ETV Bharat / state

ಶಿಕ್ಷಣ ಇಲಾಖೆಯ ಪಠ್ಯದ ಆಧಾರದಂತೆ ಅರೇಬಿಕ್ ಶಾಲೆಗಳು ಬೋಧಿಸುತ್ತಿಲ್ಲ: ಸಚಿವ ನಾಗೇಶ್ - ಕೆಂಪೇಗೌಡ ಪ್ರತಿಮೆ

ರಾಜ್ಯದಲ್ಲಿ ಸರ್ಕಾರದ ಅನುದಾನ ಪಡೆದ 106 ಅರೇಬಿಕ್ ಶಾಲೆಗಳಿವೆ. 80 ಖಾಸಗಿ ಅರೇಬಿಕ್ ಶಾಲೆಗಳಿವೆ. ಇವು ಶಿಕ್ಷಣ ಇಲಾಖೆಯ ಪಠ್ಯದ ಆಧಾರದಲ್ಲಿ ಬೋಧನೆ ಮಾಡುತ್ತಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ‌.ನಾಗೇಶ್ ತಿಳಿಸಿದರು.

arabic-schools-not-teaching-based-on-education-dept-textbook-says-minister-bc-nagesh
ಶಿಕ್ಷಣ ಇಲಾಖೆಯ ಪಠ್ಯದ ಆಧಾರದಲ್ಲಿ ಅರೆಬಿಕ್ ಶಾಲೆಗಳು ಬೋಧನೆ ಮಾಡುತ್ತಿಲ್ಲ: ಸಚಿವ ನಾಗೇಶ್
author img

By

Published : Oct 27, 2022, 7:27 PM IST

ಕೊಡಗು: ರಾಜ್ಯದಲ್ಲಿ ನೂರಾರು ಅರೇಬಿಕ್ ಶಾಲೆಗಳಿವೆ. ಎಲ್ಲ ಶಾಲೆಗಳು ಶಿಕ್ಷಣ ಪಠ್ಯಕ್ರಮದ ಅನುಸಾರ ನಡೆಯಬೇಕಿತ್ತು. ಆದರೆ, ಆ ಶಾಲೆಗಳು ಸರಿಯಾದ ಶಿಕ್ಷಣ ನಡೆಯುತ್ತಿಲ್ಲ ಎಂದು ಕೊಡಗು ಉಸ್ತುವಾರಿ ಸಚಿವರಾದ ಶಿಕ್ಷಣ ಸಚಿವ ಬಿ.ಸಿ‌.ನಾಗೇಶ್ ಹೇಳಿದರು.

ಅರೇಬಿಕ್ ಶಾಲೆಗಳ ಸಮೀಕ್ಷೆ ವಿಚಾರ ಕುರಿತಾಗಿ ಮಡಿಕೇರಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಅನುದಾನ ಪಡೆದ 106 ಅರೇಬಿಕ್ ಶಾಲೆಗಳಿವೆ. 80 ಖಾಸಗಿ ಅರೇಬಿಕ್ ಶಾಲೆಗಳಿವೆ. ಇವು ಶಿಕ್ಷಣ ಇಲಾಖೆಯ ಪಠ್ಯದ ಆಧಾರದಲ್ಲಿ ಬೋಧನೆ ಮಾಡುತ್ತಿಲ್ಲ. ಎಲ್ಲ ಅನುದಾನಿತ ಶಾಲೆಗಳಲ್ಲಿರುವಂತೆ ಸೌಲಭ್ಯ ಇರಬೇಕಿತ್ತು. ಮಕ್ಕಳಿಗೆ ಭಾಷಾ ಸಾಮರ್ಥ್ಯ ಕೊಡುವ ಕೆಲಸ ಮಾಡಬೇಕಿತ್ತು. ಅನೇಕ ಶಾಲೆಗಳು ಇದನ್ನು ಮಾಡಿಲ್ಲ ಅಸಮಾಧಾನ ವ್ಯಕ್ತಪಡಿಸಿದರು.

