ETV Bharat / state

ವಿಭಿನ್ನ ಸಾಂಪ್ರದಾಯಿಕ ಸಂಸ್ಕೃತಿಯ ಅನಾವರಣಗೊಳಿಸಿದ ರಾಜ್ಯ ಅರೆಭಾಷೆ ಸಾಹಿತ್ಯ ವೇದಿಕೆ

ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಮುತ್ತಾರು ಮುಡಿ ಗ್ರಾಮದಲ್ಲಿ ಸಂಸ್ಕೃತಿ ಜನಪದ ಹಬ್ಬ ಆಯೋಜಿಸಲಾಗಿತ್ತು.

author img

By

Published : Jul 21, 2019, 10:48 PM IST

ಕೊಡಗಿನಲ್ಲಿ ಸಂಸ್ಕೃತಿ ಜನಪದ ಹಬ್ಬ

ಕೊಡಗು: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಮುತ್ತಾರು ಮುಡಿ ಗ್ರಾಮದಲ್ಲಿ ಆಯೋಜಿಸಿದ್ದ ಸಂಸ್ಕೃತಿ ಜನಪದ ಹಬ್ಬದಲ್ಲಿ ಅರೆಭಾಷೆ ಗೌಡ ಜನಾಂಗದ ಆಚಾರ ವಿಚಾರಗಳು ಅನಾವರಣಗೊಂಡಿತ್ತು.‌

ವೇದಿಕೆಯಲ್ಲಿ ಈ ಜನಾಂಗದ ಪೂರ್ವಜರು ಪುರಾತನ ಕಾಲದಲ್ಲಿ ಬಳಸುತ್ತಿದ್ದ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಹಚ್ಚ ಹಸಿರ ಸುಂದರ ಪ್ರಕೃತಿಯ ನಡುವೆ ಪುಟ್ಟ ವೇದಿಕೆ, ಸಾಂಪ್ರದಾಯಿಕ ಉಡುಪು ತೊಟ್ಟು ಕಳಸ ಹಿಡಿದು ನಿಂತಿರುವ ಮಹಿಳೆಯರು, ಕೃಷಿ ಚಟುವಟಿಕೆಗೆ ಬಳಸುವ ನೇಗಿಲು, ನೊಗ, ಮರ, ಗೊರಗ, ಅಡುಗೆ ಮಾಡಲು ಬಳಸುವ ಪುರಾತನ ಮಡಿಕೆ, ಕುಡಿಕೆಗಳು, ಸಾಂಪ್ರದಾಯಿಕ ತಿಂಡಿ ತಿನಿಸುಗಳು, ಹಿತ್ತಲಲ್ಲೇ ಬೆಳೆದ ಹಣ್ಣುಗಳು, ಹಣ್ಣುಗಳಿಂದ ತಯಾರಿಸಿದ ವೈನ್. ಹೀಗೆ ಪೂರ್ವಜರು ಬಳಸುತ್ತಿದ್ದ ವಸ್ತುಗಳನ್ನು ಸಮಾಜದ ಕಿರಿಯರಿಗೆ ಪರಿಚಯಿಸಲು ಹಮ್ಮಿಕೊಂಡಿದ್ದ ವಸ್ತುಪ್ರದರ್ಶನ ಆಕರ್ಷಣೆಯಿಂದ ಕೂಡಿದ್ದವು.

