ಕುಶಾಲನಗರ (ಕೊಡುಗು) : ಕೊಡಗಿನ ಮಣ್ಣಿನಲ್ಲಿ ಅಪಾರ ಶಕ್ತಿಯಿದೆ. ಆ ಶಕ್ತಿಯ ಬಲದಿಂದ ಹನುಮನನ್ನು ಮಾನ್ಯ ಮಾಡದವರನ್ನು ಸೋಲಿಸುವ ಮೂಲಕ ನಮ್ಮ ಬಲ ಪ್ರದರ್ಶಿಸುವ ಕಾಲ ಕೂಡಿ ಬಂದಿದೆ. ಅಪ್ಪಚ್ಚು ರಂಜನ್ ಮತ್ತೆ ಗೆಲ್ಲುವುದರೊಂದಿಗೆ ಅದರ ಸಾಕಾರ ಮತ್ತೊಮ್ಮೆ ಆಗಬೇಕಿದೆ ಎಂದು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ವಿ. ಕೆ. ಸಿಂಗ್ ಅವರು ಹೇಳಿದರು.
ಇದನ್ನೂ ಓದಿ : ಹ್ಯಾಟ್ರಿಕ್ ಜಯ ಸಾಧಿಸಿರುವ ಸತೀಶ್ ರೆಡ್ಡಿ ನಿದ್ದೆಗೆಡಿಸಿದ ಕಾಂಗ್ರೆಸ್ ಅಭ್ಯರ್ಥಿ: ಯಾರಾಗಲಿದ್ದಾರೆ ಬೊಮ್ಮನಹಳ್ಳಿ ಬಾಸ್?
ಪಟ್ಟಣದ ಬಸ್ ಸ್ಟ್ಯಾಂಡ್ ಬಳಿ ಏರ್ಪಡಿಸಲಾಗಿದ್ದ ಬಿಜೆಪಿ ಅಭ್ಯರ್ಥಿ ಎಂ. ಪಿ. ಅಪ್ಪಚ್ಚು ರಂಜನ್ ಪರ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತಾನಾಡಿದ ಅವರು "ನನಗೆ ಕೊಡಗಿನ ಬಗ್ಗೆ ಮೊದಲಿನಿಂದಲೂ ಭಾರಿ ಗೌರವವಿದೆ. ಕಾರಣ ಭಾರತೀಯ ಸೇನೆಯ ಮೊತ್ತ ಮೊದಲ ಮುಖ್ಯಸ್ಥ ಜನರಲ್ ಕಾರಿಯಪ್ಪ ಈ ಮಣ್ಣಿನ ಮಗ ಅದಲ್ಲದೆ ರಜಪೂತ್ ರಿಜಿಮೆಂಟಿನವರು 23ನೇ ಸೇನಾ ಮುಖ್ಯಸ್ಥನಾಗಿದ್ದ ನಾನೂ ಕೂಡ ರಾಜಪೂತ್ ರೆಜಿಮೆಂಟಿನವನು. ಇದು ವೀರಪುತ್ರರ ಭೂಮಿ. ಇಲ್ಲಿನ ಅಸಂಖ್ಯಾತ ಸೇನಾನಿಗಳು ಭಾರತೀಯ ಸೇನೆಯ ಗರಿಮೆಯನ್ನು ಹೆಚ್ಚಿಸಿದ್ದಾರೆ. ಈ ಬಾರಿ ಅಪ್ಪಚ್ಚು ರಂಜನ್ ಕೂಡ ಗೆದ್ದು ಸಚಿವರಾಗಿ ಈ ನೆಲದ ಅಭಿವೃದ್ಧಿಗಾಗಿ ಇನ್ನಷ್ಟು ಕೆಲಸ ಮಾಡಲಿದ್ದಾರೆ. ಆದರಿಂದ ಅವರನ್ನು ಆರಿಸಿ ಕಳುಹಿಸಿ" ಎಂದು ಮತದಾರರಲ್ಲಿ ಮನವಿ ಮಾಡಿದರು.
ಇದನ್ನೂ ಓದಿ : ಶೇಕಡಾ 69 ರಷ್ಟು ಮಹಿಳೆಯರಿಂದ ಮುದ್ರಾ ಯೋಜನೆ ಸದ್ಬಳಕೆ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
"ಕಾಂಗ್ರೆಸ್ನಿಂದ ದೇಶದ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. ಅದು ಯಾವಾಗಲೂ ದೇಶವನ್ನು ಕೆಳ ಮಟ್ಟದ ರೀತಿಯಲ್ಲಿ ಬಿಂಬಿಸುವ ಕೆಲಸವನ್ನೇ ಮಾಡುತ್ತಾ ಬಂದಿದೆ. ಈ ಬಾರಿ ಮೇ 10 ರಂದು ನಡೆಯುಲಿರುವ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಕಮಲ ಕರ್ನಾಟಕದಲ್ಲಿ ಅರಳಿ, ಅಭಿವೃದ್ಧಿ ಕೆಲಸ-ಕಾರ್ಯಗಳು ಮುಂದುವರೆಯಬೇಕಿದೆ" ಎಂದು ವಿ. ಕೆ. ಸಿಂಗ್ ಹೇಳಿದರು.
ಇನ್ನು ಈ ಸಂದರ್ಭದಲ್ಲಿ ಶಿರಂಗಾಲದಿಂದ ಕುಶಾಲನಗರವರೆಗೆ ಆಯೋಜಿಸಲಾಗಿದ್ದ ಬೃಹತ್ ಬೈಕ್ ರಾಲಿಯಲ್ಲಿ ಸಾಗಿ ಬಂದ ಅಪ್ಪಚ್ಚು ರಂಜನ್ ಮತ್ತು ಇತರ ಬಿಜೆಪಿ ನಾಯಕರನ್ನು ವಿ. ಕೆ. ಸಿಂಗ್ ಕುಶಾಲನಗರದಲ್ಲಿ ಕೂಡಿಕೊಂಡರು. ನಾಯಕರನ್ನು ಪುಷ್ಪವೃಷ್ಠಿಗೈದು ಬರಮಾಡಿಕೊಳ್ಳಲಾಯಿತು. ಸಭೆಯನ್ನು ಉದ್ದೇಶಿಸಿ ಅಪ್ಪಚ್ಚು ರಂಜನ್, ಬಿಜೆಪಿ ನಾಯಕರಾದ ಭಾರತೀಶ್ ಮುಂತಾದವರು ಮಾತನಾಡಿದರು.
ಇದನ್ನೂ ಓದಿ : ಜೆಡಿಎಸ್ನದ್ದು ಕುಟುಂಬಸ್ಥರ ನವರತ್ನ ಕಾರ್ಯಕ್ರಮ.. ಸಿದ್ದರಾಮಯ್ಯ ಮಜಾರಾಮಯ್ಯ: ಸಂಸದ ಶ್ರೀನಿವಾಸ್ ಪ್ರಸಾದ್