ETV Bharat / state

ಕಲಬುರಗಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ; ನಾಡಿನ ಒಳಿತಿಗೆ ನಾರಿಯರ ಪ್ರಾರ್ಥನೆ - ಕಲಬುರಗಿಯಲ್ಲಿ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ

ಸಮೃದ್ಧಿ, ಏಳಿಗೆ ಹಾಗೂ ಸಂಪತ್ತಿನ ಸಂಕೇತವಾದ ವರಮಹಾಲಕ್ಷ್ಮಿ ಮೂರ್ತಿಗೆ ಮಹಿಳೆಯರು ಹೂವು, ಹಣ್ಣಿನ ನೈವೇದ್ಯ ಅರ್ಪಿಸಿದರು. ನಂತರ ಸುಮಂಗಲಿಯರೆಲ್ಲ ಅರಿಶಿಣ-ಕುಂಕುಮ ವಿನಿಮಯ ಮಾಡಿಕೊಂಡು ನಾಡಿಗೆ ಒಳಿತಾಗಲಿ ಎಂದು ಪ್ರಾರ್ಥಿಸಿದರು..

varamahalakshmi-festival-celebrated-in-kalaburagi
ಕಲಬುರಗಿಯಲ್ಲಿ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ
author img

By

Published : Aug 20, 2021, 3:26 PM IST

ಕಲಬುರಗಿ : ಶ್ರಾವಣ ಮಾಸದ 2ನೇ ಶುಕ್ರವಾರದಂದು ಆಚರಿಸುವ ವರಮಹಾಲಕ್ಷ್ಮಿ ಹಬ್ಬವನ್ನು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಅತ್ಯಂತ ಸಡಗರ, ಸಂಭ್ರಮದಿಂದ ಆಚರಣೆ ಮಾಡಲಾಗಿದೆ.

ನಗರದ ಪ್ರತಿ ಮನೆಗಳಲ್ಲಿಯೂ ತಾಯಿ ವರಮಹಾಲಕ್ಷ್ಮಿಯ ವೈಭವ ಜೋರಾಗಿದೆ. ವಿಶೇಷವಾಗಿ ಮಹಾಲಕ್ಷ್ಮಿನಗರದ ಲಕ್ಷ್ಮಿಕಾಂತ್ ತಡಕಲ್ ಮನೆಯಲ್ಲಿ ಇಡೀ ಬಡಾವಣೆಯ ಮಹಿಳೆಯರೆಲ್ಲ ಸೇರಿ ವಿಶೇಷವಾಗಿ ದೇವಿಗೆ ಅಲಂಕಾರ ಮಾಡಿ ಪೂಜೆ ಸಲ್ಲಿಸಿದ್ದಾರೆ. ಜೊತೆಗೆ ಮುತ್ತೈದೆಯರಿಗೆ ಉಡಿ ತುಂಬುವ ಮೂಲಕ ಪಾರಂಪರಿಕವಾಗಿ ನಡೆದುಕೊಂಡು ಬಂದಿರುವ ಹಬ್ಬಗಳನ್ನು ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡಿದರು.

ಕಲಬುರಗಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ..

ಸಮೃದ್ಧಿ, ಏಳಿಗೆ ಹಾಗೂ ಸಂಪತ್ತಿನ ಸಂಕೇತವಾದ ವರಮಹಾಲಕ್ಷ್ಮಿ ಮೂರ್ತಿಗೆ ಮಹಿಳೆಯರು ಹೂವು, ಹಣ್ಣಿನ ನೈವೇದ್ಯ ಅರ್ಪಿಸಿದರು. ನಂತರ ಸುಮಂಗಲಿಯರೆಲ್ಲ ಅರಿಶಿಣ-ಕುಂಕುಮ ವಿನಿಮಯ ಮಾಡಿಕೊಂಡು ನಾಡಿಗೆ ಒಳಿತಾಗಲಿ ಎಂದು ಪ್ರಾರ್ಥಿಸಿದರು.

ಓದಿ: ಡಿ ದೇವರಾಜ ಅರಸು ನಮಗೆ ಆದರ್ಶ.. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಅವರ ಕನಸು.. ಸಿಎಂ ಬೊಮ್ಮಾಯಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.