ETV Bharat / state

ಕೊಡಗಿನಲ್ಲಿ ಮುಂದುವರೆದ ಕಾಡಾನೆ ದಾಳಿ : ಓರ್ವ ಸಾವು - elephant attack in kodagu

ಕೊಡಗು ಜಿಲ್ಲೆಯಲ್ಲಿ ಕಾಡುಪ್ರಾಣಿ ಮತ್ತು ಮಾನವ ಸಂಘರ್ಷ ಮುಂದುವರೆದಿದ್ದು, ಕಾಡಾನೆ ದಾಳಿಗೆ ಓರ್ವ ಮೃತಪಟ್ಟಿದ್ದಾನೆ. ಜಿಲ್ಲೆಯ ಜನರು ಆನೆ ದಾಳಿಯಿಂದ ಬೇಸತ್ತಿದ್ದು, ಕಾಡುಪ್ರಾಣಿ ಮತ್ತು ಮಾನವ ಸಂಘರ್ಷಕ್ಕೆ ಕೊನೆಗಾಣಿಸುವಂತೆ ಜೊತೆಗೆ ಆನೆಗಳನ್ನು ಕಾಡಿಗೆ ಓಡಿಸುವಂತೆ ಅರಣ್ಯ ಇಲಾಖೆಗೆ ಸ್ಥಳೀಯರು ಒತ್ತಾಯಿಸಿದ್ದಾರೆ.

one-died-in-elephant-elephant-attack-in-kodagu
ಕೊಡಗಿನಲ್ಲಿ ಮುಂದುವರೆದ ಕಾಡಾನೆ ದಾಳಿ
author img

By

Published : Jun 11, 2022, 5:26 PM IST

ಕೊಡಗು : ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಜನತೆ ಜೀವನ ಸಾಗಿಸೋದೆ ಕಷ್ಟಕರವಾಗಿದೆ. ಬೆಳಗಾದರೆ ಸಾಕು ಆನೆಹಾವಳಿ, ಹುಲಿ ಹಾವಳಿಯಿಂದ ಜಿಲ್ಲೆಯ ಜನ ರೋಸಿ ಹೋಗಿದ್ದಾರೆ. ರೈತರು ಬೆಳೆದ ಬೆಳೆಗಳನ್ನು ನಾಶ ಮಾಡುವ ಕಾಡು ಪ್ರಾಣಿಗಳು ಇತ್ತ ಫಸಲು ಇಲ್ಲದೆ ರೈತರು ಕಂಗಾಲಾಗಿ ಹೋಗಿದ್ದಾರೆ.

ದಕ್ಷಿಣ ಕೊಡಗಿನಲ್ಲಂತೂ ಆನೆ ಹಾವಳಿ ಮಿತಿ ಮೀರಿದ್ದು, ಮನುಷ್ಯರನ್ನು ಕಾಡಾನೆಗಳು ಬಲಿ ಪಡೆದುಕೊಳ್ಳುತ್ತಲೇ ಇವೆ. ನಿನ್ನೆ ದಿನ ಕೂಡ ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಬೀರುಗ ಎಂಬಲ್ಲಿ ತೋಟಕ್ಕೆ ಹೋಗುತ್ತಿದ್ದ 58 ವರ್ಷದ ಹಾಲಪ್ಪ ಎಂಬುವರ ಮೇಲೆ ಆನೆ ದಾಳಿ ನಡೆಸಿದೆ. ಅದೃಷ್ಟವಶಾತ್ ಹಾಲಪ್ಪ ಪ್ರಾಣಪಾಯದಿಂದ ಪಾರಾಗಿದ್ದು, ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೊಡಗಿನಲ್ಲಿ ಮುಂದುವರೆದ ಕಾಡಾನೆ ದಾಳಿ

