ETV Bharat / state

ಕೌಟುಂಬಿಕ ಕಲಹ : ಮಾರಕಾಸ್ತ್ರದಿಂದ ಹಲ್ಲೆಗೈದು ಪತ್ನಿ ಹತ್ಯೆಗೈದ ವ್ಯಕ್ತಿ.. ಕುಟುಂಬಸ್ಥರ ಮೇಲೂ ದಾಳಿ - ಕುಟುಂಬಸ್ಥರ ಮೇಲೂ ದಾಳಿ

ವ್ಯಕ್ತಿಯೋರ್ವ ಪತ್ನಿ ಮೇಲೆ ಮಚ್ಚಿನಿಂದ ದಾಳಿ ನಡೆಸಿ ಹತ್ಯೆಗೈದಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಈ ವೇಳೆ ತಡೆಯಲು ಬಂದ ಮಾವ, ಅತ್ತೆ ಮತ್ತು ಸಂಬಂಧಿಕರ ಮೇಲೂ ಆರೋಪಿ ಹಲ್ಲೆಗೈದಿದ್ದಾನೆ.

a-man-killed-wife-attcked-relatives-in-kolar
ಕೌಟುಂಬಿಕ ಕಲಹ : ಮಾರಕಾಸ್ತ್ರದಿಂದ ಹಲ್ಲೆಗೈದು ಪತ್ನಿ ಹತ್ಯೆಗೈದ ವ್ಯಕ್ತಿ..ಕುಟುಂಬಸ್ಥರ ಮೇಲೂ ದಾಳಿ
author img

By ETV Bharat Karnataka Team

Published : Sep 13, 2023, 5:33 PM IST

ಎಸ್ಪಿ ನಾರಾಯಣ್ ಮಾಹಿತಿ

ಕೋಲಾರ : ಕೌಟುಂಬಿಕ ಕಲಹ ಹಿನ್ನೆಲೆ ವ್ಯಕ್ತಿಯೊಬ್ಬ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿ, ಆಕೆಯ ಕುಟುಂಬಸ್ಥರ ಮೇಲೂ ಮಚ್ಚಿನಿಂದ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ನಂಬಿಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ನಂಬಿಹಳ್ಳಿ ಗ್ರಾಮ ನಾಗೇಶ್​ ಎಂಬಾತ ಹಲ್ಲೆ ನಡೆಸಿದ್ದು, ಮೃತರನ್ನು ರಾಧಾ ಎಂದು ಗುರುತಿಸಲಾಗಿದೆ.

ಮಂಗಳವಾರ ಸಂಜೆ ನಾಗೇಶ್​ ತನ್ನ ಮೊದಲನೇ ಪತ್ನಿ ರಾಧಾ ಮೇಲೆ ಏಕಾಏಕಿ ಮಚ್ಚಿನಿಂದ ಹಲ್ಲೆಗೈದು ಹತ್ಯೆ ಮಾಡಿದ್ದಾನೆ. ಈ ವೇಳೆ ತಡೆಯಲು ಬಂದ ಮಾವ, ಅತ್ತೆ, ನಾದುನಿ, ಮೈದುನನ ಮೇಲೂ ಮಚ್ಚಿನಿಂದ ದಾಳಿ ನಡೆಸಿದ್ದಾನೆ. ಇದರಿಂದ ಮಾವ ಮುನಿಯಪ್ಪ ಗಂಭೀರ ಗಾಯಗೊಂಡಿದ್ದು, ಬಾಮೈದ, ನಾದಿನಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮೊದಲು ಮೃತ ರಾಧಾಳನ್ನು ಮದುವೆಯಾಗಿದ್ದ ನಾಗೇಶ್​, ಬಳಿಕ ಎರಡನೇ ಮದುವೆಯಾಗಿ ಎರಡನೇ ಹೆಂಡತಿ ಜೊತೆಗೆ ಸಂಸಾರ ನಡೆಸುತ್ತಿದ್ದ. ಹಾಗಾಗಿ ನಾಗೇಶನಿಗೆ ಮೊದಲ ಪತ್ನಿ ರಾಧಾ ವಿಚ್ಛೇದನ ನೀಡುವಂತೆ ಕೇಳಿದ್ದಳು. ಆಕೆ ತವರು ಮನೆ ನಂಬಿಹಳ್ಳಿ ಗ್ರಾಮದಲ್ಲೇ ಒಂದು ಚಿಲ್ಲರೆ ಅಂಗಡಿ ಇಟ್ಟುಕೊಂಡು, ಟೈಲರಿಂಗ್​ ವೃತ್ತಿಯಿಂದ ಜೀವನ ಸಾಗಿಸುತ್ತಿದ್ದಳು. ಈ ವಿಚಾರವಾಗಿ ಕಳೆದ ಏಳು ವರ್ಷಗಳಿಂದ ಇಬ್ಬರ ನಡುವೆ ಗಲಾಟೆ ನಡೆಯುತ್ತಲೇ ಇತ್ತು.

