ಪೊನ್ನಂಪೇಟೆ: ನಮ್ಮ ನಾಯಕ ಯಡಿಯೂರಪ್ಪನವರು ನುಡಿದಂತೆ ನಡೆದಿದ್ದಾರೆ. ನಮ್ಮ ಜೊತೆ ಯಾರೆಲ್ಲಾ ಬಂದಿದ್ದಾರೋ ಅವರಿಗ್ಯಾರಿಗೂ ಅನ್ಯಾಯವಾಗಿಲ್ಲ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.
ಪೊನ್ನಂಪೇಟೆಯಲ್ಲಿ ಮಾತನಾಡಿದ ಅವರು, ನಮ್ಮನ್ನು, ಪಕ್ಷವನ್ನು ನಂಬಿ ಬಂದವರಿಗೆ ಅನ್ಯಾಯ ಮಾಡಿಲ್ಲ. ಮಧ್ಯಂತರ ಚುನಾವಣೆಯಲ್ಲಿ ಸೋತವರಿಗೂ ಕೂಡ ಎಂಎಲ್‌ಸಿಯನ್ನಾಗಿ ಮಾಡಿದ್ದಾರೆ. ನಾವು ಗೆದ್ದಿದ್ದೇವೆ, ಹಾಗಾಗಿ ನಮ್ಮನ್ನು ಸಚಿವರನ್ನಾಗಿ ಮಾಡಿದ್ದಾರೆಂದು ತಿಳಿಸಿದರು.
ಇದನ್ನು ಓದಿ: ಸಿಎಂ ಯಾರಿಗೂ ಅನ್ಯಾಯ ಮಾಡುವುದಿಲ್ಲ: ಎಸ್.ಟಿ.ಸೋಮಶೇಖರ್
ಸದ್ಯ ಗ್ರಾಮ ಪಂಚಾಯತ್ ಚುನಾವಣೆ ಎದುರಿಸಲು ಪಕ್ಷ ಆದೇಶ ನೀಡಿದೆ. ಬಳಿಕ, ಸಂಪುಟ ಪುನಾರಚನೆಯಾದಾಗ ಎಲ್ಲರಿಗೂ ಸಚಿವಸ್ಥಾನ ಸಿಗುತ್ತದೆ ಎಂದು ಹೇಳಿದರು.
ಇದನ್ನು ಓದಿ: ರೋಹಿಣಿ ಸಿಂಧೂರಿ ಸರ್ಕಾರದ ಆದೇಶ ಮೀರಿ ನಡೆಯಬಾರದು: ಶಾಸಕ ತನ್ವೀರ್ ಸೇಠ್
ಮೈಸೂರು ಜಿಲ್ಲಾಧಿಕಾರಿ ವಿರುದ್ಧ ಶಾಸಕರ ಬಹಿರಂಗ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ನಾನು ಮೈಸೂರಿಗೆ ಹೋಗಿ ಶಾಸಕರು ಹಾಗೂ ಜಿಲ್ಲಾಧಿಕಾರಿ ಜೊತೆ ಮಾತನಾಡುವೆ ಎಂದು ತಿಳಿಸಿದರು.