ETV Bharat / state

ಬ್ರಹ್ಮಗಿರಿ ಬೆಟ್ಟ ಕುಸಿತ: ಮೃತರ ಕುಟುಂಬಸ್ಥರಿಗೆ ಪರಿಹಾರದ ಚೆಕ್ ವಿತರಿಸಿದ ಸಚಿವ ಸೋಮಣ್ಣ - ಕೊಡಗು ಗುಡ್ಡ ಕುಸಿತ

ಧಾರಾಕಾರ ಮಳೆಯಿಂದಾಗಿ ತಲಕಾವೇರಿಯಲ್ಲಿ ಸಂಭವಿಸಿದ ಬೆಟ್ಟ ಕುಸಿತ ದುರಂತದಲ್ಲಿ ಮೃತಪಟ್ಟ ನಾರಾಯಣ ಆಚಾರ್ ಹಾಗೂ ಆನಂದ ತೀರ್ಥ ಸ್ವಾಮೀಜಿ ಅವರ ಕುಟುಂಬಕ್ಕೆ ಪರಿಹಾರದ ಚೆಕ್​ನ್ನು ಸಚಿವ ವಿ. ಸೋಮಣ್ಣ ವಿತರಿಸಿದರು.

V. Somanna Distributed compensation checks
ಕೊಡಗು ಗುಡ್ಡ ಕುಸಿತ
author img

By

Published : Aug 15, 2020, 5:09 PM IST

ಕೊಡಗು‌ (ಭಾಗಮಂಡಲ): ತಲಕಾವೇರಿ ಗಜಗಿರಿ ಬೆಟ್ಟ ಕುಸಿತ ದುರಂತದಲ್ಲಿ ಮೃತಪಟ್ಟ ನಾರಾಯಣ ಆಚಾರ್ ಹಾಗೂ ಆನಂದ ತೀರ್ಥ ಸ್ವಾಮೀಜಿ ಅವರ ಕುಟುಂಬಕ್ಕೆ ಸಚಿವ ವಿ. ಸೋಮಣ್ಣ ಅವರು ಪರಿಹಾರ ಚೆಕ್ ವಿತರಿಸಿದರು.

ಗುಡ್ಡ ಕುಸಿತ ದುರಂತಲ್ಲಿ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ಚೆಕ್ ವಿತರಿಸಿದ ಸಚಿವ ವಿ.ಸೋಮಣ್ಣ

ಪ್ರಧಾನ ಅರ್ಚಕ ನಾರಾಯಣ ಆಚಾರ್ ಅವರ ಮಕ್ಕಳಾದ ನಮಿತಾ ಹಾಗೂ ಸುಶೀಲಾ ಅವರಿಗೆ ತಲಾ 2.5 ಲಕ್ಷ ಪರಿಹಾರ ಚೆಕ್ ಹಾಗೂ ಆನಂದ ತೀರ್ಥ ಸ್ವಾಮೀಜಿ ಬ್ರಹ್ಮಚಾರಿ ಆಗಿದ್ದರಿಂದ ಅವರ ತಂಗಿ ಸುಶೀಲಾ ಅವರಿಗೆ 5 ಲಕ್ಷ ರೂ. ಚೆಕ್ ನೀಡಿ ಸಾಂತ್ವನ ಹೇಳಿದರು.

ಇನ್ನು ಇಡೀ ಕುಟುಂಬವನ್ನು ಕಳೆದುಕೊಂಡು ಒಬ್ಬಂಟಿಯಾಗಿದ್ದೇನೆ. ಮತ್ತೆ ಮನೆಗೆ ಬರಲು ಯಾರೂ ಇಲ್ಲ. ಸುಖ ಹಾಗೂ ದುಃಖ‌ಗಳಲ್ಲಿ ಭಾಗಿಯಾಗುತ್ತಿದ್ದರು ಎಂದು ಅಣ್ಣಂದಿರನ್ನು ನೆನೆದು ಸುಶೀಲಾ ಕಣ್ಣೀರು ಹಾಕಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.