ETV Bharat / state

ಮುನಿಯಪ್ಪ ಸೋಲು ಖಚಿತ, ಹಾಸನ, ಮಂಡ್ಯದಲ್ಲಿ ಕಮಲ ಹವಾ: ಲಿಂಬಾವಳಿ ಭವಿಷ್ಯ - ಸಂಸದ ಕೆ.ಹೆಚ್.ಮುನಿಯಪ್ಪ

ಸತತ ಏಳು ಬಾರಿ ಗೆಲುವು ಸಾಧಿಸಿರುವ ಮೂಲಕ ಸೋಲಿಲ್ಲದ ಸರದಾರರೆಂದೇ ಗುರುತಿಸಿಕೊಂಡಿರುವ ಕೆ.ಹೆಚ್​.ಮುನಿಯಪ್ಪ ಅವರ ಎಂಟನೆ ಗೆಲುವಿಗೆ ಭಾರತೀಯ ಜನತಾ ಪಾರ್ಟಿ ಅಡ್ಡಗಾಲು ಹಾಕುತ್ತಾ? ಮಹದೇವಪುರ ಶಾಸಕ ಅರವಿಂದ್ ಲಿಂಬಾವಳಿ ಈ ಬಗ್ಗೆ ಭವಿಷ್ಯವೊಂದನ್ನು ನುಡಿದರು.

ಮಹದೇವಪುರ ಶಾಸಕ ಅರವಿಂದ್ ಲಿಂಬಾವಳಿ
author img

By

Published : Mar 28, 2019, 7:03 PM IST

ಕೋಲಾರ: ಈ ಬಾರಿ ಕೋಲಾರದಲ್ಲಿ ಹಾಲಿ ಸಂಸದ ಕೆ.ಹೆಚ್.ಮುನಿಯಪ್ಪಗೆ ಸೋಲು ಖಚಿತ ಎಂದು ಮಹದೇವಪುರ ಶಾಸಕ ಅರವಿಂದ್ ಲಿಂಬಾವಳಿ ಭವಿಷ್ಯ ನುಡಿದರು.

ಇಂದು ನಗರಕ್ಕೆ ಆಗಮಿಸಿ ಬಿಜೆಪಿ ಮುಖಂಡರ ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೋಲಾರದಲ್ಲಿ ಈ ಬಾರಿ ಕೆ.ಹೆಚ್.ಮುನಿಯಪ್ಪ ಸೋಲುವುದು ಖಚಿತ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಭರ್ಜರಿ ಗೆಲುವು ಸಾಧಿಸಲಿದ್ದಾರೆ ಎಂದರು.

ಇದೇ ವೇಳೆ ಸುಮಲತಾ ಅಂಬರೀಶ್ ಪರ ಬ್ಯಾಟಿಂಗ್ ನಡೆಸಿದ ಅವರು, ಅಂಬರೀಶ್ ಅವರಿಗೆ ಗೌರವ ನೀಡುವ ಸಲುವಾಗಿ ಮಂಡ್ಯದಲ್ಲಿ ಈ ಬಾರಿ ಸುಮಲತಾ ಅವರಿಗೆ ಬೆಂಬಲ ನೀಡಿದ್ದೇವೆ. ಅಲ್ಲದೆ ಮಂಡ್ಯ ಹಾಗೂ ಹಾಸನದಲ್ಲಿ ಜೆಡಿಎಸ್​ಅನ್ನು ಸೋಲಿಸಲು ಭಾರತೀಯ ಜನತಾ ಪಾರ್ಟಿ ಎಲ್ಲ ತಯಾರಿಯನ್ನು ಮಡಿಕೊಂಡಿದೆ. ಇನ್ನು ಸುಮಲತಾ ಅವರ ಪ್ರಚಾರಕ್ಕೆ ಜೆಡಿಎಸ್​ನವರು ಅಡ್ಡಿಪಡಿಸುತ್ತಿದ್ದು, ಸುಮಲತಾ ಸೇರಿದಂತೆ ನಟರಾದ ದರ್ಶನ್ ಹಾಗೂ ಯಶ್ ಅವರಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದರು.

ಇನ್ನು ಮೋದಿ ಮೋದಿ ಎಂದು ಘೋಷಣೆಗಳನ್ನ ಕೂಗಿದರೆ ಕಪಾಳ ಮೋಕ್ಷ ಮಾಡಿ ಎಂದಿರುವ ಜೆಡಿಎಸ್​ ಶಾಸಕ ನಾರಾಯಣಗೌಡ ಸೇರಿದಂತೆ ಜೆಡಿಎಸ್​ ಕುತಂತ್ರಗಳ ಬಗ್ಗೆ ಈಗಾಗಲೇ ಗೃಹ ಸಚಿವ ರಾಜನಾಥ್ ಸಿಂಗ್‍ ಅವರಿಗೆ ಪತ್ರ ಬರೆದಿರುವುದಾಗಿ ಹೇಳಿದರು.

ಸಚಿವ ಸಿ.ಎಸ್.ಪುಟ್ಟರಾಜು ಅವರ ಮನೆ ಮೇಲೆ ಐಟಿ ದಾಳಿಗೆ ಪ್ರತಿಕ್ರಿಯಿಸಿದ ಅವರು, ಈ ಕುರಿತು ಮಾಹಿತಿ ಇಲ್ಲ. ಆದರೆ ಬಿಜೆಪಿ, ಕಾಂಗ್ರೆಸ್​, ಜೆಡಿಎಸ್ ಎನ್ನದೆ ರಾಜಕೀಯ ಇತಿಹಾಸವಿಲ್ಲದವರ ಮೇಲೂ ದಾಳಿ ನಡೆದಿರುವ ನಿದರ್ಶನಗಳಿವೆ. ಅವರ ಕರ್ತವ್ಯ ಅವರು ಮಾಡುತ್ತಿದ್ದಾರೆ ಎಂದರು.

sample description
ETV Bharat Logo

Copyright © 2025 Ushodaya Enterprises Pvt. Ltd., All Rights Reserved.