ಅದರೆ ಇಂದು ಮುಂಜಾನೆ ಆನೆ ದಾಳಿಗೆ ಓರ್ವ ಮೃತಪಟ್ಟಿದ್ದಾನೆ. ಜಿಲ್ಲೆಯ ಗೋಣಿಕೊಪ್ಪ ಸಮೀಪದ ದನುಗಾಲ ಮಾರಮ್ಮ ಕಾಲೋನಿ ನಿವಾಸಿ ಚಾಮ‌ (50) ಎಂಬುವರ ಮೇಲೆ ಕಾಡಾನೆ ದಾಳಿ‌ ನಡೆಸಿದ್ದು, ಅವರು ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ಕೋಣನ ಕಟ್ಟೆಯಿಂದ ಮೂವರು ಮರಪಾಲ ರಸ್ತೆಯಲ್ಲಿ ಬೈಕ್ ನಲ್ಲಿ ತೆರಳುವಾಗ ಪಕ್ಕದ ಕಾಫಿ ತೋಟದಿಂದ ಬಂದ ಕಾಡಾನೆ ಇವರ ಮೇಲೆ ದಾಳಿ ಮಾಡಿದೆ. ಮುಂಜಾನೆ ಹೊತ್ತಿನಲ್ಲಿ ದೇವಸ್ಥಾನಕ್ಕೆ ಹೋಗಿ ಬರುತ್ತಿದ್ದ ವೇಳೆ ಕಾಡಾನೆ ದಾಳಿ ಮಾಡಿದ್ದು, ಒಬ್ಬರು ಮೃತಪಟ್ಟರೆ, ಇಬ್ಬರು ತಪ್ಪಿಸಿಕೊಂಡಿದ್ದಾರೆ.

ಕಾಡಾನೆ ಹಾವಳಿಗೆ ಬೇಸತ್ತ ಸ್ಥಳೀಯರು ಮತ್ತು ರೈತರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ. ದಕ್ಷಿಣ ಕೊಡಗಿನಲ್ಲಿ ಆಗಿಂದಾಗ್ಗೆ ಕಾಡಾನೆ ಸೇರಿದಂತೆ ಕಾಡುಪಾಣಿಗಳ ಉಪಟಳ ಮಿತಿ ಮೀರಿದ್ದು ಸೂಕ್ತ ರೀತಿಯಲ್ಲಿ ಕ್ರಮ ವಹಿಸುವಂತೆ ಆಗ್ರಹಿಸಿ ಸ್ಥಳೀಯರು ಆಗ್ರಹಿಸಿದ್ದಾರೆ.

ಗೋಣಿಕೊಪ್ಪ ಪೊನ್ನಂಪೇಟೆ ಸುತ್ತಮುತ್ತಲಿನ ತೋಟಗಳಲ್ಲಿ ಸಾಕಷ್ಟು ಕಾಡಾನೆಗಳು ಬೀಡು ಬಿಟ್ಟಿದ್ದು, ಅವುಗಳನ್ನು ಶೀಘ್ರವಾಗಿ ಕಾಡಿಗೆ ಓಡಿಸುವಂತೆ ಆಗ್ರಹಿಸಿದ್ದಾರೆ‌. ಈ ಭಾಗದಲ್ಲಿ ಕಾಡಾನೆಗಳು ಕಾಫಿ ತೋಟದಲ್ಲಿ ಬೀಡುಬಿಟ್ಟಿದ್ದು, ಮನುಷ್ಯರ ಮೇಲೆ ದಾಳಿ ಮಾಡುತ್ತಿವೆ. ಅಲ್ಲದೆ ಬೆಳೆಗಳು ಸಹ ಹಾಳಾಗುತ್ತಿವೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಆನೆ-ಮಾನವ ಸಂಘರ್ಷ ಮುಂದುವರೆದಿದ್ದು, ಕಾಡುಪ್ರಾಣಿಗಳು ಮನುಷ್ಯನ ಪ್ರಾಣಕ್ಕೆ ಕುತ್ತು ತರುತ್ತಲೇ ಇವೆ. ಕಾಡಾನೆ ಹಾವಳಿಯಿಂದ ರೈತರಿಗೆ ಶಾಶ್ವತ ಪರಿಹಾರ ದೊರಕಿಸಿ ಕೊಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಓದಿ :ತಾಕತ್ತಿದ್ರೆ ಬರಲಿ, ಗಂಡಸಾದ್ರೆ ನನ್ನ ಎದುರು ಸ್ಪರ್ಧಿಸಲಿ: ಹೆಚ್​​ಡಿಕೆಗೆ ಶಾಸಕ ಶ್ರೀನಿವಾಸ್ ಓಪನ್​ ಚಾಲೆಂಜ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.