ETV Bharat / state

ಆದಿವಾಸಿಗಳ ಅಹೋರಾತ್ರಿ ಧರಣಿ ಅಂತ್ಯ: ಊರುಗಳತ್ತ ಮುಖಮಾಡಿದ ಕಾಡಿನ ಮಕ್ಕಳು

ಮಳೆ, ಗಾಳಿ ಎನ್ನದೆ ಹಲವು ದಿನಗಳಿಂದ ಅಹೋರಾತ್ರಿ ಪ್ರತಿಭಟನೆ ನಡೆಸಿದ್ದ ಆದಿವಾಸಿಗಳು ಕೊನೆಗೂ ಜಯಶೀಲರಾಗಿ ತಮ್ಮೂರುಗಳತ್ತ ಹೆಜ್ಜೆ ಹಾಕಿದರು.

Tribals  Protest In Kodagu
ಆದಿವಾಸಿಗಳ ಆಹೋರಾತ್ರಿ ಧರಣಿ
author img

By

Published : May 22, 2022, 10:56 AM IST

ಮಡಿಕೇರಿ/ಕೊಡಗು: ಗಾಳಿ, ಮಳೆಯನ್ನು ಲೆಕ್ಕಿಸದೆ ಹಲವು ದಿನಗಳಿಂದ ಕಾಡಿನಲ್ಲಿ ನಡೆಯುತ್ತಿದ್ದ ಕಾಡು ಮಕ್ಕಳ ಅಹೋರಾತ್ರಿ ಹೋರಾಟ ಕೊನೆಗೂ ಅಂತ್ಯಗೊಂಡಿದೆ. ಹಲಸಿನ ಹಣ್ಣು ತಿಂದು ಹಸಿವು ನೀಗಿಸಿಕೊಳ್ಳುತ್ತಿದ್ದ ಇವರು, ಮೈಸೂರಿನ ಮಾಸ್ತಿಗುಡಿಯತ್ತ ತೆರಳಿದ್ದಾರೆ.

ಕೊಡಗು, ಮೈಸೂರು ಗಡಿ ಭಾಗವಾದ ಪೊನ್ನಪೇಂಟೆ ಸಮೀಪದ ಅಡುಗುಂಡಿಯಲ್ಲಿ ಕಳೆದ ಹಲವು ವರ್ಷಗಳಿಂದ ಅರಣ್ಯದಲ್ಲಿ ಬದುಕು ಕಟ್ಟಿಕೊಂಡು ಜೀವನ‌ ಸಾಗಿಸುತ್ತಿದ್ದರು. ಇವರು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಬಾರದೆಂದು ನಾಲ್ಕು ವರ್ಷಗಳ ಹಿಂದೆ ಆಡುಗುಂಡಿಯ ಅರಣ್ಯ ಪ್ರದೇಶದಲ್ಲಿದ್ದ ಆದಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಜಿಲ್ಲಾಡಳಿತ ನಿರ್ಧರಿಸಿತ್ತು. ಅದರಂತೆ ಹಲವು ಭರವಸೆಗಳನ್ನು ನೀಡಿ ಅವರ ಮನವೊಲಿಸಿ ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ರಾಜೇಗೌಡನ ಹುಂಡಿ ಗ್ರಾಮದಲ್ಲಿ ವ್ಯವಸ್ಥೆ ಮಾಡಲಾಗಿತ್ತು.

ಅಲ್ಲಿ ಸರಿಯಾದ ವ್ಯವಸ್ಥೆಗಳಿಲ್ಲದೆ ಹಕ್ಕು ಪತ್ರವೂ ಕೊಡದ ಕಾರಣ ಆದಿವಾಸಿಗಳು ಮತ್ತೆ ತಮ್ಮ ಮೂಲ ನೆಲೆಯತ್ತ ಬಂದಿದ್ದರು. ಆದರೆ ಅವರನ್ನು ಆಡುಗುಂಡಿ ಗೇಟ್ ಬಳಿ ಅಧಿಕಾರಿಗಳು ತಡೆದಿದ್ದರು. ನಮ್ಮ ಮೂಲ ಸ್ಥಳಕ್ಕೆ ಹೋಗುವಂತೆ ಒತ್ತಾಯಿಸಿ ಆದಿವಾಸಿಗಳು ಕಾಡಿನಲ್ಲಿ ಪ್ರತಿಭಟನೆಗೆ ಮುಂದಾಗಿದ್ದರು‌. ಹಲವು ದಿನಗಳ ಕಾಲ ಟಾರ್ಪಲ್ ಹೊದಿಕೆ ಕಟ್ಟಿಕೊಂಡು ಹಗಲು ರಾತ್ರಿ ಎನ್ನದೆ ಪ್ರತಿಭಟನೆ ನಡೆಸಿದರು.

ಮೊದಲೆರಡು ದಿನ ಯಾವುದೇ ಆಹಾರದ ಸಮಸ್ಯೆ ಎದುರಾಗಲಿಲ್ಲ. ಬಳಿಕ ಆಹಾರದ ಸಮಸ್ಯೆ ಎದುರಾಗಿ ಪಕ್ಕದ ತೋಟಗಳಿಂದ ಹಲಸಿನ ಹಣ್ಣು ತಿಂದು ಹೊಟ್ಟೆ ತುಂಬಿಸಿಕೊಂಡು ಹೋರಾಟ ಮುಂದುವರೆಸಿದರು. ಎಷ್ಟೇ ಕಷ್ಟ ಎದುರಾದರೂ ಈ ಜಾಗ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಅಧಿಕಾರಿಗಳು ಪ್ರತಿಭಟನಾಕಾರರನ್ನು ಭೇಟಿ ಮಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

ಇದೀಗ ಹುಣಸೂರಿನ ಮಾಸ್ತಿಗುಡಿಯ ಪುನರ್ವಸತಿ ಕೇಂದ್ರದಲ್ಲಿ 613 ಎಕರೆ ಕೃಷಿ ಜಾಗ ಸಮತಟ್ಟು ಮಾಡಲಾಗಿದೆ. ಪುನರ್ವಸತಿ ಕೇಂದ್ರದಲ್ಲಿರುವ 117 ಕುಟುಂಬಗಳಿಗೆ 3 ಎಕರೆ ಜಾಗಕ್ಕೆ ಆರ್.ಟಿ.ಸಿ ಕೊಡಲು ಅಧಿಕಾರಿಗಳು ಮುಂದಾಗಿದ್ದಾರೆ. ಹಾಗಾಗಿ ಆದಿವಾಸಿಗಳು ಹೋರಾಟ ಕೈಬಿಟ್ಟು ಮೈಸೂರು ಜಿಲ್ಲೆ ಹುಣಸೂರಿನ ಮಾಸ್ತಿಗುಡಿ ಪುನರ್ವಸತಿ ಕೇಂದ್ರಗಳತ್ತ ತೆರಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.