ಕೋಲಾರ: ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ತಲೆ ಎತ್ತಿದ ದೇಶದ ಮೊದಲ ಐಫೋನ್ ಕಂಪನಿಯಾದ ವಿಸ್ಟ್ರಾನ್ನಲ್ಲಿ ನಿನ್ನೆ ಕಾರ್ಮಿಕರು ನಡೆಸಿದ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 119 ಜನ ಆರೋಪಿಗಳನ್ನು ಇಂದು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ ಪೊಲೀಸರು, 119 ಜನರನ್ನು ಕೋಲಾರ, ಕೆಜಿಎಫ್, ಚಿಂತಾಮಣಿ ಜೈಲಿಗೆ ರವಾನಿಸಿದರು. ಮೂರು ಬಸ್ಗಳ ಮೂಲಕ ಬಂಧಿತರನ್ನು ರವಾನಿಸಲಾಗಿದ್ದು, ಪೊಲೀಸ್ ಎಸ್ಕಾರ್ಟ್ ನಿಯೋಜಿಸಲಾಗಿದೆ.
ಎಸ್ಪಿ ಕಚೇರಿ ಬಳಿ ನೂರಾರು ಸಂಖ್ಯೆಯಲ್ಲಿ ಕಾರ್ಮಿಕರ ಪೋಷಕರು ಜಮಾವಣೆಗೊಂಡಿದ್ದು, ಬಂಧಿಸದಂತೆ ಮನವಿ ಮಾಡುತ್ತಿದ್ದಾರೆ.