ETV Bharat / state

ಮಂಗಳೂರು ಗಲಭೆಗೆ ಕಾಂಗ್ರೆಸ್​ ಕಾರಣ: ಸಂಸದ ಎಸ್.ಮುನಿಸ್ವಾಮಿ ಆರೋಪ - Mangalore riot minister H. Nagesh's response

ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿ ಪ್ರತಿಭಟನೆ ವೇಳೆ ಮಂಗಳೂರಿನಲ್ಲಿ ಸಂಭವಿಸಿದ ಗಲಭೆ ಬಗ್ಗೆ ಕೋಲಾರದಲ್ಲಿ ಸಂಸದ ಎಸ್.ಮುನಿಸ್ವಾಮಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಪ್ರತಿಕ್ರಿಯಿಸಿದ್ದು, ಗಲಭೆ ಹಿಂದೆ ಕಾಂಗ್ರೆಸ್​ ಕೈವಾಡವಿದೆ ಎಂದಿದ್ದಾರೆ.

Mangalore riots are the latest news
ಮಂಗಳೂರು ಗಲಭೆಗೆ ಕಾಂಗ್ರೆಸ್​ ಕಾರಣ
author img

By

Published : Dec 25, 2019, 12:52 PM IST

ಕೋಲಾರ: ಪೌರತ್ವ (ತಿದ್ದುಪಡಿ) ಕಾಯ್ದೆ ವಿಚಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವ ಯು.ಟಿ.ಖಾದರ್ ಪ್ರಚೋದನಕಾರಿಯಾಗಿ ಮಾತನಾಡುವ ಮೂಲಕ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದ್ದಾರೆ.

ಮಂಗಳೂರು ಗಲಭೆಗೆ ಕಾಂಗ್ರೆಸ್​ ಕಾರಣ

ಮಂಗಳೂರು ಗಲಭೆಯ ಸಿಸಿಟಿವಿ ದೃಶ್ಯ ಬಿಡುಗಡೆ ಬಗ್ಗೆ ಮಾತನಾಡಿ, ಪೌರತ್ವ ಕಾಯ್ದೆಯಿಂದಾಗಿ ದೇಶದ ಯಾವುದೇ ಧರ್ಮದವರಿಗೂ ತೊಂದರೆಯಾಗುವುದಿಲ್ಲ. ಕಾಂಗ್ರೆಸ್​ನವರು ವೋಟಿಗಾಗಿ ಯುವಕರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಪೌರತ್ವ ಕಾಯ್ದೆಯಿಂದ ನಾವು ಈ ದೇಶದ ಪ್ರಜೆ ಎಂದು ಕಾಂಗ್ರೆಸ್​ನವರಿಗೆ ಅರಿವಾಗಿದೆ. ಹೀಗಾಗಿ ಈ ಹಿಂದೆ ಪ್ರತಿಭಟನೆಗಳು ನಡೆದರೆ ಪಾಕಿಸ್ತಾನದ ಬಾವುಟಗಳು ಹಾರಾಡುತ್ತಿದ್ದವು, ಈಗ ಭಾರತ ಬಾವುಟಗಳನ್ನು ಹಿಡಿದು ಪ್ರತಿಭಟನೆ ನಡೆಸುತ್ತಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಮಾತನಾಡಿ, ಮಂಗಳೂರಿನಲ್ಲಿ ಕಿಡಿಗೇಡಿಗಳು ಮಾಡಿರುವ ವಿಧ್ವಂಸಕ ಕೃತ್ಯ ಕಾಂಗ್ರೆಸ್​ ಪ್ರೇರಣೆಯಿಂದ ಆಗಿದೆ. ಆಡಳಿತ ಪಕ್ಷದ ವಿರುದ್ಧ ಪ್ರತಿಪಕ್ಷಗಳು ಜನರನ್ನು ರೊಚ್ಚಿಗೇಳಿಸುತ್ತಿವೆ. ಮಂಗಳೂರಿನಲ್ಲಿ ಮುಖವಾಡ ಧರಿಸಿ ಗಲಭೆ ನಡೆಸಿದವರ ಕುರಿತು ಎರಡು ಹಂತಗಳಲ್ಲಿ ತನಿಖೆ ಪ್ರಾರಂಭಿಸಿದ್ದಾರೆ. ತಪ್ಪಿತಸ್ಥರನ್ನು ಸುಮ್ಮನೆ ಬಿಡುವುದಿಲ್ಲ ಎಂದರು.

