ಕಲಬುರಗಿ: ಕೊರೊನಾ ಸೋಂಕಿನಿಂದ ಜಿಲ್ಲೆಯ ಮತ್ತಿಬ್ಬರು ಸಾವನ್ನಪ್ಪಿರುವ ಬಗ್ಗೆ ವೈದ್ಯಕೀಯ ವರದಿಯಿಂದ ದೃಢಪಟ್ಟಿದೆ. ಇದರಿಂದ ಕೊರೊನಾ ಸೋಂಕಿಗೆ ಜಿಲ್ಲೆಯಲ್ಲಿ ಮೃತರಾದವರ ಸಂಖ್ಯೆ 222ಕ್ಕೆ ಏರಿಕೆಯಾಗಿದೆ.
ಜೇವರ್ಗಿ ತಾಲೂಕಿನ ಕರಕನಳ್ಳಿ ಗ್ರಾಮದ 62 ವರ್ಷದ ವೃದ್ಧ, ಕಲಬುರಗಿಯ ಆದರ್ಶ ನಗರದ 45 ವರ್ಷದ ವ್ಯಕ್ತಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ರಕ್ತದೊತ್ತಡ, ಮದುಮೇಹ ಇತ್ಯಾದಿ ರೋಗದಿಂದ ಬಳಲುತ್ತಿದ್ದ ಇವರಿಗೆ ಕೋವಿಡ್ ಸೋಂಕು ತಗುಲಿ ತೀವ್ರ ಉಸಿರಾಟ ಸಮಸ್ಯಯಿಂದ ಮೃತರಾಗಿದ್ದಾರೆಂದು ವರದಿ ದೃಢಪಡಿಸಿದೆ.
ಇನ್ನು ಜಿಲ್ಲೆಯಲ್ಲಿ ಹೊಸದಾಗಿ 226 ಜನರಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 12,547ಕ್ಕೆ ಏರಿಕೆಯಾಗಿದೆ. ಗುಣಮುಖರಾದವರ ಸಂಖ್ಯೆ ಹತ್ತು ಸಾವಿರದ ಗಡಿ ದಾಟಿದೆ. ನಿನ್ನೆ 237 ಜನರು ಸೇರಿ 10,077 ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ 2,248 ಪ್ರಕರಣಗಳ ಸಕ್ರಿಯವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.