ETV Bharat / state

ಸತ್ಯ-ಅಸತ್ಯತೆಯನ್ನು ಜನತೆಯ ಮುಂದಿಡಿ.. ಶಾಸಕ ಅಪ್ಪಚ್ಚು ರಂಜನ್ ಅಭಿಮತ - Kodagu News

ಕೊರೊನಾ ಸಮಯದಲ್ಲಿ 665 ಕೋಟಿ ಖರ್ಚು ಮಾಡಿದ್ದೇವೆ ಎಂದು ಆಡಳಿತ ಪಕ್ಷದ ಸಚಿವರು ಹೇಳುತ್ತಾರೆ. ಮತ್ತೊಂದೆಡೆ ‌ವಿರೋಧ ಪಕ್ಷದವರು 4 ಸಾವಿರ ಕೋಟಿ ಅಂತಾರೆ. ಹೀಗೆ ಇರುವಾಗ 2 ಸಾವಿರ ಕೋಟಿ ಹಣ ದುರುಪಯೋಗವಾಗಲು ಹೇಗೆ ಸಾಧ್ಯ?.

Everything must be made transparent in front of people: MLA Appacchu ranjan
ಸತ್ಯ-ಅಸತ್ಯತೆಯನ್ನು ಜನತೆಯ ಮುಂದಿಡಿ: ಶಾಸಕ ಅಪ್ಪಚ್ಚು ರಂಜನ್ ಅಭಿಮತ..!
author img

By

Published : Jul 24, 2020, 5:18 PM IST

ಮಡಿಕೇರಿ/ಕೊಡಗು : ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ವಿರೋಧ ಪಕ್ಷ ಆರೋಪಿಸುತ್ತಿದ್ದು, ಈ ಬಗ್ಗೆ ಸರ್ಕಾರ ತನಿಖೆ ನಡೆಸಿ ಸತ್ಯ-ಅಸತ್ಯತೆಯನ್ನು ಜನತೆಯ ಮುಂದೆ ಇಡಬೇಕು ಎಂದು ಶಾಸಕ ಎಂ ಪಿ ಅಪ್ಪಚ್ಚು ರಂಜನ್ ಸಲಹೆ ನೀಡಿದ್ದಾರೆ.

ವಿರೋಧ ಪಕ್ಷದ ಆರೋಪಗಳಿಗೆ ಅಗತ್ಯ ಮಾಹಿತಿ ಹಾಗೂ ದಾಖಲೆಗಳನ್ನು ಕೊಡಬೇಕಾಗಿರುವುದು ಆಡಳಿತ ಪಕ್ಷದ ಜವಾಬ್ದಾರಿ. ಬಿಜೆಪಿ ಸರ್ಕಾರದ ಮೇಲಿನ ಆರೋಪಕ್ಕೆ ಈಗಾಗಲೇ ‌ಆರ್‌. ಅಶೋಕ್‌ ಸೇರಿ ಹಲವರು ಉತ್ತರ ಕೊಟ್ಟಿದ್ದಾರೆ.‌

ಕೊರೊನಾ ಸಮಯದಲ್ಲಿ 665 ಕೋಟಿ ಖರ್ಚು ಮಾಡಿದ್ದೇವೆ ಎಂದು ಆಡಳಿತ ಪಕ್ಷದ ಸಚಿವರು ಹೇಳುತ್ತಾರೆ. ಮತ್ತೊಂದೆಡೆ ‌ವಿರೋಧ ಪಕ್ಷದವರು 4 ಸಾವಿರ ಕೋಟಿ ಅಂತಾರೆ. ಹೀಗೆ ಇರುವಾಗ 2 ಸಾವಿರ ಕೋಟಿ ಹಣ ದುರುಪಯೋಗವಾಗಲು ಹೇಗೆ ಸಾಧ್ಯ?. ಸುಮ್ಮನೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುವ ಬದಲು ದಾಖಲೆಗಳ‌ ಸಮೇತ ಮಾತನಾಡಬೇಕು ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.