ETV Bharat / state

ಗಮನಿಸಿ: 13 ದಿನ ಕೊಡಗಿನಲ್ಲಿ ನಿಷೇಧಾಜ್ಞೆ ಜಾರಿ... ಡಿಸಿ ಕಚೇರಿಯೂ ಬಂದ್! - ಕೊಡಗಿನಲ್ಲಿ ಕೊರೊನಾ ದೃಢ

ಕೊಡಗಿನಲ್ಲಿ ಕೊರೊನಾ ವೈರಸ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಐಪಿಸಿ ಸೆಕ್ಷನ್ 144 ಜಾರಿಗೊಳಿಸಿ ಜಿಲ್ಲಾಧಿಕಾರಿ ಅನೀಸ್ ಕೆ. ಜಾಯ್ ಆದೇಶ ಹೊರಡಿಸಿದ್ದಾರೆ‌

144 Section Enforcement in Kodagu
ಕೊರೊನಾ ದೃಢ
author img

By

Published : Mar 19, 2020, 1:08 PM IST

Updated : Mar 19, 2020, 1:52 PM IST

ಕೊಡಗು: ಕೊರೊನಾ ವೈರಸ್ ದೃಢಪಟ್ಟ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಐಪಿಸಿ ಸೆಕ್ಷನ್ 144(3) ಜಾರಿಗೊಳಿಸಿ ಜಿಲ್ಲಾಧಿಕಾರಿ ಅನೀಸ್ ಕೆ. ಜಾಯ್ ಆದೇಶ ಹೊರಡಿಸಿದ್ದಾರೆ‌.‌

ಗುರುವಾರದಿಂದ ಜಿಲ್ಲೆಯಲ್ಲಿ 13 ದಿನಗಳು ಅಂದರೆ ಮಾರ್ಚ್ 31 ರವರೆಗೆ 144(3) ಕಾಯ್ದೆ ಜಾರಿ ಮಾಡಲಾಗಿದೆ. ಹೋಂ ಸ್ಟೇ, ಐಶಾರಾಮಿ ಹೊಟೇಲ್, ಪ್ರವಾಸಿ ತಾಣಗಳಿಗೆ ಸಂಪೂರ್ಣ ನಿಷೇಧ ವಿಧಿಸಲಾಗಿದ್ದು, ರೆಸಾರ್ಟ್ ಮತ್ತು ಲಾಡ್ಜ್ ಗಳನ್ನು ಮುಚ್ಚುವಂತೆ ತುರ್ತು ಆದೇಶ ಹೊರಡಿಸಲಾಗಿದೆ.

144 Section Enforcement in Kodagu
13 ದಿನಗಳು ಜಿಲ್ಲೆಯಲ್ಲಿ ಐಪಿಸಿ 144 ಜಾರಿ

ಜಿಲ್ಲಾಧಿಕಾರಿ ಕಚೇರಿಗೂ ಗೇಟ್..!

ಕೊರೊನಾ ಭೀತಿಯಿಂದ ಜಿಲ್ಲಾಡಳಿತ ಜಿಲ್ಲೆಯಾದ್ಯಂತ ಹೈಅಲರ್ಟ್ ಘೋಷಿಸಿದ್ದು, ಜಿಲ್ಲಾಧಿಕಾರಿ ಕಚೇರಿಗೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸಲು ಸಹಾಯಕಿಯನ್ನು ನಿಯೋಜಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿ ಗೇಟ್ ಬಂದ್ ಮಾಡಿದ್ದು, ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಕಚೇರಿ ಒಳ ಬರುವ ಅಧಿಕಾರಿಗಳಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಸುವಂತೆ ಸೂಚಿಸಲಾಗಿದೆ.

13 ದಿನ ಕೊಡಗು ಜಿಲ್ಲೆಯಲ್ಲಿ ಐಪಿಸಿ 144 ಜಾರಿ

Last Updated : Mar 19, 2020, 1:52 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.