ಆದರೆ ಮಂಗಳವಾರ ಸಂಜೆ ವೇಳೆಗೆ ಏಕಾಏಕಿ ಮಚ್ಚು ಹಿಡಿದು ಮನೆಗೆ ಬಂದ ನಾಗೇಶ್​ ಅಂಗಡಿಯಲ್ಲಿದ್ದ ತನ್ನ ಹೆಂಡತಿ ರಾಧಾಳ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ತಡೆಯಲು ಬಂದ ಮಾವ ಮುನಿಯಪ್ಪ, ನಾದನಿ ಅನುಷಾ, ಹಾಗೂ ಬಾಮೈದ ವರುಣ್​ ಎಂಬಾತನ ಮೇಲೂ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ.

ಘಟನೆ ಬಳಿಕ ಗ್ರಾಮಸ್ಥರು ಆರೋಪಿಯನ್ನು ಸುತ್ತುವರೆದಿದ್ದಾರೆ. ಈ ವೇಳೆಯಲ್ಲಿ ಆರೋಪಿ ಇಲ್ಲಿಯೇ ಇದ್ದ ಹೋಟೆಲ್​ ಒಂದಕ್ಕೆ ಸೇರಿಕೊಂಡಿದ್ದಾನೆ. ಆಗ ಗ್ರಾಮಸ್ಥರು ಆರೋಪಿ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದು, ಈ ವೇಳೆ ಸ್ಥಳಕ್ಕೆ ಆಗಮಿಸಿದ ಶ್ರೀನಿವಾಸಪುರ ಪೊಲೀಸರು ಜನರನ್ನು ನಿಯಂತ್ರಿಸಿದ್ದಾರೆ. ಈ ಸಂದರ್ಭದಲ್ಲಿ ಆರೋಪಿ ತಾನು ಸೇರಿಕೊಂಡಿದ್ದ ಹೋಟೆಲ್​ನಲ್ಲಿ ಗ್ಯಾಸ್​ ಸಿಲಿಂಡರ್​ನ್ನು ಹಿಡಿದು ಸ್ಫೋಟ ನಡೆಸಿ ​ಸಾಯುವ ಬೆದರಿಕೆ ಹಾಕಿದ್ದಾನೆ.

ಸ್ಥಳಕ್ಕೆ ಬಂದ ಎಸ್ಪಿ ನಾರಾಯಣ್​ ಗಾಳಿಯಲ್ಲಿ ಸುಮಾರು ಏಳೆಂಟು ಬಾರಿ ಗುಂಡು ಹಾರಿಸಿ ಜನರನ್ನು ಚದುರಿಸಿದರು. ಬಳಿಕ ತಕ್ಷಣವೇ ಆರೋಪಿ ಸೇರಿಕೊಂಡಿದ್ದ ಮನೆಯ ಬಾಗಿಲು ಮುರಿದು ಆತನನ್ನು ಬಂಧಿಸಲು ಯತ್ನಿಸಿದರು. ಈ ವೇಳೆ ನಾಗೇಶ್ ಪೊಲೀಸರ ಮೇಲೆಯೇ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಈ ಸಂದರ್ಭ ಪೊಲೀಸರು ಆರೋಪಿಯ ಎರಡು ಕಾಲು ಹಾಗೂ ಕೈಗೆ ಗುಂಡು ಹಾರಿಸಿ ನಂತರ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಬಗ್ಗೆ ಎಸ್ಪಿ ನಾರಾಯಣ್ ಮಾಹಿತಿ ನೀಡಿದರು.

ಇದನ್ನೂ ಓದಿ : ಬೆಂಗಳೂರು: ಮರ್ಮಾಂಗದಲ್ಲಿಟ್ಟು ಕೋಟ್ಯಂತರ ಮೌಲ್ಯದ ಡ್ರಗ್ಸ್ ಸಾಗಿಸುತ್ತಿದ್ದ ವಿದೇಶಿ ಮಹಿಳೆ ವಶಕ್ಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.