ETV Bharat / state

ಲಾಕ್ ಡೌನ್ ಬದಲಿಗೆ ಸೀಲ್ ಡೌನ್ ಮಾಡುವ ಸಿಎಂ ನಿರ್ಧಾರ ಸರಿಯಾಗಿದೆ: ಸಂಸದ ಎಸ್. ಮುನಿಸ್ವಾಮಿ - Karnataka Seal Down

ಕೊರೊನಾ ಹೆಚ್ಚಾಗಿರುವ‌ ಕಡೆ ಲಾಕ್ ಡೌನ್ ಬದಲಿಗೆ ಸೀಲ್ ಡೌನ್ ಮಾಡುವುದು ಒಳಿತೆಂದು ಸಂಸದ ಎಸ್. ಮುನಿಸ್ವಾಮಿ ಹೇಳುವ ಮೂಲಕ ಸಿಎಂ ಪರ ಬ್ಯಾಟಿಂಗ್ ಮಾಡಿದರು.

CM's decision to seal down rather than lock down is correct: MP S. muniswami
ಲಾಕ್ ಡೌನ್ ಬದಲಿಗೆ ಸೀಲ್ ಡೌನ್ ಮಾಡುವ ಸಿಎಂ ನಿರ್ಧಾರ ಸರಿಯಾಗಿದೆ: ಸಂಸದ ಎಸ್. ಮುನಿಸ್ವಾಮಿ
author img

By

Published : Jun 26, 2020, 7:05 PM IST

ಕೋಲಾರ: ಕೊರೊನಾ ಹೆಚ್ಚಾಗಿರುವ‌ ಕಡೆ ಲಾಕ್ ಡೌನ್ ಬದಲಿಗೆ ಸೀಲ್ ಡೌನ್ ಮಾಡುವುದು ಒಳಿತೆಂದು ಸಂಸದ ಎಸ್. ಮುನಿಸ್ವಾಮಿ ಹೇಳುವ ಮೂಲಕ ಸಿಎಂ ಪರ ಬ್ಯಾಟಿಂಗ್ ಮಾಡಿದರು.

ಲಾಕ್ ಡೌನ್ ಬದಲಿಗೆ ಸೀಲ್ ಡೌನ್ ಮಾಡುವ ಸಿಎಂ ನಿರ್ಧಾರ ಸರಿಯಾಗಿದೆ: ಸಂಸದ ಎಸ್. ಮುನಿಸ್ವಾಮಿ

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶ ಮತ್ತು ರಾಜ್ಯವನ್ನು ಮುನ್ನಡೆಸಬೇಕಾದರೆ ಆರ್ಥಿಕತೆ ಮುಖ್ಯವಾಗಿದೆ. ಮತ್ತೆ ಲಾಕ್ ಡೌನ್ ಮಾಡಿದರೆ ಬಡವರು, ರೈತರು, ಕಾರ್ಮಿಕರು‌ ಕಂಗಾಲಾಗುತ್ತಾರೆ. ಸಿಎಂ‌ ಯಡಿಯೂರಪ್ಪ ಮತ್ತು ಸಚಿವ ಸಂಪುಟ ತೆಗದುಕೊಂಡಿರುವ ನಿರ್ಧಾರ ಕಾನೂನು‌ ಬದ್ದವಾಗಿದೆ ಎಂದು ಹೇಳಿದರು.

ಕೊರೊನಾ ಹೆಚ್ಚಿರುವ ಜಿಲ್ಲೆ ಮತ್ತು ಪ್ರದೇಶಗಳನ್ನು ಸೀಲ್ ಡೌನ್ ಮಾಡುವ ಜೊತೆಗೆ ಆ ಭಾಗದ‌ ಜನರು ಹೊರ ಹೋಗದಂತೆ ನೋಡಿಕೊಳ್ಳಬೇಕಾಗಿದೆ. ಲಾಕ್‌ಡೌನ್ ನಿಂದ ರಾಜ್ಯಕ್ಕೆ, ಜನತೆಗೆ ಮತ್ತಷ್ಟು ಹೊರೆಯಾಗಲಿದ್ದು, ಅದು ಉತ್ತಮ ಮಾರ್ಗವಲ್ಲ ಎಂದು ಅಭಿಪ್ರಾಯಪಟ್ಟರು.

ಲಾಕ್​ಡೌನ್​ ನಿಂದ ಈಗಾಗಿರುವ ನಷ್ಟಕ್ಕೆ ಸರ್ಕಾರ ಎಷ್ಟು ಲಕ್ಷ ಕೋಟಿ ಪ್ಯಾಕೇಜ್ ಗಳನ್ನು ವಿತರಿಸಿದರೂ ಮತ್ತು ಯೋಜನೆಗಳನ್ನು ತಂದರೂ ಸಾಲದು. ಹೀಗಾಗಿ ಸಿಎಂ ಲಾಕ್‌ಡೌನ್ ಬದಲಿಗೆ ಸೀಲ್ ಡೌನ್ ಮಾಡಲು ಹೊರಟಿರುವುದು ಒಳ್ಳೆಯ ನಿರ್ಧಾರ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.