ಪೊನ್ನಂಪೇಟೆ (ಕೊಡಗು): ಜಿಲ್ಲೆಯಲ್ಲಿ ಹುಲಿ ದಾಳಿ ಮುಂದುವರೆದಿದ್ದು, ಪೊನ್ನಂಪೇಟೆ ತಾಲೂಕಿನ ಬೆಕ್ಕೆಸೊಡ್ಲೂರಿನಲ್ಲಿ ಮನೆ ಮುಂದೆ ಕಟ್ಟಿದ್ದ ಹಸುವೊಂದನ್ನು ವ್ಯಾಘ್ರ ಬಲಿ ಪಡೆದಿದೆ.
ಬೆಕ್ಕೆಸೊಡ್ಲೂರು ಗ್ರಾಮದ ದೇವಯ್ಯ ಎಂಬುವವರು ಮಂಗಳವಾರ ರಾತ್ರಿ ಎಂದಿನಂತೆ ತಮ್ಮ ಮನೆ ಮುಂದೆ ಹಸು ಕಟ್ಟಿ ಹಾಕಿದ್ದರು. ಈ ವೇಳೆ ದಾಳಿ ನಡೆಸಿದ ಹುಲಿ, ಹಸುವನ್ನು ಕೊಂದು ಹಾಕಿದೆ.
ಇದನ್ನೂ ಓದಿ: ಹಲವು ಭಾಗ್ಯಗಳಿಗೆ ‘ಸಿದ್ದರಾಮನ ಹುಂಡಿ’ಯಿಂದ ಹಣ ತಂದಿದ್ರಾ?: ಹೆಚ್ಡಿಕೆ
ಕಳೆದೊಂದು ವಾರದಿಂದ ಹಸುಗಳ ಮೇಲೆ ಹುಲಿ ದಾಳಿಯಿಂದ ಸ್ಥಳೀಯರು ಆತಂಕ್ಕೊಳಗಾಗಿದ್ದು, ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.