ಕೋಲಾರ: ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಮನೆಗೆ ಕಳಿಸಿದ್ದ ಮಹಿಳೆ, ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಂತೆ ಉಸಿರಾಡಿರುವಂತಹ ಘಟನೆ ಜಿಲ್ಲೆಯ ಕೆಜಿಎಫ್ನಲ್ಲಿ ನಡೆದಿದೆ.
ಕೆಜಿಎಫ್ ನಗರದ ಓಲ್ಡ್ ಓರಿಯಂಟ್ ಲೈನ್ ಬಡಾವಣೆಯಲ್ಲಿ ದೀಪಾ ಎಂಬ ಮಹಿಳೆ ಮನೆ ಬಳಿ ಕುಸಿದು ಬಿದ್ದಿದ್ದಳು. ಈ ವೇಳೆ, ಕುಟುಂಬಸ್ಥರು ಆಕೆಯನ್ನು ಕೆಜಿಎಫ್ನಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ತಪಾಸಣೆ ನಡೆಸಿದ ಬೈದ್ಯರು ಮಾರ್ಗ ಮಧ್ಯೆದಲ್ಲಿಯೇ ಮಹಿಳೆ ಮೃತಪಟ್ಟಿದ್ದಾಳೆ ಎಂದು ತಿಳಿಸಿದ್ದರು.
ಈ ಹಿನ್ನೆಲೆಯಲ್ಲಿ ಮಹಿಳೆಯ ಅಂತ್ಯ ಸಂಸ್ಕಾರಕ್ಕೆ ಕುಟುಂಬಸ್ಥರು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಆದರೆ, ಪವಾಡ ಎಂಬಂತೆ ಮಹಿಳೆ ಉಸಿರಾಡತೊಡಗಿದ್ದಾಳೆ. ಕೂಡಲೇ ಆಕೆಯನ್ನು ಕುಟುಂಬಸ್ಥರು ಆಸ್ಪತ್ರೆಗೆ ಸೇರಿಸಿದ್ದು, ಮಹಿಳೆ ಸದ್ಯ ಆರಾಮಗಿದ್ದಾಳೆ ಎನ್ನಲಾಗುತ್ತಿದೆ.
ಓದಿ: ಆತ್ಮೀಯರ ಜೊತೆ ಬೆಳಗ್ಗೆ ಸಿದ್ದರಾಮಯ್ಯ ವಾಯು ವಿಹಾರ: ಮನೆಯಲ್ಲಿ ಪಾಲಿಕೆ ಸದಸ್ಯರ ಸಭೆ
ಸರ್ಕಾರಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದ ಘಟನೆ ಜರುಗಿದೆ ಎಂದು ಆರೋಪಿಸಿ ಮಹಿಳೆ ಕುಟುಂಬಸ್ಥರು ಆಸ್ಪತ್ರೆ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ.