ವಿರಾಜಪೇಟೆ(ಕೊಡಗು): ಕೊಟ್ಟಿಗೆಗೆ ನುಗ್ಗಿದ ಹುಲಿ ತುಂಬು ಗರ್ಭಿಣಿ ಹಸುವೊಂದನ್ನು ಬಲಿ ತೆಗೆದುಕೊಂಡಿರುವ ಘಟನೆ ಪೆರುಂಬಾಡಿಯಲ್ಲಿ ನಡೆದಿದೆ.
ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿರುಮಕ್ಕಿಯ ನಿವಾಸಿಯಾಗಿರುವ ಹೆಚ್.ಟಿ ಕಿಶೋರ್ ಅವರಿಗೆ ಸೇರಿದ ಹಸುವನ್ನು ಹುಲಿ ಕೊಂದು ಹಾಕಿದೆ.
ಹಲವು ದಿನಗಳಿಂದ ವಿರಾಜಪೇಟೆಯ ಸುತ್ತಮುತ್ತ ಓಡಾಡುತ್ತಿರುವ ಹುಲಿ, ಕಳೆದ ಎರಡು ದಿನಗಳ ಹಿಂದೆ ಪಟ್ಟಣದ ಸಮೀಪ ಇರುವ ಕಲ್ಲುಂಬಾಣೆಯಲ್ಲಿ ನಾಯಿಯೊಂದನ್ನು ಕೊಂದು ಹಾಕಿತ್ತು. ಪದೇ ಪದೆ ಈ ರೀತಿಯ ಘಟನೆಗಳಿಂದ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.