Intro:
ಆಂಕರ್ : ಪೌರತ್ವ ತಿದ್ದುಪಡಿ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಮಾಜಿ ಸಚಿವ ಯು.ಟಿ.ಖಾದರ್ ಬೆಂಕಿ ಹಚ್ಚುವುದರ ಕುರಿತು ಮಾತನಾಡುವ ಮೂಲಕ ವಿದ್ವಂಸಕ ಕೆಲಸಕ್ಕೆ ಪ್ರಚೋದನೆ ನೀಡಿದ್ದಾರೆಂದು ಕೋಲಾರದಲ್ಲಿ ಸಂಸದ ಎಸ್.ಮುನಿಸ್ವಾಮಿ ಅಭಿಪ್ರಾಯಪಟ್ಟರು. Body:ಇಂದು ಕೋಲಾರದಲ್ಲಿ ಮಾಧ್ಯಮದವರೊಂದಿಗೆ ಮಂಗಳೂರು ಮಹಾಗಲಭೆಯ ಸಿಸಿಟಿವಿ ದೃಶ್ಯಾವಳಿಗಳ ಬಿಡುಗಡೆ ಸಂಭಂದ ಮಾತನಾಡಿದ ಅವರು, ಪೌರತ್ವ ತಿದ್ದುಪಡಿಯಿಂದಾಗಿ ದೇಶದ ಯಾವುದೇ ಧರ್ಮದವರಿಗೂ ತೊಂದರೆಯಾಗುವುದಿಲ್ಲ ಎಂದರು. ಅಲ್ಲದೆ ಕಾಂಗ್ರೇಸ್‍ನವರು ವೋಟ್‍ಗಾಗಿ ಯುವಕರನ್ನ ದುರ್ಭಳಕೆ ಮಾಡಿಕೊಳ್ಳುವುದರ ಮೂಲಕ, ಮುಖಕ್ಕೆ ಮಾಸ್ಕ್ ಧರಿಸಿ ಕೃತ್ಯ ಎಸಗುವಂತೆ ಮಾಡುತ್ತಿದ್ದಾರೆಂದು ಆರೋಪಿಸಿದ್ರು. ಇನ್ನು ಪೌರತ್ವ ತಿದ್ದುಪಡಿಯಿಂದಾದ್ರೂ ನಾವು ಈ ದೇಶದ ಪ್ರಜೆ ಎಂದು ಕಾಂಗ್ರೇಸ್‍ನವರಿಗೆ ಅರಿವಾಗಿದೆ, ಹೀಗಾಗಿ ಈ ಹಿಂದೆ ಪ್ರತಿಭಟನೆಗಳು ನಡೆದರೆ ಪಾಕಿಸ್ತಾನದ ಭಾವುಟಗಳು ಹಾರಾಡುತ್ತಿದ್ದವು, ಇದೀಗ ದೇಶದ ಭಾವುಟಗಳನ್ನ ಹಿಡಿದು ಪ್ರತಿಭಟನೆಗೆ ಮುಂದಾಗಿದ್ದಾರೆಂದು ಪ್ರತಿಭಟನಾಕಾರರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ರು. ಇನ್ನು ದೇಶದಲ್ಲಿದ್ದು ವಿಧ್ವಂಸಕ ಕೃತ್ಯವೆಸಗುವವರಿಗೆ ತಕ್ಕ ಶಾಸ್ತಿಯಾಗಬೇಕು, ಜೊತೆಗೆ ಧರ್ಮದ ಮೌಲಿಗಳು ಯುವಕರಿಗೆ ತಿಳಿಹೇಳಬೇಕೆಂದು ಮನವಿ ಮಾಡಿದ್ರು. ಇನ್ನು ಇದೆ ವೇಳೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್, ಮಂಗಳೂರಿನಲ್ಲಿ ಕೆಡಿಗೇಡಿಗಳು ಮಾಡಿರುವ ವಿಧ್ವಂಸಕ ಕೃತ್ಯ ಕಾಂಗ್ರೇಸ್‍ನವರ ಪ್ರೇರಣೆಯಿಂದಾಗಿ ಎಂದರು. ಅಲ್ಲದೆ ಆಡಳಿತ ಪಕ್ಷದ ವಿರುದ್ದ, ಪ್ರತಿಪಕ್ಷಗಳು ಹೋರಾಟ ಮಾಡೋಣವೆಂದು ಜನರನ್ನ ರೊಚ್ಚಿಗೇಳಿಸಿದ್ದಾರೆಂದರು. ಇನ್ನು ಮಂಗಳೂರಿನಲ್ಲಿ ಮುಖವಾಡ ಧರಿಸಿದ್ದವರ ಕುರಿತು ಎರಡು ಹಂತಗಳಲ್ಲಿ ತನಿಖೆ ಪ್ರಾರಂಭಿಸಿದ್ದಾರೆ, ತಪ್ಪಿತಸ್ಥರನ್ನ ಸುಮ್ಮನೆ ಬಿಡುವುದಿಲ್ಲ ಅವರ ವಿರುದ್ದ ಕ್ರಮಕೈಗೊಳ್ಳುವುದಾಗಿ ಹೇಳಿದ್ರು.
Conclusion:ಇನ್ನು ಪೌರತ್ವ ತಿದ್ದುಪಡಿ ಕುರಿತು ಕೆಲವರು ಅರ್ಥ ಮಾಡಿಕೊಂಡಿಲ್ಲ, ತಿಳಿದುಕೊಳ್ಳದೆ ಪ್ರತಿಭಟನೆ ಮಾಡುತ್ತಿದ್ದಾರೆಂದರು.

ಬೈಟ್ : 1 ಎಸ್.ಮುನಿಸ್ವಾಮಿ (ಸಂಸದ ಕೋಲಾರ)

ಬೈಟ್ : 2 ಎಚ್.ನಾಗೇಶ್ (ಜಿಲ್ಲಾ ಉಸ್ತುವಾರಿ ಸಚಿವ ಕೋಲಾರ)
ETV Bharat Logo

Copyright © 2025 Ushodaya Enterprises Pvt. Ltd., All Rights Reserved.