ಕೊಡಗಿನಲ್ಲಿ ಸಂಸ್ಕೃತಿ ಜನಪದ ಹಬ್ಬ

ಸುಂದರ ವೇದಿಕೆಯಲ್ಲಿ ಛದ್ಮವೇಷ, ಏಕಪಾತ್ರ ಅಭಿನಯ, ಹರಿಸೇವೆ, ಸೋಬಾನೆ ಕಂಪು, ಜಾನಪದ ಕೃಷಿ ನೃತ್ಯದ ಇಂಪು, ತಾಳ ತಪ್ಪದ ಕೋಲಾಟದ ನೃತ್ಯ, ಸುಗ್ಗಿ ಸುವಾಲಿ ಹಾಡು ಕುಣಿತದ ಜೊತೆ ಚಿಕ್ಕವರು ದೊಡ್ಡವರು ಎನ್ನದೆ ವಾದ್ಯಕ್ಕೆ ಹೆಜ್ಜೆ ಹಾಕಿದರು.‌ ಅರೆಭಾಷೆ ಗೌಡ ಜನಾಂಗದ ಸಾಂಸ್ಕೃತಿಕ ಸೊಗಡು, ಸಾಂಸ್ಕೃತಿಕ ನೃತ್ಯಕ್ಕೆ ಹೆಜ್ಜೆ ಹಾಕುವ ಪರಿ, ಅವರು ತೊಡುವ ಉಡುಗೆ ತೊಡುಗೆ ಅವರ ಸಂಸ್ಕೃತಿಯ ಶ್ರೀಮಂತಿಕೆಯನ್ನು ಬಿಂಬಿಸುತ್ತಿದ್ದವು.

Intro:ವಿಭಿನ್ನ ಸಾಂಪ್ರದಾಯಿಕ ಸಂಸ್ಕೃತಿಗೆ ಸಾಕ್ಷಿಯಾದ ರಾಜ್ಯ ಅರೆಭಾಷೆ ಸಾಹಿತ್ಯ ವೇದಿಕೆ 

ಕೊಡಗು: ವಿಶೇಷ ಸಂಸ್ಕೃತಿಯ ಪದ್ಧತಿ ಪರಂಪರೆ, ವಿಭಿನ್ನ ಆಚರಣೆಗಳಿಗೆ ಹೆಸರಾಗಿರುವ ಜಿಲ್ಲೆ ಕೊಡಗು.‌ ಜಿಲ್ಲೆಯಲ್ಲಿ  ಅರೆಭಾಷೆ ಗೌಡ ಜನಾಂಗದ ಆಚಾರ ವಿಚಾರ, ಜನಪದೀಯ ಆಚರಣೆ ಎಲ್ಲರ ಗಮನ ಸೆಳೆಯುತ್ತದೆ. ಅಂತಹ ಸಂಸ್ಕೃತಿಯ ಅನಾವರಣಕ್ಕೆ ವೇದಿಕೆಯಾಗಿತ್ತು ಜಿಲ್ಲೆಯ ಒಂದು ಪುಟ್ಟ ಹಳ್ಳಿ. 

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಮುತ್ತಾರು ಮುಡಿ ಗ್ರಾಮದಲ್ಲಿ ಆಯೋಜಿಸಿದ್ದ ಸಂಸ್ಕೃತಿ ಜನಪದ ಹಬ್ಬ ಅರೆಭಾಷೆ ಗೌಡ ಜನಾಂಗದ ಆಚಾರ ವಿಚಾರಗಳ ಅನಾವರಣಗೊಂಡಿತ್ತು.‌ವೇದಿಕೆಯಲ್ಲಿ ಪೂರ್ವಜರು ಪುರಾತನ ಕಾಲದಲ್ಲಿ ಬಳಸುತ್ತಿದ್ದ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. 

ಹಚ್ಚ ಹಸಿರ ಸುಂದರ ಪ್ರಕೃತಿಯ ನಡುವೆ ಪುಟ್ಟ ವೇದಿಕೆ, ಸಾಂಪ್ರದಾಯಿಕ ಉಡುಪು ತೊಟ್ಟು ಕಳಸ ಹಿಡಿದು ನಿಂತಿರುವ ಮಹಿಳೆಯರು, ಕೃಷಿ ಚಟುವಟಿಕೆಗೆ ಬಳಸುವ ನೇಗಿಲು, ನೊಗ, ಮರ, ಗೊರಗ, ಅಡುಗೆ ಮಾಡಲು ಬಳಸುವ ಪುರಾತನ ಮಡಿಕೆ, ಕುಡಿಕೆಗಳು, ಸಾಂಪ್ರದಾಯಿಕ ತಿಂಡಿ ತಿನಿಸುಗಳು, ಹಿತ್ತಲಲ್ಲೇ ಬೆಳೆದ ಹಣ್ಣುಗಳು, ಹಣ್ಣುಗಳಿಂದ ತಯಾರಿಸಿದ ವೈನ್...ಹೀಗೆ ಪೂರ್ವಜರು ಬಳಸುತ್ತಿದ್ದ ವಸ್ತುಗಳನ್ನು ಸಮಾಜದ ಕಿರಿಯರಿಗೆ ಪರಿಚಯಿಸಲು ಹಮ್ಮಿಕೊಂಡಿದ್ದ ವಸ್ತುಪ್ರದರ್ಶನ ಆಕರ್ಷಣೆಯಿಂದ ಕೂಡಿದ್ದವು. 

