ಪೊನ್ನಂಪೇಟೆ (ಕೊಡಗು): ಬಾವಿಗೆ ಬಿದ್ದು ಹುಲಿ ಮೃತಪಟ್ಟಿರುವ ಘಟನೆ ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಅಂದಾಜು 8 ವರ್ಷದ ಹುಲಿ ಬಾವಿಗೆ ಬಿದ್ದಿದೆ. ನಾಲ್ಕು ದಿನಗಳ ಹಿಂದೆಯೇ ರಸ್ತೆ ಬದಿಯ ಪಾಳು ಬಾವಿಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಪೊನ್ನಂಪೇಟೆ ವ್ಯಾಪ್ತಿಯಲ್ಲಿ ಪದೇ ಪದೆ ಹುಲಿ ದಾಳಿ ಪ್ರಕರಣಗಳು ಹೆಚ್ಚುತ್ತಿದ್ದು ಹಲವು ಜಾನುವಾರುಗಳನ್ನು ವ್ಯಾಘ್ರಗಳು ಬಲಿ ಪಡೆದಿವೆ.
ಈ ಹಿಂದೆ ರೈತರು ಹುಲಿಯನ್ನು ಸೆರೆಹಿಡಿಯುವಂತೆ ಸಾಕಷ್ಟು ಬಾರಿ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು. ನಿರ್ಲಕ್ಷ್ಯವಹಿಸಿದ್ದ ಅಧಿಕಾರಿಗಳ ವಿರುದ್ಧ ಆಕ್ರೋಶ ಕೂಡಾ ವ್ಯಕ್ತಪಡಿಸಿದ್ದರು.