ಕೋಲಾರ : ಕೋಳಿಗಳಿಂದ ಕೊರೊನಾ ಹರಡುತ್ತದೆ ಎಂಬ ವದಂತಿ ಹಿನ್ನೆಲೆಯಲ್ಲಿ ಮಾಲೀಕನೋರ್ವ ಸಾವಿರಾರು ಕೋಳಿ ಮರಿಗಳನ್ನು ಜೀವಂತ ಸಮಾಧಿ ಮಾಡಿರುವಂತಹ ಘಟನೆ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಮಾಗೊಂದಿ ಗ್ರಾಮದಲ್ಲಿ ನಡೆದಿದೆ.
ಮಾಗೊಂದಿ ಗ್ರಾಮದ ಹೇಮಂತ್ ರೆಡ್ಡಿ ಎಂಬುವರು ತಮಗೆ ಸೇರಿದ ಕೋಳಿ ಫಾರಂನಲ್ಲಿ ಸುಮಾರು 9,500 ಕೋಳಿಗಳು ಹಾಗು ಮರಿಗಳನ್ನು ಕೊಂದು ಹಾಕಿದ್ದಾರೆ.