಪೈಕಿ ಒಂದು ಬಳಕೆಯಾಗುತ್ತಿದ್ದು, ಎಲ್ಲವನ್ನು ಬಳಕೆ ಮಾಡಲು ಕ್ರಮ ಕೈಗೊಳ್ಳುವುದಾಗಿ ಹೇಳಿದ ಅವರು, 200 ಬೆಡ್‌ನಿಂದ 400 ಬೆಡ್ ಏರಿಕೆ ಮಾಡಲು ಚಿಂತನೆ ನಡೆಸಲಾಗುವುದು ಎಂದು ತಿಳಿಸಿದರು.

ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ ಕೊರೊನಾ ಚಿಕಿತ್ಸೆ ಪಡೆದವರ ಬಗ್ಗೆ ಸಮರ್ಪಕ ಮಾಹಿತಿ ಇಲ್ಲದ ಕಾರಣಕ್ಕೆ ವೈದ್ಯಾಧಿಕಾರಿಯನ್ನು ಸಚಿವರು ತರಾಟೆಗೆ ತೆಗೆದುಕೊಂಡರು. ಕೋವಿಡ್‌ ಸೋಂಕಿತರಾಗಿ ಮನೆಗಳಲ್ಲಿ ಮತ್ತು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರವವರ ಮಾಹಿತಿಯನ್ನು ಸರಿಯಾಗಿ ಸಂಗ್ರಹ ಮಾಡಬೇಕೆಂದು ಸೂಚಿಸಿದರು.

ಹೀಗೆ ಸಂಗ್ರಹಿಸಿದ ಮಾಹಿತಿಯನ್ನು ಕೋವಿಡ್‌ ವಾರ್‌ ರೂಂಗೆ ಅಪ್‌ಡೇಟ್‌ ಮಾಡಬೇಕು. ಹೋಮ್‌ ಐಸೋಲೇಷನ್‌ ಆದವರು ಮಾತ್ರವಲ್ಲ, ಉಳಿದೆಲ್ಲ ಸೋಂಕಿತರಿಗೆ ಇರುವ ಸೌಲಭ್ಯ ಮತ್ತಿತರೆ ಎಲ್ಲ ಅಂಶಗಳ ಬಗ್ಗೆಯೂ ಕಾಲ್‌ ಸೆಂಟರ್‌ಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.