ಮಡಿಕೇರಿ(ಕೊಡಗು): ಅನಾರೋಗ್ಯ ಹಿನ್ನಲೆಯಲ್ಲಿ ಕಾಡಾನೆಯೊಂದು ಜಾರಿಬಿದ್ದು ಜೀವನ್ಮರಣ ಪರಿಸ್ಥಿತಿಯಲ್ಲಿ ಒದ್ದಾಡುತ್ತಿರುವ ಘಟನೆ ವಿರಾಜಪೇಟೆ ತಾಲೂಕಿನ ವಾಲ್ನೂರು ಗ್ರಾಮದಲ್ಲಿ ನಡೆದಿದೆ.
ವಾಲ್ನೂರಿನ ಕಾಫಿ ತೋಟದಲ್ಲಿ ನಿತ್ರಾಣಗೊಂಡು ಜಾರಿ ಬಿದ್ದಿರುವ ಕಾಡಾನೆಯನ್ನು ಮೇಲೆತ್ತಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ದುಬಾರೆ ಸಾಕಾನೆ ಕ್ಯಾಂಪ್‌ನಿಂದ 5 ಆನೆಗಳನ್ನು ಕರೆತಂದಿದ್ದು, ಬಿದ್ದಿರುವ ಆನೆಯನ್ನು ಮೇಲಕ್ಕೆತ್ತುವ ಪ್ರಯತ್ನಗಳು ನಡೆಯುತ್ತಿವೆ.