ETV Bharat / state

ನೀ ಹೀಂಗ ನೋಡಬ್ಯಾಡ..! ಇಣುಕಿ ನೋಡಿ ಸಿಕ್ಕಿಬಿದ್ದ ಕಾಮುಕನಿಗೆ ಬಿತ್ತು ಗೂಸಾ - Siddapur Police arrest news

ರಾತ್ರಿ ವೇಳೆ ಕಿಟಕಿಯಿಂದ ಇಣುಕಿ ನೋಡುತ್ತಿದ್ದ ಕಾಮುಕನೊಬ್ಬನನ್ನು ಗ್ರಾಮಸ್ಥರು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಸಿದ್ದಾಪುರದಲ್ಲಿ ನಡೆದಿದೆ.

ಕಾಮುಕ
author img

By

Published : Sep 21, 2019, 11:12 PM IST

ಕೊಡಗು: ರಾತ್ರಿ ವೇಳೆ ಕಿಟಕಿಯಿಂದ ಇಣುಕಿ ನೋಡುತ್ತಿದ್ದ ಕಾಮುಕನೊಬ್ಬನನ್ನು ಗ್ರಾಮಸ್ಥರು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಸಿದ್ದಾಪುರದಲ್ಲಿ ನಡೆದಿದೆ.

ರಾತ್ರಿ ವೇಳೆ ಕಿಟಕಿ ಇಣುಕಿ ನೋಡುತ್ತಿದ್ದ ಕಾಮುಕನಿಗೆ ಥಳಿತ

ಕೇರಳ ಮೂಲದ ಅರುಣ್ ಎಂಬಾತ ಇಂತಹ ಕೃತ್ಯ ನಡೆಸಿರುವ ಆರೋಪಿ.‌

ಈತ ಕಳೆದ ಎರಡು ತಿಂಗಳಿನಿಂದ ಸಿದ್ದಾಪುರ ಸಮೀಪದ ನೆಲ್ಲಿಹುದಿಕೇರಿ ಗ್ರಾಮದಲ್ಲಿ ರಾತ್ರಿ ವೇಳೆಯಲ್ಲಿ ಕೆಲವು ಮನೆಗಳಿಗೆ ತೆರಳಿ ಮಹಿಳೆಯರ ಒಳ ಉಡುಪುಗಳನ್ನು ಕದ್ದೊಯ್ಯೊದ್ದಿದ್ದ ಎನ್ನಲಾಗಿದೆ. ಹಲವೆಡೆ ಕಿಟಕಿಗಳಿಂದ ಮನೆಯಲ್ಲಿ ಇರುವವರನ್ನು ಇಣುಕಿ ನೋಡುತ್ತಿದ್ದ ಎನ್ನುವ ಆರೋಪಗಳು ಕೇಳಿ ಬಂದಿವೆ.

ವಾರದ ಹಿಂದಷ್ಟೇ ಇವನು ಮನೆಯೊಂದರ ಕಿಟಕಿಯಿಂದ ನೋಡಿ ಕಣ್ಮರೆಯಾಗಿದ್ದ. ಈ ವೇಳೆ ಹಲವರು ಭಯ ಭೀತರಾಗಿದ್ದರು. ಕೆಲವರು ದೆವ್ವ ಇರಬಹುದು ಎಂದು ಭಾವಿಸಿ ಮಂತ್ರವಾದಿಗಳ ಬಳಿ ಸಹ ಹೋಗಿದ್ದರು. ಆದ್ರೆ ಇವನು ನಿನ್ನೆ ಮಧ್ಯರಾತ್ರಿ ಮನೆ ಕಿಟಕಿಯಿಂದ ಇಣುಕಿ ನೋಡುತ್ತಿದ್ದುದನ್ನು ವ್ಯಕ್ತಿಯೊಬ್ಬರು ಗಮನಿಸಿದ್ದಾರೆ. ಕೂಡಲೇ ಸ್ಥಳೀಯರು ಈತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ವಿಚಾರಣೆ ವೇಳೆ ಆರೋಪಿ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎನ್ನಲಾಗಿದ್ದು, ಈ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:Mಕಿಟಕಿ ಇಣುಕುತ್ತಿದ್ದ ವಿಕೃತ ಕಾಮುಕನ ಬಂಧನ

