ETV Bharat / state

ಕೋಲಾರದಲ್ಲಿ ನೃತ್ಯಾಭ್ಯಾಸ ಮಾಡುವಾಗ ಕುಸಿದು ಬಿದ್ದು ವಿದ್ಯಾರ್ಥಿನಿ ಸಾವು! - kolar news

ಕೋಲಾರ ಜಿಲ್ಲೆಯ ಬೇತಮಂಗಲ ಹೋಬಳಿಯ ಟಿ.ಗೊಲ್ಲಹಳ್ಳಿ ಗ್ರಾಮದ ಬಳಿ ಇರುವ ವಿಮಲ ಹೃದಯ ಶಾಲೆಯಲ್ಲಿ ಶನಿವಾರ ಅವಘಡವೊಂದು ನಡೆದಿದೆ. ಶಾಲಾ ವಾರ್ಷಿಕೋತ್ಸವ ಇದ್ದ ಹಿನ್ನೆಲೆಯಲ್ಲಿ 9 ನೇ ತರಗತಿಯ ಪೂಜಿತಾ ಎಂಬ ವಿದ್ಯಾರ್ಥಿನಿ ನೃತ್ಯಾಭ್ಯಾಸ ಮಾಡುತ್ತಿರುವ ಸಂದರ್ಭದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ.

a-student-dies-after-collapsing-while-dancing-at-kolar
a-student-dies-after-collapsing-while-dancing-at-kolar
author img

By

Published : Jan 24, 2020, 4:17 PM IST

Updated : Jan 24, 2020, 7:31 PM IST

ಕೋಲಾರ: ಜಿಲ್ಲೆಯ ಬೇತಮಂಗಲ ಹೋಬಳಿಯ ಟಿ.ಗೊಲ್ಲಹಳ್ಳಿ ಗ್ರಾಮದ ಬಳಿ ಇರುವ ವಿಮಲ ಹೃದಯ ಶಾಲೆಯಲ್ಲಿ ನೃತ್ಯಾಭ್ಯಾಸ ಮಾಡುತ್ತಿರುವ ಸಂದರ್ಭದಲ್ಲಿ ಕುಸಿದು ಬಿದ್ದ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟ ದುರ್ಘಟನೆ ನಡೆದಿದೆ.

ನೃತ್ಯಾಭ್ಯಾಸ ಮಾಡುವಾಗ ಕುಸಿದು ಬಿದ್ದು ವಿದ್ಯಾರ್ಥಿನಿ ಸಾವು

9 ನೇ ತರಗತಿಯ ಪೂಜಿತಾ ಸಾವನ್ನಪ್ಪಿದ ವಿದ್ಯಾರ್ಥಿನಿಯಾಗಿದ್ದು, ನೃತ್ಯ ಮಾಡುವ ವೇಳೆ ವಿದ್ಯಾರ್ಥಿನಿ ಕುಸಿದು ಬಿದ್ದಿರುವ ದೃಶ್ಯಗಳು ಶಾಲೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಯಲ್ಲಿ ಸೆರೆಯಾಗಿದೆ. ಶನಿವಾರ ಶಾಲಾ ವಾರ್ಷಿಕೋತ್ಸವ ಇದ್ದ ಹಿನ್ನೆಲೆ ನಿನ್ನೆ ವಿದ್ಯಾರ್ಥಿನಿ ತಮ್ಮ ಸ್ನೇಹಿತರೊಂದಿಗೆ ಶಾಲೆಯಲ್ಲಿ ನೃತ್ಯಾಭ್ಯಾಸ ಮಾಡುತ್ತಿದ್ದಳು, ಈ ವೇಳೆ, ನೃತ್ಯ ಮಾಡುತ್ತಲೇ ವಿದ್ಯಾರ್ಥಿನಿ ಕುಸಿದು ಬಿದ್ದಿದ್ದಾಳೆ. ವಿದ್ಯಾರ್ಥಿನಿಯನ್ನ ಸ್ಥಳೀಯ ಬೇತಮಂಗಲ ಅಸ್ಪತ್ರೆಗೆ ರವಾನಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ.

ಇನ್ನು ವಿಧ್ಯಾರ್ಥಿನಿ ಕೆಳಗೆ ಕುಸಿದು ಬಿದ್ದರೂ ಸಹ ಮಾನವೀಯತೆ ಪ್ರದರ್ಶಿಸದೇ ಶಿಕ್ಷಕರೊಬ್ಬರು ಕುಳಿತಲ್ಲಿಯೇ ಇದ್ದು, ನಂತರ ಎರಡು ಜೇಬಲ್ಲಿ ಕೈಯಿಟ್ಟು ನಿಂತು ನೋಡುತ್ತಿದ್ದದ್ದು, ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಲ್ಲದೇ ವಿದ್ಯಾರ್ಥಿನಿ ಕುಸಿದು ಬಿದ್ದ ತಕ್ಷಣ ಆಸ್ಪತ್ರೆಗೆ ಸಾಗಿಸದೇ ಶಾಲಾ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ವಿದ್ಯಾರ್ಥಿನಿಯ ಅಗಲಿಕೆಯಿಂದ ಶಾಲೆಯ ಬಳಿ ನೀರವ ಮೌನ ಆವರಿಸಿದೆ.

