ETV Bharat / state

ಮಡಿಕೇರಿ: ಮನೆಯವರಿಗೆ ಕರೆ ಮಾಡಿ ಆಟೋ ಚಾಲಕ ಆತ್ಮಹತ್ಯೆ - ಆಟೋ ಡ್ರೈವರ್ ಸೈಫು

ಶೋಧಕಾರ್ಯದ ವೇಳೆ ಹೊಳೆಯ ಮಧ್ಯ ಭಾಗದಲ್ಲಿ ಮೃತದೇಹ ಸಿಕ್ಕಿದೆ. ಸೈಫು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

Body search by firemen
ಅಗ್ನಿಶಾಸಮಕ ಸಿಬ್ಬಂದಿಯಿಂದ ಮೃತದೇಹ ಶೋಧಕಾರ್ಯ
author img

By

Published : Oct 30, 2022, 9:49 AM IST

Updated : Oct 30, 2022, 12:11 PM IST

ಮಡಿಕೇರಿ: ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಆಟೋ ಚಾಲಕ ನಿನ್ನೆ ರಾತ್ರಿ ಮನೆಯವರಿಗೆ ಕರೆ ಮಾಡಿ ತಿಳಿಸಿ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಡಿಕೇರಿ ನಗರದ ಹೊರಹೊಲಯದ ಕೂಟ್ಟುಕೊಳೆ ಎಂಬಲ್ಲಿ ನಡೆದಿದೆ. ಆಜಾದ್ ನಗರ ನಿವಾಸಿ ಆಟೋ ಡ್ರೈವರ್ ಸೈಫು (31) ಮೃತಪಟ್ಟ ವ್ಯಕ್ತಿ.

ಸೈಫುವಿನ ಕರೆ ಬಂದ ಬಳಿಕ ಮನೆಯವರು ಮಡಿಕೇರಿ ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಾಟ ‌ನಡೆಸಿದ್ದಾರೆ. ಹೊರ ವಲಯದ ಕೂಟ್ಟು ಹೊಳೆಯದಲ್ಲೆಲ್ಲ ಜಾಲಾಡಿದಾಗ, ಹೊಳೆಯ ಬದಿ ಆಟೋ ಪತ್ತೆಯಾಗಿತ್ತು. ಕೂಟು ಹೊಳೆ ಬದಿಯಲ್ಲಿ ನಿಲ್ಲಿಸಿದ್ದ ಆಟೋದಲ್ಲಿ ಮೊಬೈಲ್‌, ಪರ್ಸ್ ಸಿಕ್ಕಿದೆ. ತಕ್ಷಣವೇ ಮನೆಯವರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು.‌

ಮನೆಯವರಿಗೆ ಕರೆ ಮಾಡಿ ಆಟೋ ಚಾಲಕ ಆತ್ಮಹತ್ಯೆ, ಶೋಧಕಾರ್ಯ

ರಾತ್ರಿ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಮತ್ತು ಪೊಲೀಸ್ ಸಿಬ್ಬಂದಿಗೆ ಹೊಳೆಯಲ್ಲಿ ಶೋಧಕಾರ್ಯ ಮಾಡಲು ಸಾಧ್ಯವಾಗದೇ ಬೆಳಗ್ಗೆ ಮೃತದೇಹ ಶೋಧ ಕಾರ್ಯಕ್ಕಿಳಿದಿದ್ದಾರೆ. ಈ ಸಂದರ್ಭದಲ್ಲಿ ಹೊಳೆಯ ಮಧ್ಯ ಭಾಗದಲ್ಲಿ ಮೃತದೇಹ ಸಿಕ್ಕಿದ್ದು, ಮರಣೋತ್ತರ ಪರೀಕ್ಷೆಗೆ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.

ಹಲವು ದಿನಗಳಿಂದ ಆಟೋ ಚಾಲಕ ಅನಾರೋಗ್ಯದಿಂದ ಬಳಲುತ್ತಿದ್ದ ಎಂದು ಹೇಳಲಾಗುತ್ತಿದೆ. ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಸುಬ್ರಹ್ಮಣ್ಯ: ನವಜಾತ ಗಂಡು ಮಗುವನ್ನು ಬಾವಿಗೆಸೆದು ಕೊಂದ ತಾಯಿ

Last Updated : Oct 30, 2022, 12:11 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.