ಶಿಕ್ಷಣ ಇಲಾಖೆಯ ಪಠ್ಯದ ಆಧಾರದಲ್ಲಿ ಅರೆಬಿಕ್ ಶಾಲೆಗಳು ಬೋಧನೆ ಮಾಡುತ್ತಿಲ್ಲ: ಸಚಿವ ನಾಗೇಶ್

27,000 ಮಕ್ಕಳಲ್ಲಿ ಪರೀಕ್ಷೆ ತೆಗೆದುಕೊಳ್ಳುವ ಮಕ್ಕಳ ಸಂಖ್ಯೆ ಕಡಿಮೆ ಇದೆ. ಆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಬೇಕಾಗಿದೆ. ಮಕ್ಕಳಿಗೆ ವಿಜ್ಞಾನ ಮತ್ತಿತರ ಪಠ್ಯ ಬೋಧನೆ ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ವರದಿ ಪಡೆಯಲಾಗುತ್ತಿದೆ. ಕೆಲವು ಭಾಗದಲ್ಲಿ ಶಿಕ್ಷಕರ ಕೊರತೆಯಿದೆ. ಇತ್ತೀಚಿನ ವರ್ಷಗಳಲ್ಲಿ
ಎಸ್​ಎಸ್​ಎಲ್​ಸಿ ಪರೀಕ್ಷೆ ತೆಗೆದುಕೊಳ್ಳುವ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಸರಿಯಾದ ಶಿಕ್ಷಣದ ವ್ಯವಸ್ಥೆ ಇಲ್ಲ. ಅದನ್ನು ಸರಿ ಮಾಡುವ ಕೆಲಸವನ್ನು ಮಾಡಲಾಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ: ವೀರಗಾಸೆ ಕಲೆಗೆ ಅಪಮಾನವಾಗುವ ದೃಶ್ಯಗಳನ್ನು ತೆಗೆಯಿರಿ: ಸಚಿವ ಸುನಿಲ್ ಕುಮಾರ್

ರಾಜ್ಯವನ್ನು ಆಳಿದ ನಮ್ಮ ಮಹಾರಾಜರ ಆಡಳಿತ ಬಗ್ಗೆ ಶಿಕ್ಷಣದಲ್ಲಿ ಏನೂ ಇಲ್ಲ. ಮೆಕಾಲೆ ಶಿಕ್ಷಣದಿಂದ ಆಡಳಿತ ಕಲಿತುಕೊಂಡೆವು. ಸಾವಿರಾರು ರಾಜರು ಜನರ ಅಭಿವೃದ್ಧಿಗಾಗಿ ಕೆಲಸ ಮಾಡಿದ್ದರು. ಆದರೂ ಪಠ್ಯಪುಸ್ತಕಗಳಲ್ಲಿ ಈ ಮಾಹಿತಿ ಇರಲಿಲ್ಲ. 2013ರಲ್ಲಿ ಪಠ್ಯ ಪರಿಷ್ಕರಣೆ ಮಾಡಲಾಯಿತು. ಆಗಲೂ ಟಿಪ್ಪು ಸುಲ್ತಾನ್ ವೈಭವೀಕರಿಸಲಾಯಿತು. ಕೆಂಪೇಗೌಡರು. ಮೈಸೂರು ರಾಜರ ಇತಿಹಾಸವನ್ನು ತೆಗೆಯಲಾಗಿತ್ತು. ರಾಜರು ವೈಜ್ಞಾನಿಕ ಅಭಿವೃದ್ಧಿಗಳನ್ನು ಮಾಡಿದ್ದರು. ಜನರಿಗೆ ನಿಜವಾದ ಇತಿಹಾಸ ಹೇಳಬೇಕಾಗಿದೆ ಎಂದರು.

ಬೆಂಗಳೂರಿನಲ್ಲಿ ಕೆಂಪೇಗೌಡ ಪ್ರತಿಮೆ ಲೋಕಾರ್ಪಣೆ ಹಿನ್ನೆಲೆಯಲ್ಲಿ ಕೊಡಗಿನಲ್ಲೂ ಕೂಡ ಮೃತ್ತಿಕೆ ಸಂಗ್ರಹಕ್ಕೆ ಸಚಿವ ಬಿ.ಸಿ.ನಾಗೇಶ್ ಚಾಲನೆ ‌ನೀಡಿದರು. ಶಾಸಕರಾದ ಅಪ್ಪಚ್ಚು ರಂಜನ್ ಮತ್ತು ಕೆ.ಜಿ ಬೋಪಯ್ಯ ಸಚಿವರಿಗೆ ಮೃತ್ತಿಕೆ ಹಸ್ತಾಂತರಿಸಿದರು.

ಜಿಲ್ಲಾಧಿಕಾರಿ ಕಚೇರಿ ಬಳಿ ಮೃತ್ತಿಕೆ ಸಂಗ್ರಹಕ್ಕೆ ಚಾಲನೆ ನೀಡಿದ ನಂತರ ನಗರದ ಪ್ರಮುಖ ರಸ್ತೆಗಳ ಮೂಲಕ ಜನರಲ್ ತಿಮ್ಮಯ್ಯ ವೃತ್ತದವರೆಗೆ ಮೆರವಣಿಗೆ ಮಾಡಲಾಯಿತು. ಅಲ್ಲಿಂದ ಜಿಲ್ಲೆಯ ವಿವಿಧ ಗ್ರಾಮಗಳಿಗೆ ತೆರಳಿದ ಮೆರವಣಿಗೆ ಮುಂದಕ್ಕೆ ಸಾಗಿತ್ತು.

ಇದನ್ನೂ ಓದಿ: ಸೆಗಣಿ ಎರಚಾಡುತ್ತ ಹಬ್ಬ ಆಚರಣೆ.. ಗುಮ್ಮಟಾಪುರದಲ್ಲಿ ವಿಶೇಷ ಗೋರೆಹಬ್ಬ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.