ETV Bharat / state

ಪಾಳು ಬಾವಿಗೆ ಬಿದ್ದ ಹಸು.. ಎನ್‌ಡಿಆರ್‌ಎಫ್ ತಂಡದಿಂದ ಮೂಕ ಪ್ರಾಣಿಯ ರಕ್ಷಣೆ

ಬಾವಿಯ ಕೆಳಗಿಳಿದ್ದ ಹಸುವಿನ ಹೊಟ್ಟೆಗೆ ಹಗ್ಗ ಕಟ್ಟಿ ಮೇಲೆತ್ತಲಾಯಿತು. ಸ್ಥಳೀಯ ನಿವಾಸಿಗಳು ಕೂಡ ಕಾರ್ಯಾಚರಣೆಗೆ ಕೈಜೋಡಿಸಿದರು.

madikeri
ಪಾಳು ಬಾವಿಗೆ ಬಿದ್ದ ಹಸು
author img

By

Published : Jun 29, 2020, 7:49 PM IST

ಮಡಿಕೇರಿ : ಮೇಯುವಾಗ ಆಯತಪ್ಪಿ ಪಾಳುಬಾವಿಗೆ ಬಿದ್ದ ಹಸುವನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಿಸಿದ್ದಾರೆ.

ನಗರದ ಐಟಿಐ ಕಾಲೇಜು ರಸ್ತೆ ಸಮೀಪದ ಬೊಟ್ಟೋಳಂಡ ಕಾಶಿ, ಪೂಣಚ್ಚ ಎಂಬುವರ ಮನೆ ಸಮೀಪವಿರುವ ಪಾಳುಬಿದ್ದ ಬಾವಿಯ ಬಳಿ ಬಿಡಾಡಿ ಹಸುವೊಂದು ಮೇಯುವ ಸಂದರ್ಭ ಬಾವಿಗೆ ಬಿದ್ದಿದೆ. ಇದನ್ನು ಗಮನಿಸಿದ ಯುವಕರು ಸ್ಥಳೀಯ ನಿವಾಸಿಗಳಿಗೆ ತಿಳಿಸಿದರು. ಬಳಿಕ ಮೈತ್ರಿ ಭವನದಲ್ಲಿದ್ದ ಎನ್‌ಡಿಆರ್‌ಎಫ್ ಸಿಬ್ಬಂದಿ ಸ್ಥಳಕ್ಕೆ ಕರೆಸಿ ಅಗ್ನಿಶಾಮಕ ದಳದೊಂದಿಗೆ ಅರ್ಧ ಗಂಟೆ ಜಂಟಿ ಕಾರ್ಯಾಚರಣೆ ನಡೆಸಲಾಯಿತು. ಬಾವಿಯ ಕೆಳಗಿಳಿದ್ದ ಹಸುವಿನ ಹೊಟ್ಟೆಗೆ ಹಗ್ಗ ಕಟ್ಟಿ ಮೇಲೆತ್ತಲಾಯಿತು. ಸ್ಥಳೀಯ ನಿವಾಸಿಗಳು ಕೂಡ ಕಾರ್ಯಾಚರಣೆಗೆ ಕೈಜೋಡಿಸಿದರು.

ಪಾಳು ಬಾವಿಗೆ ಬಿದ್ದ ಹಸು

ಸುಮಾರು 100 ವರ್ಷ ಹಳೆಯದಾದ ಪಾಳು ಬಿದ್ದ ಭಾವಿಯಲ್ಲಿ ಯಾವುದೇ ತಡೆಗೋಡೆ ಇಲ್ಲದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.