ಕೊಡಗು: ಪ್ರಾಕೃತಿಕ ಸೌಂದರ್ಯದಲ್ಲಿ ವಿಶೇಷವಾಗಿರುವ ಕೊಡಗು ವಿಶಿಷ್ಟ ಆಚರಣೆಗಳ ಮೂಲಕವೂ ಗಮನ ಸೆಳೆಯುತ್ತದೆ. ಮಗು ಹುಟ್ಟಿದ್ರೆ ಗುಂಡು ಹಾರಿಸಿ ಸಂಭ್ರಮಪಡುವ ಅವರು ಅವ್ರು ಯಾರಾದರೂ ಮೃತಪಟ್ಟರೆ ತ್ರಿವೇಣಿ ಸಂಗಮದಲ್ಲಿ ಪಿಂಡ ಪ್ರದಾನ ಮಾಡಿ ಸದ್ಗತಿಗೆ ಪ್ರಾರ್ಥಿಸುತ್ತಾರೆ. ಆದರೆ ಲಾಕ್ಡೌನ್ ಕಾರಣದಿಂದಾಗಿ ಮೂರು ತಿಂಗಳಿಂದ ಪಿಂಡ ಪ್ರದಾನ ಮಾಡೋಕೆ ಸಾಧ್ಯವಾಗ್ತಿಲ್ಲ.
ಲಾಕ್ಡೌನ್ನಿಂದ ಸ್ಥಗಿತವಾಗಿದ್ದ ಪಿಂಡಪ್ರದಾನದಂಥ ಆಚರಣೆಗಳಿಗೆ ಸರ್ಕಾರ ನಿರ್ಬಂಧ ವಿಧಿಸಿದೆ. ಸತ್ತವರ ಪಿಂಡ ಪ್ರದಾನ ಮಾಡದೇ ಮನೆ ಹೊರಗೆ ಹೋಗೋ ಹಾಗಿಲ್ಲ ಅನ್ನೋ ನಿಯಮ ಕೂಡಾ ಜನ್ರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಲಾಕ್ಡೌನ್ ಶುರುವಾದಾಗಿನಿಂದ ಸಾಕಷ್ಟು ಮಂದಿ ತ್ರಿವೇಣಿ ಸಂಗಮದಲ್ಲಿ ಪಿಂಡಪ್ರದಾನಕ್ಕೆ ಕಾಯುತ್ತಿದ್ದಾರೆ. ಇದ್ರಲ್ಲಿ ಕೊಡಗು ಮಾತ್ರ ಅಲ್ಲ, ಹೊರ ಜಿಲ್ಲೆಗಳಿಂದ ಬರೋರ ಸಂಖ್ಯೆ ಕೂಡಾ ಹೆಚ್ಚಾಗಿದೆ. ಕೆಲವೊಮ್ಮ ಕದ್ದು ಮುಚ್ಚಿ ಪಿಂಡ ಪ್ರದಾನ ಮಾಡೋ ಪ್ರಕರಣಗಳು ಕೂಡಾ ನಡೀತಿವೆ. ಕೆಲವರು ಪಿಂಡ ಪ್ರದಾನ ಮಾಡುತ್ತೇವೆ ಅಂತ ಹೆಚ್ಚು ಹಣ ಪಡೆದು ವಾಮಮಾರ್ಗದಲ್ಲಿ ಪಿಂಡ ಪ್ರದಾನ ಮಾಡುವವರೂ ಕೂಡಾ ಇದಾರೆ. ಈಗಲಾದರೂ ಸರ್ಕಾರ ತ್ರಿವೇಣಿ ಸಂಗಮದಲ್ಲಿ ಪಿಂಡ ಪ್ರದಾನಕ್ಕೆ ಅವಕಾಶ ನೀಡಬೇಕೆಂದು ಜನರ ಆಗ್ರಹವಾಗಿದೆ.