ಸುಂದರ ವೇದಿಕೆಯಲ್ಲಿ ಛದ್ಮವೇಷ, ಏಕಪಾತ್ರ ಅಭಿನಯ, ಹರಿಸೇವೆ, ಸೋಬಾನೆ ಕಂಪು, ಜಾನಪದ ಕೃಷಿ ನೃತ್ಯದ ಇಂಪು, ತಾಳ ತಪ್ಪದ ಕೋಲಾಟದ ನೃತ್ಯ, ಸುಗ್ಗಿ ಸುವಾಲಿ ಹಾಡು ಕುಣಿತ... ಚಿಕ್ಕವರು ದೊಡ್ಡವರು ಎನ್ನದೆ ವಾದ್ಯಕ್ಕೆ ಹೆಜ್ಜೆ ಹಾಕಿದರು.‌ಅರೆಭಾಷೆ ಗೌಡ ಜನಾಂಗದ ಸಾಂಸ್ಕೃತಿಕ ಸೊಗಡು, ಸಾಂಸ್ಕೃತಿಕ ನೃತ್ಯಕ್ಕೆ ಹೆಜ್ಜೆ ಹಾಕುವ ಪರಿ, ಅವರು ತೊಡುವ ಉಡುಗೆ ತೊಡುಗೆ ಅವರ ಸಂಸ್ಕೃತಿಯ ಶ್ರೀಮಂತಿಕೆಯನ್ನು ಬಿಂಬಿಸುತ್ತಿದ್ದವು. 

ಸಂಸ್ಕೃತಿ ಹಾಗೂ ಸಾಹಿತ್ಯ ಬೆಳೆಸುವ ನಿಟ್ಟಿನಲ್ಲಿ ಈ ಅರೆಭಾಷೆ ಸಾಹಿತ್ಯ ಅಕಾಡೆಮಿ ಪ್ರಾರಂಭಿಸಲಾಗಿದೆ. ಗ್ರಾಮ,ಗ್ರಾಮಗಳಲ್ಲಿ ಗ್ರಾಮೀಣ ಜನತೆಯ ಬದುಕು, ಗ್ರಾಮೀಣ ಬದುಕಿನ ಸೊಗಡು, ಸಂಪ್ರದಾಯ ಮತ್ತು ಆಚರಣೆಗಳು ಅದರಲ್ಲೂ ವಿಶೇಷವಾಗಿ ಕೃಷಿ ಪ್ರದಾನವಾದ ಅರೆ ಭಾಷಿಕ ಗೌಡ ಸಮುದಾಯದ ಹುಟ್ಟಿನಿಂದ-ಸಾವಿನವರೆಗಿನ ಶ್ರೀಮಂತ ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ಪರಿಚಯಿಸಲು ಅಕಾಡೆಮಿ ಪ್ರಯತ್ನಿಸುತ್ತಿದೆ ಅಂತಾರೆ ಸರಸ್ವತಿ ಪ್ರಕಾಶ್. 

ಬೈಟ್ 1- ಸರಸ್ವತಿ ಪ್ರಕಾಶ್, ಅರೆಭಾಷೆ ಅಕಾಡೆಮಿ ಸಮಿತಿ ಸದಸ್ಯೆ.

