ಕೊಡಗು: ಲಾಕ್‌ಡೌನ್ ಆದೇಶ ಉಲ್ಲಂಘಿಸಿ ಜಿಲ್ಲೆಯ ಸುಂಟಿಕೊಪ್ಪ ಸಮೀಪದ ಪ್ಯಾಡಿಂಗ್ಟನ್ ರೆಸಾರ್ಟ್‌ನಲ್ಲಿ ಮೋಜಿನಲ್ಲಿ ತೊಡಗಿದ್ದ 6 ಮಂದಿಯ ವಿರುದ್ಧ ಐಪಿಸಿ ಸೆಕ್ಷನ್ 188 ಅಡಿ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಲಾಕ್‌ಡೌನ್ ಜಾರಿಯಲ್ಲಿದ್ದರೂ ಮೂರು ದಿನಗಳಿಂದ ಹಲವರು ಸುಂಟಿಕೊಪ್ಪ ಬಳಿಯ ಪ್ಯಾಂಡಿಂಗ್ ಟನ್ ರೆಸಾರ್ಟ್ ಬಳಿ ಮೋಜು-ಮಸ್ತಿ ನಡೆಸುತ್ತಿದ್ದರು. ಈ ಬಗ್ಗೆ ಸುಂಟಿಕೊಪ್ಪ ಪೊಲೀಸರು ಸ್ಥಳೀಯ ಪಿಡಿಒ ಅವರನ್ನು ಪರಿಶೀಲನೆ ನಡೆಸಿದಾಗ ಚಿಕ್ಲಿಹೊಳೆ ರಸ್ತೆಯಲ್ಲಿ ಕೆ.ಎ.12 ಪಿ 1953 ನೋಂದಣಿಯ ಜೀಪ್‌ನಲ್ಲಿ ಸುಮಾರು 6 ಜನರು ಸುಂಟಿಕೊಪ್ಪ ಕಡೆ ಬರುತ್ತಿದ್ದರು ಎನ್ನಲಾಗಿದೆ.
ಮೂರು ದಿನಗಳಿಂದಲೂ ಬೆಂಗಳೂರಿನಿಂದ ಬಂದಿರುವ ವ್ಯಕ್ತಿಗಳು ದಿನವಿಡಿ ಬೈಸಿಕಲ್ ಸಂಚಾರ ಹಾಗೂ ಜೀಪ್ ರೈಡಿಂಗ್, ಟ್ರೆಕ್ಕಿಂಗ್ ಹೀಗೆ ಹೊರಗಡೆ ಸಂಚಾರ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಅಲ್ಲದೆ ಸಮೀಪದ ಚಿಕ್ಲಿಹೊಳೆ ಜಲಾಶಯಕ್ಕೆ ಹೋಗಿ ವಿಹಾರ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದರು. ಇದೀಗ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ.