ಮಡಿಕೇರಿ (ಕೊಡಗು): ಬೆಂಗಳೂರಿನಲ್ಲಿ ಡ್ರಗ್ಸ್ ದಂಧೆಯ ಪ್ರಕರಣ ಬೆಳಕಿಗೆ ಬಂದಿರುವ ಮರು ದಿನವೇ ಕೊಡಗಿನಲ್ಲೂ ಡ್ರಗ್ಸ್ ಜಾಲವೊಂದನ್ನು ಡಿಸಿಐಬಿ ಹಾಗೂ ಕುಶಾಲನಗರ ಪೊಲೀಸರು ಭೇದಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ತಿಳಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಆರೋಪಿಗಳಿಂದ ಎರಡು ಕಾರು ಹಾಗೂ ಅಲ್ಪ ಪ್ರಮಾಣದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈಗಾಗಲೇ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದು, ಒಬ್ಬ ವಿದೇಶಿ ಪ್ರಜೆಯೂ ಸೇರಿದಂತೆ ಮೂವರು ಪರಾರಿಯಾಗಿದ್ದಾರೆ. ಕುಶಾಲನಗರ ಹಾಗೂ ಗುಡ್ಡೆಹೊಸೂರಿನಲ್ಲಿ ಕಾರು ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ. ಜಿಲ್ಲೆಯಲ್ಲಿ ಮಾದಕ ವಸ್ತುಗಳ ಸಾಗಾಣಿಕೆಯ ದಂಧೆಯು ಇನ್ನಷ್ಟು ವ್ಯಾಪಿಸಿದ್ದು, ಪೊಲೀಸ್ ಇಲಾಖೆ ತನಿಖೆ ಚುರುಕಾಗಿಸಿದೆ ಎಂದು ತಿಳಿಸಿದ್ದಾರೆ.