ಕೊಡಗು : ಜಿಲ್ಲೆಯ ಕುಶಾಲನಗರ ತಾಲೂಕು ಕಚೇರಿ ಮೇಲೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ₹50 ಸಾವಿರ ಲಂಚ ಪಡೆಯುವಾಗ ಇಬ್ಬರು ಅಧಿಕಾರಿಗಳನ್ನು ವಶಕ್ಕೆ ಪಡೆದಿದ್ದಾರೆ.
ಕುಶಾಲನಗರ ತಾಲೂಕು ಕಚೇರಿಯಲ್ಲಿರುವ ವಿನೋದ್ ಮತ್ತು ಶಿರಸ್ತೇದಾರ್ ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ. ಶುಂಠಿಕೊಪ್ಪ ಹೋಬಳಿಯ ಅಂದಗೋವೆಯ ಫೈಲ್ ವಿಚಾರವಾಗಿ ಹಣದ ಬೇಡಿಕೆ ಇಟ್ಟಿದ್ದರು.
ಬೆಳ್ಳಿಯಪ್ಪ ಎಂಬುವರು ಎಸಿಬಿಗೆ ದೂರು ನೀಡಿದ್ದ ಹಿನ್ನೆಲೆ ಮಡಿಕೇರಿ ಎಸಿಬಿ ಅಧಿಕಾರಿಗಳು ಮುಂಜಾನೆ ದಾಳಿ ಮಾಡಿದ್ದರು. ತಾಲೂಕು ಕಚೇರಿ ಬಳಿ ಇರುವ ಟೀ ಕ್ಯಾಂಟೀನ್ನಲ್ಲಿ ಹಣ ಸ್ವೀಕರಿಸುವಾಗ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕಡತ ವಿಲೇವಾರಿಗೆ ₹14 ಲಕ್ಷ ವಿನೋದ್ ಬೇಡಿಕೆ ಇಟ್ಟಿದ್ದರು. ₹50 ಸಾವಿರ ನಗದು ಸ್ವೀಕರಿಸಿರುವ ಬಗ್ಗೆ ಮಾಹಿತಿ ಪಡೆದ ಎಸಿಬಿ ಅಧಿಕಾರಿಗಳು ಇಬ್ಬರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಮಟಕಾ ಪ್ರಕರಣ ದಾಖಲಿಸುವುದಾಗಿ ಬೆದರಿಸಿ ಲಂಚಕ್ಕೆ ಬೇಡಿಕೆ: ಎಸಿಬಿ ಬಲೆಗೆ ಇಬ್ಬರು ಪೊಲೀಸ್ ಕಾನ್ಸ್ಟೇಬಲ್