ETV Bharat / state

ಪ್ರಕೃತಿ ವಿಕೋಪದ ನಂತರ ಕೊಡಗಿನಲ್ಲಿ‌ ಹಾಕಿ ಹಬ್ಬ: ಉತ್ಸವದ ಲೋಗೋ ಬಿಡುಗಡೆ - ಭೀಕರ ಜಲಸ್ಫೋಟ

ಕೊಡಗಿನಲ್ಲಿ ಉಂಟಾಗಿದ್ದ ಭೀಕರ ಜಲಸ್ಫೋಟದಿಂದಾಗಿ ರದ್ದು ಮಾಡಲಾಗಿದ್ದ ಕೊಡವರ ಹಾಕಿ ಹಬ್ಬ ಮತ್ತೆ ಆಯೋಜಿಸಲಾಗುತ್ತಿದೆ.

kodava-hockey-game-start
author img

By

Published : Oct 28, 2019, 11:40 PM IST

ಕೊಡಗು: ಜಿಲ್ಲೆಯಲ್ಲಿ ನಡೆದ ಭೀಕರ ಜಲಸ್ಫೋಟದಿಂದಾಗಿ 22 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದ ಕೊಡವರ ಹಾಕಿ ಹಬ್ಬವನ್ನು ರದ್ದು ಮಾಡಲಾಗಿತ್ತು. ಈಗ ಮತ್ತೆ ಆ ಹಾಕಿಯ ಕಲರವ ಜಿಲ್ಲೆಯಲ್ಲಿ ಆರಂಭವಾಗಲಿದೆ. ಅದಕ್ಕಾಗಿ ಎಲ್ಲಾ ಸಿದ್ಧತೆಗಳು ಭರದಿಂದ ಸಾಗುತ್ತಿವೆ.

23ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಉತ್ಸವ ರದ್ದುಗೊಳಿಸಿ ಜನರ ಸಂಕಷ್ಟಕ್ಕೆ ಮಿಡಿಯುವ ಕೆಲಸ ಮಾಡಲಾಯಿತು. ಇಂದು ವಿರಾಜಪೇಟೆ ಸಮೀಪದ ಬಾಳುಗೋಡು ಕೊಡವ ಸಾಂಸ್ಕೃತಿಕ ಕೇಂದ್ರದಲ್ಲಿ ಹಾಕಿ ಉತ್ಸವದ ಲೋಗೊ ಬಿಡುಗಡೆ ಕಾರ್ಯಕ್ರಮ ನಡೆಯಿತು. ಅನರ್ಹ ಶಾಸಕ ಹೆಚ್​.ವಿಶ್ವನಾಥ್​ ಅವರು ಲೋಗೋ ಬಿಡುಗಡೆ ಮಾಡಿದರು.

ಕೊಡವರ ಹಾಕಿ ಹಬ್ಬದ ಲೋಗೋ ಬಿಡುಗಡೆ ಕಾರ್ಯಕ್ರಮ

ಈ ಬಾರಿ ಹರಿಹರ, ಬೆಳ್ಳೂರು ಗ್ರಾಮದ ಮುಕ್ಕಾಟ್ಟಿರ ಕುಟುಂಬದವರು ಮುಂದಿನ ಏಪ್ರಿಲ್‌, ಮೇ ತಿಂಗಳಲ್ಲಿ ಬಾಳುಗೋಡುವಿನಲ್ಲಿ ಹಾಕಿ ಹಬ್ಬವನ್ನು ನಡೆಸಲಿದ್ದಾರೆ. ಈ ಬಾರಿ ಒಟ್ಟು 300 ಕ್ಕೂ ಹೆಚ್ಚು ತಂಡಗಳು ಈ ಹಾಕಿ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ವಿಶೇಷವಾಗಿ ಹಾಗೂ ವಿಭಿನ್ನವಾಗಿ ಹಾಕಿ ಹಬ್ಬ ನಡೆಸಲು ಕುಟುಂಬದವರು ನಿರ್ಧರಿಸಿದ್ದಾರೆ. ರಾಜ್ಯ ಸರ್ಕಾರ ಕೂಡ ಪ್ರತೀ ವರ್ಷದಂತೆ ಈ ಬಾರಿಯೂ ಅನುದಾನ ನೀಡಲಿದೆ. ಒಟ್ಟಿನಲ್ಲಿ ಕೊಡವರ ಹಾಕಿ ಉತ್ಸವ ಈ ಬಾರಿ ಅದ್ದೂರಿಯಾಗಿ ನಡೆಯುತ್ತಿರುವುದು ಹಾಕಿ ಆಟಗಾರರಲ್ಲಿ ಹಾಗೂ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಒಂದು ತಿಂಗಳ ಕಾಲ ಈ ಹಾಕಿ ಪಂದ್ಯಾವಳಿ ಕ್ರೀಡಾ ಅಭಿಮಾನಿಗಳಿಗೆ ರಸದೌತಣ ನೀಡಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.