Intro:ಆಂಕರ್: ನೃತ್ಯಾಭ್ಯಾಸ ಮಾಡುವಾಗ ವಿದ್ಯಾರ್ಥಿಯೋರ್ವಳು ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ ಜರುಗಿದೆ.

Body:ಕೋಲಾರ ಜಿಲ್ಲೆ ಬೇತಮಂಗಲ ಹೋಬಳಿಯ ಟಿ.ಗೊಲ್ಲಹಳ್ಳಿ ಗ್ರಾಮದ ಬಳಿ ಇರುವ ವಿಮಲ ಹೃದಯ ಶಾಲೆಯಲ್ಲಿ ಈ ಘಟ‌ನೆ ಜರುಗಿದ್ದು, 9 ನೇ ತರಗತಿಯ ಪೂಜಿತ ಸಾವನ್ನಪ್ಪಿದ ವಿದ್ಯಾರ್ಥಿನಿಯಾಗಿದ್ದಾಳೆ. ಇನ್ನು ನೃತ್ಯ ಮಾಡುವ ವೇಳೆ ವಿದ್ಯಾರ್ಥಿನಿ ಕುಸಿದು ಬಿದ್ದಿರುವ ದೃಶ್ಯಗಳು ಶಾಲೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಯಲ್ಲಿ ಸೆರೆಯಾಗಿದೆ. ಶನಿವಾರ ಶಾಲಾ ವಾರ್ಷಿಕೋತ್ಸವ ಇದ್ದ ಹಿನ್ನಲೆ ನಿನ್ನೆ ವಿದ್ಯಾರ್ಥಿನಿ ತಮ್ಮ ಸ್ನೇಹಿತರೊಂದಿಗೆ ಶಾಲೆಯಲ್ಲಿ ನೃತ್ಯ ಅಭ್ಯಾಸವನ್ನ ಮಾಡುತ್ತಿದ್ದಳು, ಈ ವೇಳೆ ನೃತ್ಯ ಮಾಡುತ್ತಲೇ ವಿದ್ಯಾರ್ಥಿನಿ ಕುಸಿದು ಬಿದ್ದಿದ್ದಾಳೆ. ಈ ವೇಳೆ ವಿದ್ಯಾರ್ಥಿನಿಯನ್ನ ಸ್ಥಳೀಯ ಬೇತಮಂಗಲ ಅಸ್ಪತ್ರೆಗೆ ರವಾನಿಸಿದ್ದು, ಹೆಚ್ಚಿನ ಚಿಕಿತ್ಸೆಗೆ ಕೋಲಾರದ ಖಾಸಗೀ ಆಸ್ಪತ್ರೆಗೆ ಸಾಗಿಸಲಾದರು, ಚಿಕಿತ್ಸೆ ಫಲಕಾರಿಯಾಗದೆ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ. ಇನ್ನು ವಿಧ್ಯಾರ್ಥಿನಿ ಕೆಳಗೆ ಕುಸಿದು ಬಿದ್ದರು ಸಹ ಮಾನವೀಯತೆ ಪ್ರದರ್ಶಿಸದೆ ಶಿಕ್ಷಕನೋರ್ವ ಕುಳಿತಲ್ಲಿಯೇ ಇದ್ದು, ನಂತರ ಎರಡು ಜೇಬಲ್ಲಿ ಕೈಯಿಟ್ಟು ನಿಂತು ನೋಡುತ್ತಿದ್ದದ್ದು, ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಲ್ಲದೆ ವಿದ್ಯಾರ್ಥಿನಿ ಕುಸಿದು ಬಿದ್ದ ತಕ್ಷಣ ಆಸ್ಪತ್ರೆಗೆ ಸಾಗಿಸದೆ ಶಾಲಾ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನಲಾಗಿದೆ.

Conclusion:ಒಟ್ನಲ್ಲಿ ವಿದ್ಯಾರ್ಥಿನಿಯ ಅಗಲಿಕೆಯಿಂದ ಶಾಲೆಯ ಬಳಿ ನೀರವ ಮೌನ ಆವರಿಸಿದೆ.
Last Updated : Jan 24, 2020, 7:31 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.