ಕೊಡಗು : ಗಿರಿಜನರ ಹಾಡಿಗಳಿಗೆ ಮೂಲಸೌಕರ್ಯ ಕಲ್ಪಿಸಬೇಕೆಂದು ಅರಣ್ಯ ಹಕ್ಕು ಕಾಯ್ದೆಯಲ್ಲಿ ಸ್ಪಷ್ಟವಾಗಿ ತಿಳಿಸಿರುವಾಗ ಏಕೆ ತೊಂದರೆ ಕೊಡುತ್ತಿದ್ದೀರಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಶಾಸಕ ಕೆ ಜಿ ಬೋಪಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ.
ಮಡಿಕೇರಿ ತಾಲೂಕಿನ ಬಲ್ಲಮಾವಟಿಯ ಪೇರೂರಿನ ಮಾಂಜಾಟ್ ಕಾಲೋನಿಯಲ್ಲಿ ಕಾಡಾನೆ ದಾಳಿಯಿಂದ ನಿನ್ನೆ ರಾತ್ರಿ ಮೃತಪಟ್ಟ ಅಪ್ಪಣ್ಣ ಸಾವಿಗೆ ಪರೋಕ್ಷವಾಗಿ ಅರಣ್ಯ ಇಲಾಖೆಯೇ ಕಾರಣ. ಕಾಲೋನಿ ನಿವಾಸಿಗಳ ಅನುಕೂಲಕ್ಕೆ ಸಣ್ಣದೊಂದು ಮರ ಕಡಿದರೆ ದಂಡ ಹಾಕುತ್ತೀರಾ..
ಹಾಗಾದರೆ ಕಾಡಾನೆಗಳ ಚಲನವಲನಗಳನ್ನು ವೀಕ್ಷಿಸಲು ಮರದ ಮೇಲೆ ನೀವೇ ಅಟ್ಟಣಿಗೆ ನಿರ್ಮಿಸಿಕೊಡಿ. ಹಾಡಿಗೆ ವಿದ್ಯುತ್ ಹಾಗೂ ಸರಿಯಾದ ರಸ್ತೆ ಇಲ್ಲದೆ ಇರುವುದೇ ದುರಂತಕ್ಕೆ ಕಾರಣ. ವಿದ್ಯುತ್ ಸಂಪರ್ಕ ಕಲ್ಪಿಸಿದ್ದರೆ ಈ ರೀತಿ ಅನಾಹುತ ನಡೆಯುತ್ತಿರಲಿಲ್ಲ ಎಂದು ಕಿಡಿಕಾರಿದ್ದಾರೆ.
ಓದಿ...ರಾಷ್ಟ್ರೀಯ ಹೆದ್ದಾರಿಯಲ್ಲಿ ಗಜ ಕಾಳಗ: ಆನೆಗಳ ಆರ್ಭಟ ಕಂಡು ಹೌಹಾರಿದ ಸವಾರರು
ಅದಕ್ಕೆ ಅರಣ್ಯ ಸಿಬ್ಬಂದಿ ಮರಗಳನ್ನು ಕಡಿಯಲು ಅವರು ಎನ್‌ಒಸಿ ಪಡೆದಿರಲಿಲ್ಲ ಎಂದು ಸಮಜಾಯಿಸಿ ನೀಡಿದರು. ಗಿರಿಜನ ಹಾಡಿಗಳಿಗೆ ಮೂಲಸೌಕರ್ಯ ಒದಗಿಸಲು ಎನ್‌ಒಸಿ ತೆಗೆದುಕೊಳ್ಳಬೇಕು ಎಂದು ಯಾವ ಕಾನೂನಿನಲ್ಲಿ ಇದೆ ಎಂಬುದನ್ನು ಓದಿ ನೋಡಿ ಸ್ವಲ್ಪ ಎಂದರು.
ಒಂದು ಹೆಕ್ಟೇರ್‌ಗೆ 75 ಮರಗಳನ್ನು ಕಡಿತಲೆ ಮಾಡಬಹುದು. ಅದೇನು ಅರ್ಥಮ್ಯಾಟಿಕ್ ಲೆಕ್ಕಾಚಾರ ಅಲ್ಲ. ಅವರು ಓಡಾಡುವ ಜಾಗದಲ್ಲಿ ರಸ್ತೆ, ವಿದ್ಯುತ್ ಸಂಪರ್ಕವನ್ನು ಒದಗಿಸಲು ನಿಮಗೆ ಏನು ಸಮಸ್ಯೆ ಎಂದು ಮಡಿಕೇರಿಯ ಜಿಲ್ಲಾ ಆಸ್ಪತ್ರೆ ಬಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.