ETV Bharat / state

ಹೇಮಾವತಿ ನದಿ ಪಾತ್ರದಲ್ಲಿ ಅಕ್ರಮ ಮರಳುಗಾರಿಕೆ: ಅಧಿಕಾರಿಗಳ ದಾಳಿ

ಹಂಪಾಪುರ ಗ್ರಾಮದ ಹೇಮಾವತಿ ನದಿ ಪಾತ್ರದಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ದಾಳಿ ನಡೆಸಿ ಲಾರಿ ಮತ್ತು ದೋಣಿಯನ್ನು ವಶಕ್ಕೆ ಪಡೆದಿದ್ದಾರೆ.

author img

By

Published : May 3, 2021, 11:13 AM IST

kodagu
ಅಕ್ರಮ ಮರಳುಗಾರಿಕೆ

ಕೊಡಗು: ಕೊಡಗು ಮತ್ತು ಹಾಸನ ಗಡಿ ಭಾಗದಲ್ಲಿರುವ ಕೊಡ್ಲಿಪೇಟೆ ವ್ಯಾಪ್ತಿಯ ಹಂಪಾಪುರ ಗ್ರಾಮದ ಹೇಮಾವತಿ ನದಿ ಪಾತ್ರದಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿದ್ದು ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳು ದಾಳಿ ಮಾಡಿ ಲಾರಿ ಮತ್ತು ದೋಣಿಯನ್ನು ವಶಕ್ಕೆ ಪಡೆದಿದ್ದಾರೆ.

ಅಕ್ರಮ ಮರಳು ಗಣಿಗಾರಿಕೆ ನಡೆಸುತ್ತಿರುವ ಬಗ್ಗೆ ದೂರು ಬಂದ ಹಿನ್ನಲೆಯಲ್ಲಿ ಜಿಲ್ಲಾ ಗಣಿ ಮತ್ತು ಭೂ ವಿಜ್ಣಾನ ಇಲಾಖೆ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಮರಳು ಗಣಿಗಾರಿಕೆಗೆ ಬಳಸಿದ ಯಾಂತ್ರೀಕೃತ ದೋಣಿಗಳನ್ನು ಹಾಗೂ ಇನ್ನಿತರ ಯಂತ್ರಗಳನ್ನು ವಶ ಪಡಿಸಿಕೊಂಡಿದ್ದಾರೆ.

kodagu
ದೋಣಿ ವಶ

ಇನ್ನು ಪರವಾನಗಿ ದುರ್ಬಳಕೆ ಮಾಡಿಕೊಂಡು ಮರಳು ಸಾಗಾಟ ಮಾಡುತ್ತಿದ್ದ ಎರಡು ಲಾರಿ ಹಾಗೂ ಪರವಾನಗಿ ಇಲ್ಲದೆ ಜಲ್ಲಿಕಲ್ಲು ತುಂಬಿ ಸಾಗಾಟ ಮಾಡುತ್ತಿದ್ದಂತಹ ಒಂದು ಲಾರಿಯನ್ನು ವಶಕ್ಕೆ ಪಡೆಯಲಾಗಿದೆ. ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.