ETV Bharat / state

ಬಿ ಎಸ್ ಯಡಿಯೂರಪ್ಪ ಅವರೇ ನಮ್ಮ ಸಿಎಂ: ಪೌರಾಡಳಿತ ಸಚಿವ ನಾರಾಯಣಗೌಡ - minister narayan reaction on santhosh suicide attempt case

ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ಹೊರಗಿನಿಂದ ಬಂದವರಿಗೆ ಸಚಿವ ಸ್ಥಾನ ಕೊಟ್ಟೇ ಕೊಡುತ್ತಾರೆ. ಅವರು ಯಾವತ್ತಿಗೂ ಮಾತಿಗೆ ತಪ್ಪುವುದಿಲ್ಲ ಎಂದು ಪೌರಾಡಳಿತ ಸಚಿವ ನಾರಾಯಣಗೌಡ ಹೇಳಿದ್ದಾರೆ.

minister narayan gowda pressmeet
ಪೌರಾಡಳಿತ ಸಚಿವ ನಾರಾಯಣಗೌಡ ಹೇಳಿಕೆ
author img

By

Published : Nov 29, 2020, 1:13 PM IST

ಪೊನ್ನಂಪೇಟೆ/ಕೊಡಗು: ಬಿ.ಎಸ್.‌ ಯಡಿಯೂರಪ್ಪ ಅವರೇ ನಮ್ಮ ಮುಖ್ಯ‌ಮಂತ್ರಿ ಮುಂದೆಯೂ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ ಎಂದು ಪೌರಾಡಳಿತ ಸಚಿವ ನಾರಾಯಣಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.‌

ಪೌರಾಡಳಿತ ಸಚಿವ ನಾರಾಯಣಗೌಡ ಪ್ರತಿಕ್ರಿಯೆ

ಜಿಲ್ಲೆಯ ಪೊನ್ನಂಪೇಟೆಯಲ್ಲಿ ಮಾತನಾಡಿದ ಅವರು, ಹೊರಗಿನಿಂದ ಬಂದವರಿಗೆ ಸಿಎಂ ಸಚಿವ ಸ್ಥಾನ ಕೊಟ್ಟೇ ಕೊಡುತ್ತಾರೆ. ಅವರು ಯಾವತ್ತಿಗೂ ಮಾತಿಗೆ ತಪ್ಪುವುದಿಲ್ಲ.‌ ಈಗ ಚುನಾವಣೆ ಇದ್ದಿದ್ದರಿಂದ ಸ್ವಲ್ಪ ತಡವಾಗಿದೆ. ಅವರು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.‌

ಸಿಎಂ ಕಾರ್ಯದರ್ಶಿ ಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಪ್ರತಿಕ್ರಿಯಿಸಿ, ಸಂತೋಷ ಆತ್ಮಹತ್ಯೆಗೆ ಪ್ರಯತ್ನಿಸಿಲ್ಲ, ಅವರು ತೆಗೆದುಕೊಂಡಿದ್ದ ಔಷಧ ರಿಯಾಕ್ಷನ್ ಆಗಿದೆ. ಅವರು ಆರೋಗ್ಯವಾಗಿದ್ದಾರೆ. ಇಂದು ಅಥವಾ ನಾಳೆ ಆಸ್ಪತ್ರೆಯಿಂದ ಹೊರ ಬರುತ್ತಾರೆ. ಆದರೆ ಪ್ರತಿಪಕ್ಷದವರಿಗೆ ಬೇರೇನು ವಿಷಯ ಇಲ್ಲದಿರುವುದರಿಂದ ಏನೇನೋ ಮಾತನಾಡುತ್ತಾರೆ ಎಂದು ಟಾಂಗ್​ ಕೊಟ್ಟರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.