ETV Bharat / state

ಬೆಲ್‌ ಮುಗಿಯೋದ್ರೊಳಗೆ ಶಾಸಕರು ತಮ್ಮ ಸ್ಥಾನದಲ್ಲಿರ್ಬೇಕು; ಇಲ್ದಿದ್ರೆ ಏನಾಗುತ್ತೆ? ಭವಿಷ್ಯ ನುಡಿದ ಸ್ಪೀಕರ್

ಅತೃಪ್ತರ ರಾಜೀನಾಮೆ ಅಂಗೀಕಾರ ವಿಚಾರದಲ್ಲಿ ಸಂವಿಧಾನದ ಚೌಕಟ್ಟು ಬಿಟ್ಟು ಕೆಲಸ ಮಾಡಲ್ಲ ಎಂದು ತಿಳಿಸಿರುವ ವಿಧಾನಸಭಾಧ್ಯಕ್ಷ ರಮೇಶ್‌ ಕುಮಾರ್​​, ಹೇಗೆಲ್ಲಾ ಕಾನೂನುಗಳು ಕೆಲಸ ಮಾಡಲಿವೆ ಅನ್ನೋದರ ಬಗ್ಗೆ ಸ್ವತಃ ವಿವರಣೆ ನೀಡಿದ್ದಾರೆ.

author img

By

Published : Jul 17, 2019, 1:16 PM IST

Updated : Jul 17, 2019, 1:31 PM IST

ವಿಧಾನಸಭಾಧ್ಯಕ್ಷ ರಮೇಶ್‌ ಕುಮಾರ್

ಕೋಲಾರ: ನಾಳೆ ವಿಶ್ವಾಸಮತ ಯಾವ ರೀತಿ ನಡೆಯುತ್ತದೆ ಎಂಬುದರ ಬಗ್ಗೆ ಸ್ಪೀಕರ್ ರಮೇಶ್ ಕುಮಾರ್ ವಿವರಿಸಿದ್ದಾರೆ.

ಸಂವಿಧಾನದ ಚೌಕಟ್ಟಿನಲ್ಲಿ ನಾಳೆ ವಿಶ್ವಾಸಮತ ಪ್ರಕ್ರಿಯೆ ನಡೆಯುತ್ತೆ. ಮೊದಲು ಮತ ಹಾಕಿ ಎಂದು ಹೇಳಲಾಗುತ್ತೆ. ನಂತರ ಪರ ಹಾಗೂ ವಿರೋದ ಇರುವ ಶಾಸಕರು ಕೈ ಮೇಲಕ್ಕೆ ಎತ್ತಬೇಕು. ಒಂದು ವೇಳೆ ಆಡಳಿತ ಅಥವಾ ಪ್ರತಿ ಪಕ್ಷದವರು ವಿಭಜನೆ ಆಗಬೇಕು ಅಂತ ಕೇಳಿದರೆ, ಒಂದೊಂದು ರೂಮಿನಲ್ಲಿ ಶಾಸಕರನ್ನು ಕೂರಿಸಿ ಯಾರು ಯಾರ ಪರವಾಗಿದ್ದಾರೆ ಎಂದು ಎಣಿಸಲಾಗುತ್ತೆ. ನಂತರ ಫಲಿತಾಂಶ ಪ್ರಕಟ ಮಾಡುತ್ತೇವೆ.

ಒಂದು ವೇಳೆ ವಿಭಜನೆ ಕೇಳಿದರೆ ನಮ್ಮಲ್ಲಿ ಡಿವಿಷನ್​​ ಬೆಲ್ ಅಂತ ಇರುತ್ತೆ. ಕೆಲ ನಿಮಿಷಗಳ ಕಾಲ ಆ ಬೆಲ್ ರಿಂಗ್ ಆಗುತ್ತೆ. ರಿಂಗ್ ಮುಗಿಯುವ ಒಳಗೆ ಶಾಸಕರು ಬಂದು ತಮ್ಮ ಸ್ಥಾನಗಳಲ್ಲಿ ಕೂರಬೇಕು. ಡಿವಿಷನ್ ಬೆಲ್ ಮುಗಿದ ಒಂದು ಸೆಕೆಂಡ್​​ನಲ್ಲೇ ಬಾಗಿಲು ಮುಚ್ಚುತ್ತೇವೆ. ನಂತರ ಯಾರೇ ಶಾಸಕರು ಬಂದರೂ ಬಾಗಿಲು ತೆರೆಯೋದಿಲ್ಲ. ಬಳಿಕ ಸದನದಲ್ಲಿ ಮತದಾನ ನಡೆಸಿ ಬಹುಮತ ಯಾರಿಗೆ ಇರುತ್ತೋ ಅವರು ಗೆದ್ದಂತೆ. ಇದಕ್ಕೆ ಯಾವುದೇ ಕಾಲಮಿತಿ ಇಲ್ಲ. ಇದೆಲ್ಲಾ ಬೇಡ, ಬೇರೆ ಚರ್ಚೆ ಮಾಡಿ ಅಂದ್ರೆ ಅದಕ್ಕೂ ಸಿದ್ಧ. ಈ ವೇಳೆ ಯಾರು ಸಹಿತ ಅಸಂಸದೀಯ ಪದ ಬಳಸಬಾರದು ಎಂದು ಸದಸ್ಯರಿಗೆ ಸ್ಪೀಕರ್​ ತಾಕೀತು ಮಾಡಿದರು.

Intro:Body:

Ramesh Kumar

Conclusion:
Last Updated : Jul 17, 2019, 1:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.