ಕೊಡಗು: ಜಿಲ್ಲೆಯನ್ನು ಹಸಿರು ವಲಯಕ್ಕೆ ಸೇರಿಸಿದ ಹಿನ್ನೆಲೆ ನಿರ್ಬಂಧ ಹೇರಿ ಲಾಕ್ಡೌನ್ ಸಡಿಲ ಮಾಡಲಾಗಿದೆ. ಹೀಗೆ ಸಡಿಲ ಮಾಡಿದ್ದೇ ತಡ, ಜನರು ತಮ್ಮ ಮಕ್ಕಳ ತಮೇತ ಟೌನ್ಗೆ ಲಗ್ಗೆ ಇಟ್ಟಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಸಾರ್ವಜನಿಕ ಸಾರಿಗೆಗಳಾದ ಆಟೋ, ಖಾಸಗಿ ಬಸ್ ಮತ್ತು ಕೆಎಸ್ಆರ್ಟಿಸಿ ಬಸ್ಗಳ ಓಡಾಟವನ್ನು ನಿಷೇಧಿಸಲಾಗಿದೆ. ಆದ್ರೂ ಜಿಲ್ಲೆಯಲ್ಲಿ ಲೆಕ್ಕವಿಲ್ಲದಷ್ಟು ಜನರು ತಮ್ಮ ಸ್ವಂತ ವಾಹನಗಳಲ್ಲೇ ಬೀದಿಗೆ ಇಳಿದ್ದಾರೆ. ಇದರಿಂದಾಗಿ ಮಡಿಕೇರಿಯ ಹಲವೆಡೆ ಟ್ರಾಫಿಕ್ ಜಾಮ್ ಆಯಿತು.
ಆ್ಯಂಬುಲೆನ್ಸ್ಗೂ ಜಾಗ ಬಿಡದಂತೆ ಟ್ರಾಫಿಕ್ ಆಗಿತ್ತು. ಈ ಹಿಂದೆ ವಾರದಲ್ಲಿ ಮೂರು ದಿನ ಮಾತ್ರವೇ ಬೆಳಗ್ಗೆ 6 ಗಂಟೆಯಿಂದ 12 ಗಂಟೆಯವರೆಗೆ ಮಾತ್ರ ಅವಕಾಶ ನೀಡಲಾಗಿತ್ತು. ಆಗ ಜನರು ಅಗತ್ಯ ವಸ್ತುಗಳನ್ನು ಕೊಂಡು ಮನೆ ಸೇರಿಕೊಳ್ಳುತ್ತಿದ್ದರು. ಆದ್ರೆ ಈಗ ಬೆಳಗ್ಗೆ 6ರಿಂದ ಸಂಜೆ 4 ಗಂಟೆವರೆಗೆ ಎಲ್ಲಾ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಿರುವುದರಿಂದ ಜನರು ಓಡಾಡಿಕೊಂಡಿದ್ದಾರೆ. ಇಷ್ಟೊಂದು ಫ್ರೀ ಬೇಕಾಗಿರಲ್ಲಿಲ್ಲ ಅನ್ನೋದು ಸಾಕಷ್ಟು ಜನರ ಅಭಿಪ್ರಾಯ.