ಚಿತ್ರದುರ್ಗ: ಯುಗಾದಿ ಹಬ್ಬದ ಪ್ರಯುಕ್ತ ಕೋಟೆನಾಡು ಚಿತ್ರದುರ್ಗದಲ್ಲಿ ಮಕ್ಕಳು ವಿವಿಧ ಬಣ್ಣಗಳಲ್ಲಿ ಮಿಂದೆದ್ದರು. ಜಿಲ್ಲೆಯ ಹಿರಿಯೂರಿನಲ್ಲಿ ಬಣ್ಣದ ನೀರೆರಚುವ ಹಬ್ಬ ಎಂದೇ ಖ್ಯಾತಿಯಾಗಿರುವ ಹೋಳಿ ಹಬ್ಬವನ್ನು ಮಕ್ಕಳು ಬಣ್ಣ ಎರಚುವ ಮೂಲಕ ಆಚರಿಸಿದರು.
ವಿವಿಧ ಬಣ್ಣಗಳಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಕೂಡ ಯುಗಾದಿ ಹಬ್ಬದ ಮೂರನೇ ದಿನವಾದ ಇಂದು ಪರಸ್ಪರ ಬಣ್ಣ ಬಣ್ಣದ ನೀರೆರಚಿಕೊಂಡು ಸಂಭ್ರಮಿಸಲಾಯಿತು. ಈ ಸಂದರ್ಭದಲ್ಲಿ ಮಕ್ಕಳು, ಯುವಕರು-ಯುವತಿಯರು ಬಿಸಿಲನ್ನು ಲೆಕ್ಕಿಸದೆ ಸಂಭ್ರಮ-ಸಡಗರದಿಂದ ಬಣ್ಣದ ನೀರೆರಚಿ ಸಂಭ್ರಮ ಪಟ್ಟಿದ್ದು ವಿಶೇಷವಾಗಿತ್ತು.