ಪ್ರತಿಯೊಂದು ಗ್ರಾಮಗಳಲ್ಲೂ ಆಯಾ ಜನಾಂಗದ ಸಾಂಪ್ರದಾಯಿಕ ಸಂಸ್ಕೃತಿಗಳನ್ನು ನಿರಂತರವಾಗಿ ಆಚರಿಸಬೇಕು. ಈ ಹಿನ್ನಲೆಯಲ್ಲಿ ಮುತ್ತಾರುಮುಡಿ ಗ್ರಾಮದಲ್ಲಿ ಅರೆ ಭಾಷಿಕ ಗೌಡ ಸಮುದಾಯದಿಂದ ಅರೆಭಾಸೆ ಜನಾಂಗದ ಸಂಸ್ಕತಿ ಜನಪದ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತೋಷವಾಗಿ್ದೆ‌ದೆ‌.ಇಲ್ಲಿ ಬಹಳ ಹಿಂದೆ ನಮ್ಮ ಪೂರ್ವಜರು ಉಪಯೋಗಿಸುತ್ತಿದ್ದ ಗೊರಕ, ನೇಗಿಲು,ಬನೊಗ ಹಾಗೂ ಕಡುಬು, ಇಡ್ಲಿ ಬೇಯಿಸುತ್ತಿದ್ದ ಮಡಿಕೆಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದೇವೆ.ಇವುಗಳನ್ನು ನೋಡಿ ಅವುಗಳ ಮಹತ್ವವನ್ನು ಯುವ ಪೀಳಿಗೆಗೆ ತಿಳಿಸುತ್ತಿದ್ದೇವೆ ಎನ್ನುತ್ತಾರೆ ಸ್ಥಳೀಯ ನಿವಾಸಿ ಪೂರ್ಣಿಮಾ. 

ಬೈಟ್- 2 ಪೂರ್ಣಿಮಾ. ಅರೆಭಾಷೆ ಜನಾಂಗದ ಸ್ಥಳೀಯ ನಿವಾಸಿ 

ಹಳೆ ಕಾಲದಲ್ಲಿ ಬಳಸುತ್ತಿದ್ದ ವಸ್ತುಗಳನ್ನು ಇಂದು ಪ್ರದರ್ಶನಕ್ಕೆ ಇಟ್ಟಿರುವುದನ್ನು ನೋಡಿ‌ ನಮಗೆಲ್ಲಾ ತುಂಬಾ ಖುಷಿ ಆಗುತ್ತಿದೆ. ಪೂರ್ವಜರು ಉಪಯೋಗಿಸುತ್ತಿದ್ದ ವಸ್ತುಗಳನ್ನು ನೋಡುವ ಅವಕಾಶ ಸಿಕ್ಕಿದೆ.ಹಾಗೆಯೇ ಜನಾಂಗದಲ್ಲಿ ಸಾಧನೆ ಮಾಡಿರುವ ಹಿರಿಯರನ್ನು ಗೌರವಿಸುತ್ತಿರುವುದೂ ಸಂತಸವಾಗುತ್ತಿದೆ ಅಂತಾರೆ ಅರೆಗೌಡ ಸಮಾಜದ ಯುವತಿ ಮನಸ್ವೀ. 

ಬೈಟ್-3 ಮನಸ್ವಿ, ಅರೆಗೌಡ ಸಮಾಜದ ಯುವತಿ

ಒಟ್ಟಿನಲ್ಲಿ ವೇಗವಾಗಿ ಬೆಳೆಯುತ್ತಿರುವ ಆಧುನಿಕ ಜಗತ್ತಿಗೆ ಹೊಂದಿಕೊಳ್ಳುವ ಭರದಲ್ಲಿ ತಮ್ಮ ಜನಾಂಗದ ಸಂಸ್ಕೃತಿ ಆಚಾರ-ವಿಚಾರ ಮರೆಯಬಾರದು.‌ ಅದಕ್ಕೆ ಅದು ನಮ್ಮ ಕಣ್ಣ ಮುಂದೆಯೇ ಆಚರಣೆಯಲ್ಲಿ ಇರಬೇಕು ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಜನಾಂಗ ಕಡೆಗಳಲ್ಲಿ ಇಂತಹ ಕಾರ್ಯಕ್ರಮ ನಡೆಸಿ ಮುಂದಿನ ಪೀಳಿಗೆಗೆ ಸಂಸ್ಕೃತಿ ಉಳಿಸಿ ಬೆಳೆಸುವ ಕೆಲಸದಲ್ಲಿ ನಿರತವಾಗಿದೆ.

- ಕೆ.ಸಿ.ಮಣಿಕಂಠ, ಈಟಿವಿ ಭಾರತ, ಕೊಡಗು.‌

Body:0

Conclusion:0
ETV Bharat Logo

Copyright © 2024 Ushodaya Enterprises Pvt. Ltd., All Rights Reserved.