ಕೋಲಾರ: ಅಂಗನವಾಡಿ ಶಿಕ್ಷಕಿ ಹಾಗೂ ಸಹಾಯಕಿಯ ನಿರ್ಲಕ್ಷ್ಯದಿಂದಾಗಿ ಮಗುವೊಂದು ಶೌಚಾಲಯದಲ್ಲಿಯೇ ಕಾಲ ಕಳೆದಿರುವ ಘಟನೆ ಕೋಲಾರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಆರೋಹಳ್ಳಿ ಗ್ರಾಮದಲ್ಲಿ ಈ ಘಟನೆ ಜರುಗಿದ್ದು, ಅಂಗನವಾಡಿ ಶಿಕ್ಷಕಿ ಹಾಗೂ ಸಹಾಯಕಿಯ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂಗನವಾಡಿ ಶಿಕ್ಷಕಿ ಸುಧಾ ಹಾಗೂ ಸಹಾಯಕಿ ಶಾರದ ಎಂಬುವರ ಎಡವಟ್ಟಿನಿಂದಾಗಿ, ಮಗು ಕೆಲ ಕಾಲ ಶೌಚಾಲಯದಲ್ಲಿಯೇ ಬಂಧಿಯಾಗಿದೆ. ಎಂದಿನಂತೆ ಅಂಗನವಾಡಿಗೆ ಹೋಗಿದ್ದ ಬಾಲಕ ಮನೆಗೆ ಬರುವ ವೇಳೆ ಶೌಚಾಲಯಕ್ಕೆ ಹೋಗಿದ್ದು, ಅದನ್ನು ನೋಡದೆ ಶಿಕ್ಷಕಿ ಹಾಗೂ ಸಹಾಯಕಿ ಅಂಗನವಾಡಿ ಶೌಚಾಲಯಕ್ಕೆ ಬೀಗ ಜಡಿದುಕೊಂಡು ಬಂದಿದ್ದಾರೆ.
ನಂತರ ಉರಲ್ಲೆಲ್ಲಾ ಮಗನಿಗಾಗಿ ಹುಡುಕಾಡಿದ ಪೋಷಕರು, ಕೊನೆಗೆ ಅಂಗನವಾಡಿ ಬಳಿ ಬಂದಾಗ. ಶೌಚಾಲಯದಲ್ಲಿ ಬಾಲಕ ಅಳುತ್ತಿರುವುದು ಕಂಡು ಬಂದಿದೆ. ಶೌಚಾಲಯದಲ್ಲಿ ಬಾಲಕ ಪತ್ತೆಯಾಗಿದ್ದಾನೆ. ಅಂಗನವಾಡಿ ಶಿಕ್ಷಕಿ ಹಾಗೂ ಸಹಾಯಕಿ ಬೇಜವಾಬ್ದಾರಿಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಬಾಲಕನನ್ನು ಶೌಚಾಲಯದಿಂದ ಹೊರಗೆ ಕರೆತಂದ ವಿಡಿಯೋ ಸದ್ಯ ವೈರಲ್ ಆಗಿದೆ.
ಇದನ್ನೂ ಓದಿ: ಕ್ಲಿನಿಕ್ನೊಳಗೆ ಲಾಕ್ ಆದ ಮಗು : ಅಗ್ನಿಶಾಮಕ ದಳ ಬಂದ ಮೇಲೆ ಡಾಕ್ಟರ್ ಮುಖದಲ್ಲಿ ನಗು