ಕೊಡಗು: ರಾತ್ರಿ ಕಿಟಕಿಯಿಂದ ಇಣುಕಿ ನೋಡುತ್ತಿದ್ದ ವಿಕೃತಕಾಮಿ ಒಬ್ಬನನ್ನು ಗ್ರಾಮಸ್ಥರು ಹಿಡಿದು ಥಳಿಸಿ ಪೊಲೀಸ್ ಠಾಣೆಗೆ ಒಪ್ಪಿಸಿದ ಘಟನೆ ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕೇರಳ ಮೂಲದ ಅರುಣ್ ಎಂಬಾತನ ಇಂಥಹ ಕೃತ್ಯ ನಡೆಸಿರುವ ಆರೋಪಿ.‌ಈತ ಕಳೆದ ಎರಡು ತಿಂಗಳಿನಿಂದ ಸಿದ್ದಾಪುರ ಸಮೀಪದ ನೆಲ್ಲಿಹುದಿಕೇರಿ ಗ್ರಾಮದಲ್ಲಿ ರಾತ್ರಿ ವೇಳೆಯಲ್ಲಿ ಕೆಲವು ಮನೆಗಳಿಗೆ ತೆರಳಿ ಮಹಿಳೆಯರ ಒಳ ಉಡುಪುಗಳನ್ನು ಕದ್ದೊಯ್ಯೊದ್ದಿದ್ದ ಎನ್ನಲಾಗಿದೆ. ಹಲವೆಡೆ ಕಿಟಕಿಗಳಿಂದ ಮನೆಯಲ್ಲಿ ಇರುವವರನ್ನು ಇಣುಕಿ ನೋಡುತ್ತಿದ್ದ ಆರೋಪಗಳೂ ಕೇಳಿ ಬಂದಿವೆ.

ವಾರದ ಹಿಂದೆಷ್ಟೆ ಕಿಟಕಿಯಿಂದ ನೋಡಿ ಕಣ್ಮರೆಯಾಗಿದ್ದ ವೇಳೆ ಹಲವರು ಭಯ ಭೀತರಾಗಿದ್ದರು.ಕೆಲವರು ದೆವ್ವ ಇರಬಹುದು ಎಂದು ಭಾವಿಸಿ ಮಂತ್ರವಾದಿಗಳ ಬಳಿ ಹೋಗಿದ್ದರು ಎನ್ನಲಾಗ್ತಿದೆ.

ವ್ಯಕ್ತಿಯೊರ್ವ ನೆನ್ನೆ ಮಧ್ಯರಾತ್ರಿ ಮನೆ ಕಿಟಕಿಯಿಂದ ಇಣುಕಿ ನೋಡುತ್ತಿದ್ದ ವೇಳೆ ಗಮನಿಸಿದ್ದಾರೆ. ಕೂಡಲೇ ಸ್ಥಳೀಯರು ಕಾಂಪೌಂಡ್ ಹಾರಿ ಪರಾರಿಯಾಗಲು ಯತ್ನಿಸಿದ ವಿಕೃತ ಕಾಮಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.ಆರೋಪಿ ಅರುಣ್ ವಿಚಾರಣೆ ವೇಳೆ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎನ್ನಲಾಗಿದ್ದು, ಈ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- ಕೆ.ಸಿ.ಮಣಿಕಂಠ, ಈಟಿವಿ ಭಾರತ, ಕೊಡಗು.Body:0Conclusion:0
ETV Bharat Logo

Copyright © 2024 Ushodaya Enterprises Pvt. Ltd., All Rights Reserved.